New Cars Price : ಜನವರಿ 2023ರಿಂದ ಈ ಕಂಪನಿಗಳ ಹೊಸ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಕಳೆದೆರಡು ವರ್ಷಗಳಲ್ಲಿ, ಕಾರು (Car) ಗಳ ಬೆಲೆ (Price) ಹಲವಾರು ಬಾರಿ ಹೆಚ್ಚಾಗಿದೆ. ಹೆಚ್ಚಿನ ಕಾರು ತಯಾರಕರು (Car Makers) ಜನವರಿಯಿಂದ ಬೆಲೆಗಳನ್ನು ಏರಿಸುತ್ತಾರೆ. 2023 ಕೂಡಾ ಇದಕ್ಕೆ ಹೊರತಾಗಿಲ್ಲ. ಕಾರಣವೇನೆಂದರೆ ಸರಕುಗಳ ಬೆಲೆಗಳು ಮತ್ತು ಸಾರಿಗೆ ವೆಚ್ಚಗಳಲ್ಲಾದ ಹೆಚ್ಚಳ ಮತ್ತು ಮುಂಬರುವ RDE (ರಿಯಲ್ ಡ್ರೈವಿಂಗ್ ಎಮಿಷನ್ಸ್) ಮಾನದಂಡಗಳ ಪಾಲನೆಗೆ ಸಂಬಂಧಿಸಿದ ವೆಚ್ಚಗಳು ಅದರಲ್ಲಿ ಸೇರಿವೆ. ಅಕ್ಟೋಬರ್ 2023 ರಿಂದ 6-ಏರ್‌ಬ್ಯಾಗ್‌ಗಳು ಕಡ್ಡಾಯವಾಗಲಿದೆ, ಇದು ಕೂಡಾ ಕಾರುಗಳ ಬೆಲೆ ಹೆಚ್ಚಾಗಲು (New Cars Price) ಮತ್ತೊಂದು ಪ್ರಮುಖ ಅಂಶವಾಗಿದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಸರಕುಗಳ ಪೂರೈಕೆ ಸರಪಳಿ ಸಮಸ್ಯೆ ಕಡಿಮೆಯಾಗಿದೆ. ಆದರೆ ಹಣದುಬ್ಬರದ ಪರಿಣಾಮವು ಉಳಿದ ಸರಕುಗಳ ಬೆಲೆಗಳನ್ನು ಹೆಚ್ಚಿಸಿದೆ. ಇದು ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸಲ್ಪಡುತ್ತದೆ.

ಯಾವ ಕಂಪನಿಯ ಹೊಸ ಕಾರುಗಳ ಬೆಲೆ ಏರಿಲಿದೆ?
ಮಾರುತಿ ಈಗಾಗಾಲೇ ಜನವರಿ 2023ರಿಂದ ಬೆಲೆ ಹೆಚ್ಚಿಸಲಾಗುವುದು ಎಂದು ಘೋಷಿಸಿದೆ. ಬೆಲೆ ಏರಿಕೆಯು ದರ ನಿರ್ದಿಷ್ಟ ಮಾದರಿಯ ಕಾರುಗಳ ಮೇಲೆ ಬದಲಾಗುತ್ತದೆ. ಜನವರಿ 2023 ರಿಂದ ಟಾಟಾದ ICE ಮತ್ತು EV ಕಾರುಗಳ ಬೆಲೆಗಳು ಹೆಚ್ಚಾಗಲಿದೆ. ಟಾಟಾ ಕಂಪನಿಯು ಹೆಚ್ಚಿನ ಸರಕುಗಳ ಬೆಲೆಗಳಲ್ಲಾದ ಏರಿಕೆಯೇ ಇದಕ್ಕೆ ಕಾರಣ ಎಂದು ಹೇಳಿದೆ. ಬ್ಯಾಟರಿಯ ಬೆಲೆಗಳಲ್ಲಿ ಹೆಚ್ಚಳವಾಗಿರುವುದರಿಂದ ಟಾಟಾದ EV ಗಳ ಬೆಲೆಯೂ ಹೆಚ್ಚಾಗಲಿದೆ. ಕಿಯಾ ಇಂಡಿಯಾ ಜನವರಿಯ 2023 ರಿಂದ 50,000 ಗಳಷ್ಟು ಬೆಲೆಗಳನ್ನು ಹೆಚ್ಚಿಸುವುದಾಗಿ ಹೇಳಿದೆ. ಕಂಪನಿಯು ಹೇಳುವ ಪ್ರಕಾರ ಡಿಸೆಂಬರ್‌ 31 ರ ನಂತರ ಬುಕ್‌ ಮಾಡುವ ಎಲ್ಲಾ ಕಿಯಾ ಕಾರುಗಳಿಗೆ ಬೆಲೆ ಏರಿಕೆಯು ಅನ್ವಯವಾಗುತ್ತದೆ. ಪ್ರಸ್ತುತ ಕಿಯಾ, ಭಾರತದಲ್ಲಿ ಐದನೇ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿದೆ.

ಸಿಟ್ರೊಯೆನ್‌, ರೆನಾಲ್ಟ್‌ ಮತ್ತು ಜೀಪ್‌ ಎಲ್ಲಾ ಮೂರು ಕಾರು ತಯಾರಿಕಾ ಕಂಪನಿಗಳು ಮುಂಬರುವ 2023 ರಲ್ಲಿ ಕಾರುಗಳ ಬೆಲೆ ಏರಿಕೆಯಾಗಿಲಿದೆ ಎಂದು ಹೇಳಿದೆ. ರೆನಾಲ್ಟ್‌ನ ಇಂಡಿಯಾ ಪೋರ್ಟ್‌ಫೋಲಿಯೊ ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರುಗಳು ಬೆಲೆ ಏರಿಕೆಯ ವ್ಯಾಪ್ತಿಯಲ್ಲಿ ಬರಲಿವೆ. ಇನ್ನು ಜೀಪ್‌ ಕಂಪನಿಯು 2 ರಿಂದ 4 ಪ್ರತಿಶತದಷ್ಟು ಬೆಲೆಗಳನ್ನು ಹೆಚ್ಚಿಸುವುದಾಗಿ ಹೇಳಿದೆ. ಜೀಪ್ ಇಂಡಿಯಾ ಪೋರ್ಟ್‌ಪೋಲಿಯೋದಲ್ಲಿರುವ ಕಂಪಾಸ್, ರಾಂಗ್ಲರ್, ಮೆರಿಡಿಯನ್ ಮತ್ತು ಹೊಸದಾಗಿ ಬಿಡುಗಡೆಯಾದ ಗ್ರ್ಯಾಂಡ್ ಚೆರೋಕೀ ಗಳ ಬೆಲೆ ಏರಿಲಿದೆ. ಸಿಟ್ರೊಯೆನ್ C3 ಮತ್ತು C5 ಗಳ ಬೆಲೆಗಳನ್ನು 1.5 ರಿಂದ 2 ಪ್ರತಿಶತದಷ್ಟು ಹೆಚ್ಚಿಸಲಿದೆ. ಇದರ ಜೊತೆಗೆ ಮರ್ಸಿಡಿಸ್‌ ಬೆಂಜ್‌, ಆಡಿ ಗಳಂತಹ ಟಾಪ್‌–ಎಂಡ್‌ ಕಾರುಗಳ ಬೆಲೆ ಏರಿಸಲಿದೆ. ಇದು ಶೇಕಡಾ 1.7 ರಷ್ಟು ಬೆಲೆಗಳನ್ನು ಹೆಚ್ಚಿಸಲಿದೆ.

ಇದನ್ನೂ ಓದಿ : Hyundai December Discounts : ಡಿಸೆಂಬರ್‌ ತಿಂಗಳಿನಲ್ಲಿ ಭರ್ಜರಿ ಡಿಸ್ಕೌಂಟ್‌ ನೀಡಿದ ಹುಂಡೈ

ಇದನ್ನೂ ಓದಿ : Ducati DesertX : ಅಡ್ವೆಂಚರ್‌ ಪ್ರಿಯರ ಅಚ್ಚುಮೆಚ್ಚಿನ ಬೈಕ್‌ ಡುಕಾಟಿ ಈಗ ಡೆಸರ್ಟ್‌ ಎಕ್ಸ್‌ ಅನ್ನು ಪರಿಚಯಿಸಿದೆ

(New Cars Price Increase in January 2023 due to rising commodity prices, RDE emission norms, and new safety rules)

Comments are closed.