India tour of Banglaesh: ನಾಳೆ ಭಾರತ Vs ಬಾಂಗ್ಲಾ ಮೊದಲ ಏಕದಿನ: ಶಮಿ ಔಟ್, ಉಮ್ರಾನ್ ಇನ್; ಇಲ್ಲಿದೆ ಮ್ಯಾಚ್ ಡೀಟೇಲ್ಸ್

ಢಾಕಾ:(India tour of Banglaesh) ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ (India Vs Bangladesh ODI series) ಮೊದಲ ಪಂದ್ಯ ನಾಳೆ (ಭಾನುವಾರ, ಡಿಸೆಂಬರ್ 04) ಮೀರ್’ಪುರ್’ನ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

(India tour of Banglaesh)ಸರಣಿ ಆರಂಭಕ್ಕೂ ಮೊದಲೇ ಟೀಮ್ ಇಂಡಿಯಾಗೆ ಆಘಾತ ಎದುರಾಗಿದ್ದು, ಅನುಭವಿ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ (Mohammad Shami) ಭುಜದ ನೋವಿನ ಕಾರಣ ಏಕದಿನ ಸರಣಿಯಿಂದ ಹೊರ ಬಿದ್ದಿದ್ದಾರೆ. ಶಮಿ ಬದಲು ಜಮ್ಮು-ಕಾಶ್ಮೀರ ಎಕ್ಸ್’ಪ್ರೆಸ್ ಉಮ್ರಾನ್ ಮಲಿಕ್ (Umran Malik) ಅವರನ್ನು ಟೀಮ್ ಇಂಡಿಯಾಗೆ ಸೇರಿಸಿಕೊಳ್ಳಲಾಗಿದೆ.

ತಮ್ಮ ಗಾಯದ ಬಗ್ಗೆ ಟ್ವಿಟರ್’ನಲ್ಲಿ ಮಾಹಿತಿ ನೀಡಿರುವ ಮೊಹಮ್ಮದ್ ಶಮಿ, ಚಿಕಿತ್ಸೆ ಪಡೆಯುತ್ತಿರುವ ಕೆಲ ಚಿತ್ರಗಳನ್ನೂ ಪ್ರಕಟಿಸಿದ್ದಾರೆ. ಮೂಲಗಳ ಪ್ರಕಾರ ಶಮಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಅಲಭ್ಯರಾಗಲಿದ್ದಾರೆ.

ಟಿ20 ವಿಶ್ವಕಪ್ ನಂತರ ಕ್ರಿಕೆಟ್’ನಿಂದ ವಿರಾಮ ಪಡೆದಿದ್ದ ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್ ರಾಹುಲ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯ ಮೂಲಕ ಟೀಮ್ ಇಂಡಿಯಾಗೆ ಮರಳಿದ್ದಾರೆ. ಬಾಂಗ್ಲಾ ಪ್ರವಾಸ ಏಕದಿನ ಹಾಗೂ ಟೆಸ್ಟ್ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್’ನಲ್ಲಿ ನೇರಪ್ರಸಾರಗೊಳ್ಳಲಿವೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಭಾರತದ ಪರಿಷ್ಕೃತ ತಂಡ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ದೀಪಕ್ ಚಹರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಕುಲ್ದೀಪ್ ಸೇನ್, ಶಹಬಾದ್ ಅಹ್ಮದ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್.

ಇದನ್ನೂ ಓದಿ:Ranji Trophy Karnataka : ಕರ್ನಾಟಕಕ್ಕೆ ಸರ್ವಿಸಸ್ ಮೊದಲ ಎದುರಾಳಿ : ಮೊದಲೆರಡು ಪಂದ್ಯಗಳಿಗೆ ಬೆಂಗಳೂರು ಆತಿಥ್ಯ

ಇದನ್ನೂ ಓದಿ:8 centuries in 10 matches: 10 ಇನ್ನಿಂಗ್ಸ್, 8 ಶತಕ; ರುತುರಾಜ್ ಗಾಯಕ್ವಾಡ್’ಗೆ ಸಿಗುತ್ತಾ ವರ್ಲ್ಡ್ ಕಪ್ ಟಿಕೆಟ್?

ಭಾರತ Vs ಬಾಂಗ್ಲಾದೇಶ ಮೊದಲ ಏಕದಿನ ಪಂದ್ಯ
ಪಂದ್ಯ ಆರಂಭ: ಬೆಳಗ್ಗೆ 11.30ಕ್ಕೆ
ಸ್ಥಳ: ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂ, ಮೀರ್’ಪುರ್
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ (Sony Sports Network)
ಲೈವ್ ಸ್ಟ್ರೀಮಿಂಗ್: ಸೋನಿ ಲೈವ್ (SonyLiv app)

India tour of Banglaesh: India Vs Bangladesh First ODI tomorrow: Shami out, Umran in; Here are the match details

Comments are closed.