Mercedes EQB And GLB Launch : ಭಾರತದ ಮಾರುಕಟ್ಟೆಗೆ ಬಂದ ಮರ್ಸಡೀಸ್‌ ನ ಎರಡು SUV ಕಾರುಗಳು

ಜರ್ಮನಿಯ ಪ್ರಸಿದ್ಧ ಕಾರು ತಯಾರಕರಾದ ಮರ್ಸಡೀಸ್‌-ಬೆಂಜ್‌ ಎರಡು SUV ಗಳನ್ನು ಭಾರತದ ಮಾರುಕಟ್ಟೆಗೆ ಡಿಸೆಂಬರ್‌ 2 ರಂದು ಪರಿಚಯಿಸಿದೆ. ಅದು ಇಲೆಕ್ಟ್ರಿಕ್‌ SUV ಆದ EQB ಮತ್ತು ICE ಆವೃತ್ತಿಯ GLB ಕಾರುಗಳನ್ನು (Mercedes EQB And GLB Launch) ಬಿಡುಗಡೆ ಮಾಡಿದೆ. ಮರ್ಸಡೀಸ್‌, ಎಲೆಕ್ಟ್ರಿಕ್‌, ಪೆಟ್ರೋಲ್‌ ಮತ್ತು ಡೀಸೆಲ್‌ ಆಯ್ಕೆಗಳಿರುವ ಅದೇ ಮಾದರಿಯ 12ನೇ ಮತ್ತು 13ನೇ SUV ಗಳನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಇದು ಏಳು ಆಸನಗಳಿರುವ ಐಷಾರಾಮಿ SUV ಕಾರಾಗಿದೆ. ಮಸರ್ಡೀಸ್‌ –ಬೆಂಜ್‌ GLBಯ ಬೆಲೆಯನ್ನು 63.8 ರಿಂದ 69.8 ಲಕ್ಷಕ್ಕೆ ನಿಗದಿಪಡಿಸಿದೆ. ಮತ್ತು ಸಂಪೂರ್ಣ ಲೋಡ್‌ ಆಗಿರುವ ಇಲೆಕ್ಟ್ರಿಕ್‌ SUV EQBಯನ್ನು 74.5 ಲಕ್ಷಕ್ಕೆ ಬಿಡುಗಡೆ ಮಾಡಿದೆ. ಈ ಎರಡೂ ಬೆಲೆಗಳು ಎಕ್ಸ್‌ ಶೋ ರೂಂ ಬೆಲೆಗಳಾಗಿವೆ.

ಮಸರ್ಡೀಸ್‌ ಬೆಂಜ್‌ GLB :
ಮರ್ಸಡೀಸ್‌ ಬೆಂಜ್‌ GLB ಅನ್ನು ಮೂರು ಟ್ರಿಮ್‌ಗಳಲ್ಲಿ ಬಿಡುಗಡೆಮಾಡಿದೆ. ಅವುಗಳೆಂದರೆ 200, 200d ಮತ್ತು 200d 4ಮೆಟಿಕ್‌ ಆಗಿದೆ. ಮೂರು ಸಾಲಿನ SUV 1.3 ಲೀಟರ್‌ ಟರ್ಬೋ–ಪೆಟ್ರೋಲ್‌ ಇಂಜಿನ್‌ ಮತ್ತು 2.0 ಲೀಟರ್‌ ಡೀಸೆಲ್‌ ಇಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. 1.3 ಲೀಟರ್‌ ಟರ್ಬೋ–ಪೆಟ್ರೋಲ್‌ ಇಂಜಿನ್‌ ಅನ್ನು ಸೆವೆನ್‌ ಸ್ಪೀಡ್‌ ಆಟೋಮೆಟಿಕ್‌ ಗೇರ್‌ ಬಾಕ್ಸ್‌ ಮತ್ತು 2.0 ಲೀಟರ್‌ ಡೀಸೆಲ್‌ ಇಂಜಿನ್‌ ಅನ್ನು ಏಟ್‌ ಸ್ಪೀಡ್‌ ಆಟೋಮೆಟಿಕ್‌ ಗೇರ್‌ ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ.

ವೈಶಿಷ್ಟ್ಯಗಳ ವಿಷಯದಲ್ಲಿ, GLB ಟು–ಪೀಸ್‌ LED ಟೈಲ್ ಲೈಟ್‌ಗಳು, ಸ್ಕ್ವೇರ್ಡ್ LED ಹೆಡ್‌ಲ್ಯಾಂಪ್‌ಗಳು, ಪನೋರಮಿಕ್ ಸನ್‌ರೂಫ್, ಏಳು ಏರ್‌ಬ್ಯಾಗ್‌ಗಳು, ಸ್ವಯಂ ಚಾಲಿತ ಮುಂಭಾಗದ ಸೀಟುಗಳು ಮತ್ತು ಎರಡು 10.25-ಇಂಚಿನ ಪರದೆಗಳು ಇನ್‌ಸ್ಟ್ರುಮೆಂಟ್ ಕನ್ಸೋಲ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಗಳನ್ನು ಹೊಂದಿದೆ. GLB ಯು 8 ವರ್ಷಗಳ ಎಂಜಿನ್ ಟ್ರಾನ್ಸ್ಮಿಷನ್ ವಾರಂಟಿಯನ್ನು ಹೊಂದಿದೆ.

ಮಸರ್ಡೀಸ್‌ ಬೆಂಜ್‌ EQB:
ಫುಲ್‌ ಇಲೆಕ್ಟ್ರಿಕ್‌ EQB 300 4MATIC ಅನ್ನು 74.5 ಲಕ್ಷ ರೂ.ಗಳಿಗೆ ಬಿಡುಗಡೆ ಮಾಡಿದೆ. ಇದು ಸ್ವೆಪ್‌ಬ್ಯಾಕ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಸ್ಪಿಟ್ ಎಲ್‌ಇಡಿ ಟೈಲ್ ಲೈಟ್‌ಗಳು, ಬ್ಲಾಂಕ್ಡ್-ಆಫ್ ಗ್ರಿಲ್, ಚಾಲಿತ ಟೈಲ್‌ಗೇಟ್, 18-ಇಂಚಿನ ಮಿಶ್ರಲೋಹದ ಚಕ್ರಗಳು, ವೈರ್‌ಲೆಸ್ ಚಾರ್ಜಿಂಗ್ ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಮತ್ತು ಏಂಬಿಯಂಟ್‌ ಲೈಟಿಂಗ್‌ ಅನ್ನು ಹೊಂದಿದೆ. ಮಸರ್ಡೀಸ್‌ ಬೆಂಜ್‌ EQB ಯು 225 bhp ಮತ್ತು 390 Nm ಟಾರ್ಕ್ ಅನ್ನು ಉತ್ಪಾದಿಸುವ 66.4 Wh ಬ್ಯಾಟರಿ ಪ್ಯಾಕ್‌ ನೊಂದಿಗೆ ಬರಲಿದೆ. ಇದು AC ಮತ್ತು DC ಚಾರ್ಜಿಂಗ್‌ ಎರಡನ್ನೂ ಬೆಂಬಲಿಸುತ್ತದೆ.

ಎರಡೂ SUV ಗಳು ಬಹುಮುಖ ವೈಶಿಷ್ಟ್ಯಗಳು, ವಿಶಾಲವಾದ ಮತ್ತು ಹೆಚ್ಚಿನ ಸ್ಥಳಾವಕಾಶ ಮತ್ತು ಜೋಡಿ ಸೀಟುಗಳಿದ್ದು ಮಧ್ಯಮ ಕುಟುಂಬಗಳಿಗೆ , ಯುವಜನರಿಗೆ ಅಥವಾ ಕಾರಿನ ಕ್ರೇಜ್‌ ಇರುವವರಿಗೆ ಸೂಕ್ತವಾಗಿದೆ, ಎಂದು ಮರ್ಸಡೀಸ್‌ ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಮಾರ್ಟಿನ್ ಶ್ವೆಂಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Toyota Innova Hycross : ಹೊಸ ತಲೆಮಾರಿನ ಕಾರು : ಟೊಯೊಟಾ ಇನ್ನೋವಾ ಹೈಕ್ರಾಸ್‌ ಅನಾವರಣ

ಇದನ್ನೂ ಓದಿ: Upcoming SUVs : ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ 6 SUV ಕಾರುಗಳು

(Mercedes EQB And GLB Launch. EQB Electric and GLB SUV models in India)

Comments are closed.