ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ಮಾದರಿಯ ಕಾರುಗಳು ಲಗ್ಗೆ ಇಡುತ್ತಿವೆ. ಇದೀಗ ನಿಸ್ಸಾನ್ ಕಂಪೆನಿ ಹೊಸ ಕಾರನ್ನು (Nissan Magnite EZ-Shift AMT) ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ನಿಸ್ಸಾನ್ ಮ್ಯಾಗ್ನೈಟ್ EZ-Shift AMT ಕಾರು ಕೇವಲ 6.50 ಲಕ್ಷ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಎಸ್‌ಯುವಿ (SUV), ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ವಿಭಾಗಗಳಲ್ಲಿ ಮ್ಯಾಗ್ನೈಟ್ AMT ಅತ್ಯಂತ ಕಡಿಮೆ ಬೆಲೆಗೆ ಲಭಿಸುತ್ತಿರುವ AMT ಮಾದರಿ. ಈ ಕುರಿತು ಸ್ವತಃ ನಿಸ್ಸಾನ್ ಹೇಳಿಕೊಂಡಿದೆ. ಮಾರುತಿ, ಟಾಟಾ, ಹ್ಯುಂಡೈ ಕಂಪೆನಿಯ ಕಾರುಗಳಿಗೆ ಪ್ರಬಲ ಪೈಪೋಟಿಯನ್ನು ನೀಡಲಿದೆ.

ಇದೀಗ ಭಾರತದಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಮ್ಯಾಗ್ನೈಟ್ (Nissan Magnite EZ-Shift AMT) EZ-Shift AMT ಅನ್ ಕೇವಲ 6.50 ಲಕ್ಷ ರೂಪಾಯಿಗಳ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ನವೆಂಬರ್ 10 ರವರೆಗೆ ಕೇವಲ 11,000 ರೂ. ಟೋಕನ್ ಮೊತ್ತಕ್ಕೆ ಬುಕ್ ಮಾಡಬಹುದು.
ಇದನ್ನೂ ಓದಿ : ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಅಡ್ವೆಂಚರ್ ಹೊಸ ಬೈಕ್: ಮೊದಲ ಲುಕ್‌ಗೆ ಗ್ರಾಹಕರು ಫೀದಾ
ಮ್ಯಾಗ್ನೈಟ್ AMT ಅನ್ನು XE, XL, XV ಮತ್ತು XV ಪ್ರೀಮಿಯಂ ರೂಪಾಂತರ ಗಳಲ್ಲಿ ಕಂಪೆನೆಯು ಬಿಡುಗಡೆ ಮಾಡಿದೆ.ಮ್ಯಾಗ್ನೈಟ್ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. B4D 1.0-ಲೀಟರ್ NA ಪೆಟ್ರೋಲ್ (72PS ಮತ್ತು 96Nm) ಮತ್ತು HRAO 1.0-ಲೀಟರ್ ಟರ್ಬೊ ಪೆಟ್ರೋಲ್ (100PS ಮತ್ತು 160Nm/152Nm). AMT ಅನ್ನು NA ಪೆಟ್ರೋಲ್ ಆಯ್ಕೆಯಲ್ಲಿ ನೀಡಲಾಗುತ್ತದೆ.
ಇನ್ನು 5-ಸ್ಪೀಡ್ MT ಹೊಂದಿದೆ. ಟರ್ಬೊ ಪೆಟ್ರೋಲ್ 5-ಸ್ಪೀಡ್ MT ಮತ್ತು CVT ಆಯ್ಕೆಗಳನ್ನು ಒಳಗೊಂಡಿದೆ. ಮ್ಯಾಗ್ನೈಟ್ NA ಪೆಟ್ರೋಲ್ MT ಗಾಗಿ ARAI 19.35kmpl ಮೈಲೇಜ್ ನೀಡುತ್ತಿದ್ದರೆ, ಮ್ಯಾಗ್ನೈಟ್ NA ಪೆಟ್ರೋಲ್ AMT 19.70kmpl ಮೈಲೇಜ್ ನೀಡಲಿದೆ.
ಇದನ್ನೂ ಓದಿ : ಹೊಸ ಸ್ವಿಫ್ಟ್ ಅನಾವರಣಗೊಳಿಸಿದ ಮಾರುತಿ ಸುಜುಕಿ : ಅತ್ಯಂತ ಕಡಿಮೆ ಬೆಲೆ ಅತ್ಯಾಧುನಿಕ ತಂತ್ರಜ್ಞಾನ
ಇನ್ನು ನಿಸ್ಸಾನ್ ಮ್ಯಾಗ್ನೈಟ್ AMT ಕಾರು ಸದ್ಯ ಹೊಸ ನೀಲಿ ಮತ್ತು ಕಪ್ಪು ಡ್ಯುಯಲ್-ಟೋನ್ ಬಣ್ಣದ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಬರಲಿದೆ. SUV ವಾಹನ ಡೈನಾಮಿಕ್ ಕಂಟ್ರೋಲ್ (VDC) ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ (HSA) ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನಿಸ್ಸಾನ್ ಕಂಪೆನಿ ಈಗಾಗಲೇ ಹಲವಾರು ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ನಿಸ್ಸಾನ್ ಮ್ಯಾಗ್ನೆಟ್ ಉನ್ನತ ಶ್ರೇಣಿಯ ಸುರಕ್ಷತೆಯ ರೇಟಿಂಗ್ ಒಳಗೊಂಡಿದೆ. ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ತಂತ್ರಜ್ಞಾನವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಒಂದೇ ಚಾರ್ಜ್ 550ಕಿ.ಮೀ. ಮೈಲೇಜ್ : ಮಾರುತಿ ಸುಜುಕಿ EVX ಎಲೆಕ್ಟ್ರಿಕ್ SUV ಫೀಚರ್ಸ್ ಕೇಳಿದ್ರೆ ಸುಸ್ತಾಗೋ
ಇನ್ನು ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಕಾರನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಹೆ ನೀಡುತ್ತಿದೆ. ಎಸ್‌ಯುವಿ, ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ವಿಭಾಗಗಳಲ್ಲಿ ಅತ್ಯಂತ ಸುಲಭವಾಗಿ ಮತ್ತು ಕೈಗೆಟುಕುವ ಎಎಮ್‌ಟಿ ಕಾರು ಎನಿಸಿಕೊಂಡಿದೆ.
Nissan Magnite EZ-Shift AMT Launch price just 6.50 lakh in india