Navratri Pre-booking Offer : ‘ನವರಾತ್ರಿ ಪ್ರೀ–ಬುಕಿಂಗ್‌’ ಕೊಡುಗೆ ನೀಡಿದ ಹೀರೋ ಮೋಟೋಕಾರ್ಪ್‌; ದ್ವಿಚಕ್ರ ವಾಹನ ಖರೀದಿದಾರರಿಗೆ ಸಿಹಿ ಸುದ್ದಿ

ಹಬ್ಬಗಳ ಸಂದರ್ಭದಲ್ಲಿ (Festival Season) ಹೊಸ ವಾಹನ ಖರೀದಿಸುವುದು ಸಾಮಾನ್ಯ. ಅದಕ್ಕಾಗಿ ಅನೇಕ ಕಂಪನಿಗಳು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಕೊಡುಗೆಗಳನ್ನು ನೀಡುತ್ತವೆ. ಹೀರೋ ಮೋಟೋಕಾರ್ಪ್‌ ನವರಾತ್ರಿ ಹಬ್ಬದ ಸಮಯದಲ್ಲಿ (Navratri 2022) ತನ್ನ ಸ್ಕೂಟರ್‌ಗಳ ಮಾರಾಟವನ್ನು ಹೆಚ್ಚಿಸಿಕೊಳ್ಳಲು ‘ನವರಾತ್ರಿ ಪ್ರೀ–ಬುಕಿಂಗ್‌’ ಕೊಡುಗೆಯ (Navratri Pre-booking Offer) ಅಡಿಯಲ್ಲಿ ಗ್ರಾಹಕರಿಗೆ ಪ್ರಯೋಜನಗಳನ್ನು ನೀಡುತ್ತಿದೆ. ಕಂಪನಿಯ ಪ್ರಕಾರ, ನವರಾತ್ರಿಯ ಪ್ರೀ–ಬುಕಿಂಗ್‌ ಕೊಡುಗೆಯು ಸೆಪ್ಟೆಂಬರ್‌ 25 ರವರೆಗೆ ಮಾಡಿದ ಬುಕಿಂಗ್‌ಗಳಿಗೆ ಅನ್ವಯವಾಗುತ್ತದೆ. ನವರಾತ್ರಿಯ ಉತ್ಸವವು ಸೆಪ್ಟೆಂಬರ್‌ 26 ರಿಂದ ಪ್ರಾರಂಭವಾಗಿ 9 ದಿನಗಳ ಕಾಲ ನಡೆಯಲಿದೆ. ಪ್ರೀ–ಬುಕಿಂಗ್‌ ಆಫರ್‌ನ ಅಡಿಯಲ್ಲಿ ಮಾಡಿದ ಮೋಟಾರ್‌ ಸೈಕಲ್‌ ಮತ್ತು ಸ್ಕೂಟರ್‌ ಬುಕಿಂಗ್‌ಗಳನ್ನು ಹೀರೋ ಮೋಟೋಕಾರ್ಪ್‌ ಸೆಪ್ಟೆಂಬರ್‌ 26 ರಿಂದ ಅಕ್ಟೋಬರ್‌ 5ರ ನಡುವೆ ತಲುಪಿಸಲಿದೆ.

ಇಷ್ಟೇ ಅಲ್ಲದೇ ಬುಕಿಂಗ್‌ ಮೊತ್ತವು 501 ರೂಪಾಯಿಗಳಿಗಿಂತ ಕಡಿಮೆಯಿದ್ದರೂ, ದ್ವಿಚಕ್ರ ವಾಹನವನ್ನು ಬುಕ್‌ ಮಾಡುವ ಪ್ರತಿಯೊಬ್ಬ ಗ್ರಾಹಕರಿಗೆ ಬೆಳ್ಳಿ ನಾಣ್ಯವನ್ನು ನೀಡುತ್ತಿದ್ದೇವೆ ಎಂದು ಹೀರೋ ಮೋಟೋಕಾರ್ಪ್‌ ಡೀಲರ್‌ಗಳು ತಿಳಿಸಿದ್ದಾರೆ. ಬುಕಿಂಗ್‌ ಮೊತ್ತವು 1,100 ರೂಪಾಯಿಗಳಾಗಿದ್ದರೆ, ಗ್ರಾಹಕರಿಗೆ 600 ರೂಪಾಯಿ ಬೆಲೆಯ ಬಿಡಿಭಾಗಗಳನ್ನು ನೀಡಲಾಗುತ್ತದೆ, ಎಂದು ಕಂಪನಿ ಹೇಳಿದೆ.

ಹೀರೋ ಮೋಟೋಕಾರ್ಪ್‌ನ ಪ್ರವೇಶ ಮಟ್ಟದ ದ್ವಿಚಕ್ರ ವಾಹನ ವಿಭಾಗವು ಕಳೆದ 12-ತಿಂಗಳ ಅವಧಿಯಲ್ಲಿ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯನ್ನು ಕಂಡಿದೆ. ಪ್ರವೇಶ ಮಟ್ಟದ ಮಾದರಿಗಳು ದ್ವಿಚಕ್ರ ವಾಹನಗಳ ಚಿಲ್ಲರೆ ಮಾರಾಟಕ್ಕೆ ಶೇಕಡಾ 75 ರಷ್ಟು ಕೊಡುಗೆ ನೀಡುತ್ತಿವೆ.

ಹೀರೋ ಮೋಟೋಕಾರ್ಪ್‌ ನ ಮೆಸ್ಟ್ರೋ ಎಡ್ಜ್‌, ಡೆಸ್ಟಿನಿ ಮತ್ತು ಪ್ಲೆಜರ್‌+ ನಂತಹ ಸ್ಕೂಟರ್‌ಗಳ ಮೇಲೆ 2,100 ರೂಪಾಯಿಗಳವರೆಗೆ ವಿನಿಮಯ ಕೊಡುಗೆಯನ್ನೂ ನೀಡಿದೆ.

ಕಂಪನಿಯು ತನ್ನ ದ್ವಿಚಕ್ರ ವಾಹನಗಳ ಬೆಲೆಗಳನ್ನು ಸೆಪ್ಟೆಂಬರ್ 22 ರಂದು 1,000 ರೂ.ವರೆಗೆ ಹೆಚ್ಚಿಸಿದೆ. “ವೆಚ್ಚದ ಹಣದುಬ್ಬರದ ಪರಿಣಾಮವನ್ನು ಭಾಗಶಃ ಸರಿದೂಗಿಸಲು ಬೆಲೆ ಪರಿಷ್ಕರಣೆ ಅಗತ್ಯವಾಗಿದೆ” ಎಂದು ಅದು ಹೇಳಿದೆ.

ಇದನ್ನೂ ಓದಿ : IRCTC Vrat Thali : ಉಪವಾಸ ಮಾಡುವ ಭಕ್ತರಿಗೆ ಶುಭ ಸಮಾಚಾರ; ನವರಾತ್ರಿಗೆ ರೈಲುಗಳಲ್ಲಿ ವೃತ ಥಾಲಿಗಳು ಲಭ್ಯ

ಇದನ್ನೂ ಓದಿ : Heart Attack in Gym : ಹೃದಯಾಘಾತದ ಹಿಂದೆ ಇರುವ ಅಪಾಯಕಾರಿ ಅಂಶಗಳ ಬಗ್ಗೆ ನಿಮಗೆ ಗೊತ್ತಾ

(Navratri Pre-booking Offer on Hero motorcycles and scooters)

Comments are closed.