Man’s Dead Body :ಪತಿ ಮೃತದೇಹಕ್ಕೆ ಗಂಗಾಜಲ ಸಿಂಪಡಿಸಿ 18 ತಿಂಗಳುಗಳ ಕಾಲ ಮನೆಯಲ್ಲೇ ಇಟ್ಟುಕೊಂಡ ಪತ್ನಿ

ಕಾನ್ಪುರ : Man’s Dead Body : ವ್ಯಕ್ತಿ ನಿಧನರಾಗುತ್ತಿದ್ದಂತೆಯೇ ಅವರ ದೇಹವನ್ನು ಅಂತ್ಯಕ್ರಿಯೆ ಮೂಲಕ ಸಮಾಧಿ ಮಾಡಲಾಗುತ್ತದೆ. ಕೆಲವೊಂದು ಕಡೆಗಳಲ್ಲಿ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಿದ್ರೆ ಇನ್ನೂ ಕೆಲವರು ಹೂಳುವ ಮೂಲಕ ಸಮಾಧಿ ಮಾಡುತ್ತಾರೆ. ಆದರೆ ವಿಚಿತ್ರ ಏನೆಂದರೆ ಕಳೆದ ವರ್ಷ ನಿಧನರಾಗಿದ್ದ ಆದಾಯ ತೆರಿಗೆ ಇಲಾಖೆ ನೌಕರನನ್ನು ಆತನ ಕುಟುಂಬಸ್ಥರು ಈತ ಇನ್ನೂ ಕೋಮಾದಲ್ಲಿದ್ದಾನೆ ಎಂದು ಭಾವಿಸಿ ಬರೋಬ್ಬರಿ 18 ತಿಂಗಳುಗಳ ಶವವನ್ನು ಮನೆಯಲ್ಲಿಯೇ ಇರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯ ಪತ್ನಿಯು ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತಿದ್ದು ಪ್ರತಿ ದಿನ ಕೊಳೆತ ಮೃತದೇಹಕ್ಕೆ ಗಂಗಾ ಜಲವನ್ನು ಸಿಂಪಡಿಸುತ್ತಿದ್ದಳು ಎನ್ನಲಾಗಿದೆ. ಈ ರೀತಿ ಗಂಗಾಜಲವನ್ನು ಪ್ರೋಕ್ಷಣೆ ಮಾಡಿದಲ್ಲಿ ತನ್ನ ಪತಿ ಕೋಮಾದಿಂದ ಸಹಜ ಸ್ಥಿತಿಗೆ ಬರುತ್ತಾರೆ ಎಂದು ಈಕೆ ನಂಬಿದ್ದಳು ಎನ್ನಲಾಗಿದೆ.


2021ರ ಏಪ್ರಿಲ್​ 22ರಂದು ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಕಾನ್ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದರು ಎಂದು ಮರಣ ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವಿಮಲೇಶ್​ ದೀಕ್ಷಿತ್​ ಕಳೆದ ವರ್ಷದ ಏಪ್ರಿಲ್​ನಲ್ಲಿ ನಿಧನರಾದರು. ಆದರೆ ಅವರಿನ್ನೂ ಕೋಮಾದಲ್ಲಿಯೇ ಇದ್ದರು ಎಂದು ನಂಬಿಕೊಂಡಿದ್ದ ಕುಟುಂಬಸ್ಥರು ವಿಮಲೇಶ್​ರ ಅಂತಿಮ ವಿಧಿ ವಿಧಾನವನ್ನು ಮಾಡಲು ಇಚ್ಛಿಸಲಿಲ್ಲ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಅಲೋಕ್​ ರಂಜನ್​ ಹೇಳಿದ್ದಾರೆ.


ಈ ಬಗ್ಗೆ ಕಾನ್ಪುರದ ಆದಾಯ ತೆರಿಗೆ ಅಧಿಕಾರಿಗಳು ನನಗೆ ಮಾಹಿತಿ ನೀಡಿದರು. ಅವರ ಕುಟುಂಬದ ಪಿಂಚಣಿ ಫೈಲ್​ಗಳು ಒಂದಿಂಚೂ ಚಲಿಸದ ಕಾರಣ ಈ ಬಗ್ಗೆ ತನಿಖೆ ನಡೆಸುವಂತೆ ವಿನಂತಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವು ಕಾನ್ಪುರ ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್​ ಜೊತೆಯಲ್ಲಿ ದೀಕ್ಷಿತ್​​ ಮನೆಗೆ ತಲುಪಿದ ಸಂದರ್ಭದಲ್ಲಿ ಅವರ ಕುಟುಂಬಸ್ಥರು ದೀಕ್ಷಿತ್​ ಇನ್ನೂ ಜೀವಂತವಾಗಿದ್ದಾರೆ ಹಾಗೂ ಅವರು ಕೋಮಾದಲ್ಲಿದ್ದಾರೆ ಎಂದು ವಾದಿಸಿದ್ದಾರೆ ಎಂದು ಅಲೋಕ್​ ರಂಜನ್​ ತಿಳಿಸಿದ್ದಾರೆ .


ಸಾಕಷ್ಟು ಮನವೊಲಿಕೆಯ ಬಳಿಕ ಕುಟುಂಬ ಸದಸ್ಯರು ಶವವನ್ನು ಲಾಲಾ ಲಜಪತ್​ ರಾಯ್​ ಆಸ್ಪತ್ರೆಗೆ ಕೊಂಡೊಯ್ಯಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೀಕ್ಷಿತ್​ ಕುಟುಂಬಸ್ಥರು ಅವಕಾಶ ಮಾಡಿಕೊಟ್ಟರು. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ದೀಕ್ಷಿತ್​ 18 ತಿಂಗಳ ಹಿಂದೆಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.ಈ ವಿಷಯವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಲು ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ ಹಾಗೂ ಸಂಶೋಧನೆಯ ವಿವರವನ್ನು ಆದಷ್ಟು ಬೇಗ ನೀಡುವಂತೆ ಸೂಚನೆ ನೀಡಲಾಗಿದೆ.


ಮೃತದೇಹ ತೀರಾ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ಅವರ ಕುಟುಂಬದವರು ತಮ್ಮ ನೆರೆಹೊರೆಯವರಿಗೂ ತಿಳಿಸಿದ್ದರು. ಅವರ ಪತ್ನಿ ಮಾನಸಿಕವಾಗಿ ಅಸ್ಥಿರವಾಗಿರುವಂತೆ ತೋರುತ್ತಿದೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ : Rohit Sharma World Record : ಆಸೀಸ್ ವಿರುದ್ಧ ಸಿಕ್ಸರ್‌ಗಳ ಸುರಿಮಳೆ.. ಅಮೋಘ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ : Rohit Sharma World Record: ದಾಖಲೆಯ ಹೊಸ್ತಿಲ್ಲಿ ರೋಹಿತ್ ಶರ್ಮಾ.. ಇನ್ನೊಂದು ಸಿಕ್ಸರ್ ಬಾರಿಸಿದರೆ ಈ ವಿಶ್ವದಾಖಲೆ ನಂದೇ

Kanpur Family Sprinkles ‘Gangajal’ on Man’s Dead Body for 18 Months at Home Thinking He is in Coma

Comments are closed.