Amla Murabba Recipe:ನೆಲ್ಲಿಕಾಯಿ ಮುರಬ್ಬ ತಿಂದ್ರೆ ಹೆಚ್ಚುತ್ತೆ ರೋಗ ನಿರೋಧಕ ಶಕ್ತಿ

(Amla Murabba Recipe)ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಹಲವು ಹಣ್ಣುಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ಈ ನೆಲ್ಲಿಕಾಯಿಯು ಹೌದು ನೋಡಲು ಸಣ್ಣ ಗಾತ್ರದಲ್ಲಿ ಕಂಡರು ಇದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ನೆಲ್ಲಿಕಾಯಿಯಲ್ಲಿ ಕಬ್ಬಿಣದ ಅಂಶ, ಮೆಗ್ನೀಸಿಯಮ್‌ ಮತ್ತು ವಿಟಮಿನ್‌ ಬಿ ಸತ್ವಗಳು ಹೆಚ್ಚಿರುವುದರಿಂದ ಇದನ್ನು ತಿಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡುತ್ತದೆ. ಹಾಗಾಗಿ ಪ್ರತಿದಿನ ಒಂದೊಂದೆ ನೆಲ್ಲಿಕಾಯಿ ತಿನ್ನುವುದರಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ಬರಿ ನೆಲ್ಲಿಕಾಯಿ ತಿನ್ನಲು ಇಷ್ಟಪಡದವರು “ನೆಲ್ಲಿಕಾಯಿ ಮುರಬ್ಬ” ಮಾಡಿ ತಿಂದರೆ ಉತ್ತಮ. ನೆಲ್ಲಿಕಾಯಿ ಮುರಬ್ಬ ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Amla Murabba Recipe)ಬೇಕಾಗುವ ಸಾಮಾಗ್ರಿಗಳು:

  • ಕಂದು ಸಕ್ಕರೆ
  • ನೆಲ್ಲಿಕಾಯಿ
  • ಲವಂಗ
  • ಏಲಕ್ಕಿ
  • ದಾಲ್ಚಿನ್ನಿ

ಮಾಡುವ ವಿಧಾನ:
ಮೊದಲಿಗೆ ಇಡ್ಲಿ ಪಾತ್ರೆಯಲ್ಲಿ ನೆಲ್ಲಿಕಾಯಿ ಇಟ್ಟು ಬೇಯಿಸಬೇಕು ( ಸಣ್ಣ ನೆಲ್ಲಿಕಾಯಿಯನ್ನು ತೆಗೆದುಕೊಂಡರೆ ಹಾಗೆ ಪಾತ್ರೆಯಲ್ಲಿ ಬೇಯಿಸಬಹುದು) ನಂತರ ಪೋರ್ಕ್‌ ತೆಗೆದುಕೊಂಡು ನೆಲ್ಲಿಕಾಯಿಯ ಮೇಲೆ ಚುಚ್ಚಿಕೊಂಡು ಬೌಲ್ ನಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಬಾಣಲೆಗೆ ನೆಲ್ಲಿಕಾಯಿ ಹಾಕಿ ಅದಕ್ಕೆ ಕಂದು ಸಕ್ಕರೆ ಹಾಕಿಕೊಂಡು ಕರಗುವ ವರೆಗೂ ಸೌಟು ಆಡಿಸಬೇಕು. ಅನಂತರ ಅದಕ್ಕೆ ಲವಂಗ, ಏಲಕ್ಕಿ, ದಾಲ್ಚಿನ್ನಿ ಹಾಕಿ ಸೌಟನ್ನು ಆಡಿಸಬೇಕು ಮಿಶ್ರಣ ದಪ್ಪ ಹದಕ್ಕೆ ಬರುತ್ತಿದ್ದ ಹಾಗೆ ಗ್ಯಾಸ್‌ ಆಫ್‌ ಮಾಡಿಕೊಂಡರೆ ನಿಮ್ಮ ಆರೋಗ್ಯವನ್ನು ವೃದ್ಧಿಸುವ “ನೆಲ್ಲಿಕಾಯಿ ಮುರಬ್ಬ” ರೆಡಿ.

ಇದನ್ನೂ ಓದಿ:Ginger Chocolate Recipe:ಕೆಮ್ಮಿನಿಂದ ನಿಮ್ಮ ಮಕ್ಕಳು ನಿದ್ದೆ ಮಾಡ್ತಿಲ್ವಾ? ಹಾಗಾದ್ರೆ ಶುಂಠಿ ಚಾಕಲೇಟ್‌ ಮಾಡಿ ಕೊಡಿ

ಇದನ್ನೂ ಓದಿ:Winter And Sesame Seeds : ಚಳಿಗಾಲದಲ್ಲಿ ಎಳ್ಳನ್ನು ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…

ನೆಲ್ಲಿಕಾಯಿ

ನೆಲ್ಲಿಕಾಯಿಯನ್ನು ಸೇವನೆ ಮಾಡುವುದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅದರಲ್ಲೂ ಬೆಟ್ಟದ ನೆಲ್ಲಿಕಾಯಿ ಸೇವನೆ ಮಾಡಿದರೆ ಇನ್ನು ಉತ್ತಮ. ಹಿಂದಿನಿಂದಲೂ ಕೂಡ ನೆಲ್ಲಿಕಾಯಿಗೆ ಆಯುರ್ವೇದದಲ್ಲಿ ವಿಶೇಷ ಸ್ಥಾನವನ್ನು ಕೊಡಲಾಗಿದೆ. ಹಲವು ಆಯುರ್ವೇದದ ಔಷಧೀಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ ಅಂಶವನ್ನು ಹೊಂದಿರುವುದರಿಂದ ಇದನ್ನು ಸೇವನೆ ಮಾಡಿದರೆ ವಯಸ್ಸಾಗುವ ಲಕ್ಷಣವನ್ನು ದೂರ ಮಾಡುತ್ತದೆ. ನೆಲ್ಲಿಕಾಯಿ ತಿನ್ನುವುದರಿಂದ ಕೆಮ್ಮು , ಶೀತ ಮತ್ತು ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ. ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

Amla Murabba Recipe eat Amla Murabba increases immunity

Comments are closed.