ಬೆಂಗಳೂರಲ್ಲಿ 4 ದಿನ ವಿದ್ಯುತ್‌ ಕಡಿತ : ಯಾವ ಏರಿಯಾದಲ್ಲಿ, ಯಾವ ದಿನ ಕರೆಂಟ್‌ ಇರಲ್ಲ ? ಇಲ್ಲಿದೆ ಸಂಪೂರ್ಣ ಮಾಹಿತಿ

ಗೃಹಲಕ್ಷ್ಮೀ ಜ್ಯೋತಿ ಯೋಜನೆ (Gruha Jyothi Yojana) ಜಾರಿಯ ಬೆನ್ನಲ್ಲೇ ಲೋಡ್‌ಶೆಡ್ಡಿಂಗ್‌ ಶುರುವಾಗಿದೆ. ಇಂದಿನ ನಾಲ್ಕು ದಿನಗಳ ಬೆಂಗಳೂರಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ (Bangalore Power Cut) ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು : ರಾಜ್ಯ ಸರಕಾರ ಗೃಹಜ್ಯೋತಿ ಯೋಜನೆಯನ್ನು(Gruha Jyothi Yojana) ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ರಾಜ್ಯದಲ್ಲಿ 200 ಯೂನಿಟ್‌ಗಿಂತ (200 Units Power Free)  ಕಡಿಮೆ ವಿದ್ಯುತ್‌ ಬಳಕೆ ಮಾಡುವವರಿಗೆ ವಿದ್ಯುತ್‌ ಉಚಿತವಾಗಿ ಇರಲಿದೆ. ಇದರ ಖುಷಿಯಲ್ಲಿದ್ಗ ಜನರಿಗೆ ಇದೀಗ ಲೋಡ್‌ ಶೆಡ್ಡಿಂಗ್‌ ಬರೆ ಬಿದ್ದಿದೆ.

ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ನಡುವಲ್ಲೇ ಬೆಂಗಳೂರಲ್ಲಿ ಇಂದಿನಿಂದ (ಅಕ್ಟೋಬರ್ 12) ಮುಂದಿನ ನಾಲ್ಕು ದಿನಗಳ ಕಾಲ ವಿದ್ಯುತ್‌ ಸರಬರಾಜಿನಲ್ಲಿ (Bangalore Power Cut) ವ್ಯತ್ಯಯವಾಗಲಿದೆ. ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಮತ್ತು ಬೆಸ್ಕಾಂ (BESCOM) ವಿದ್ಯುತ್‌ ನಿರ್ವಹಣಾ ದುರಸ್ಥಿ ಕಾಮಗಾರಿಯನ್ನು ಕೈಗೆತ್ತಿಕೊಂಡಿವೆ.

ವಿದ್ಯುತ್ ಸರಬರಾಜು ಕಂಪನಿಗಳು ನಿರ್ವಹಣಾ ಕಾಮಗಾರಿಯನ್ನು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಕೈಗೆತ್ತಿಕೊಳ್ಳಲಿವೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಪ್ರಮುಖವಾಗಿ ಲೈನ್‌ ಬದಲಾವಣೆ, ಓವರ್‌ಹೆಡ್‌ ನಿಂದ ಭೂಮಿಯ ಒಳಗೆ ಕೇಬಲ್‌ ಅಳವಡಿಕೆ, ಡಿಟಿಸಿ ರಚನೆ ನಿರ್ವಹಣೆ, ಮರದ ಟ್ರಿಮ್ಮಿಂಗ್‌, ಹದಗೆಟ್ಟ ಕೇಬಲ್‌ ಬದಲಾವಣೆ ಸೇರಿ ಹಲವು ಕಾಮಗಾರಿಯನ್ನು ನಡೆಸಲಾಗುತ್ತದೆ.

4 days power cut in Bangalore In which area on which day there is no electricity Here is the complete information
Image Credit to Original Source

ಇದನ್ನೂ ಓದಿ : ಮೀಸಲಾತಿ ಸಂಕಷ್ಟ: ಸದ್ಯಕ್ಕಿಲ್ಲ ಬಿಬಿಎಂಪಿ ಎಲೆಕ್ಷನ್

ಇಂದಿನಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರಿನ ಒಂದೊಂದು ಭಾಗದಲ್ಲಿ ವಿದ್ಯುತ್‌ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹಾಗಾದ್ರೆ ಬೆಂಗಳೂರಲ್ಲಿ ಯಾವ ದಿನ ಯಾವ ಏರಿಯಾದಲ್ಲಿ ವಿದ್ಯುತ್‌ ಕಡಿತವಾಗಲಿದೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಅಕ್ಟೋಬರ್ 12 ಗುರುವಾರ :
ಮೌನೇಶ್ವರ ಬಡಾವಣೆ, ಜಯನಗರ, , ಕಲಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್, ಬ್ಯಾಡರಹಳ್ಳಿ,ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ಬೋಜನಹಳ್ಳಿ, ಅಜ್ಜನನಹಳ್ಳಿ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ಅರುಣೋದಯ ಶಾಲೆ ರಸ್ತೆ, ದೊಡ್ಡಸೀಬಿ, ದುರ್ಗದಹಳ್ಳಿ, ತಿಪ್ಪನಹಳ್ಳಿ, ಬೋರಸಂದ್ರ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ಲಕ್ಷ್ಮಣ ನಗರ, ಸಂಜೀವಿನಿ ನಗರ, ವಿಘ್ನೇಶ್ವರ ನಗರ, ಹೆಗ್ಗನಹಳ್ಳಿ, ಸುಂಕದಕಟ್ಟೆ, ಹೊಯ್ಸಳ ನಗರ, ಪೈಪ್‌ಲೈನ್ ರಸ್ತೆ, ನೀಲಗಿರಿ ತೊಪ್ಪು, ಕಲ್ಲಶೆಟ್ಟಿಹಳ್ಳಿ, ಯತ್ತಪ್ಪನಹಟ್ಟಿ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತೆ 4000ರೂ.: ದಸರಾ, ದೀಪಾವಳಿಗೆ ಬಿಗ್‌ ಗಿಫ್ಟ್‌

ಅಕ್ಟೋಬರ್ 13 ಶುಕ್ರವಾರ :
ಹರಿರಾಮ್ ಅಲಿದಾಸ್ ಲೇಔಟ್, ಎಸ್‌ಎಸ್ ಹೈಟೆಕ್ ಆಸ್ಪತ್ರೆ, ಕುಂಟೇಗೌಡನಹಳ್ಳಿ, ಕಾಟವೀರನಹಳ್ಳಿ, ನವಣೆಬೋರನಹಳ್ಳಿ, ಬೋರಸಂದ್ರ, ಕಲ್ಲಶೆಟ್ಟಿಹಳ್ಳಿ, ಯತ್ತಪ್ಪನಹಟ್ಟಿ, ಕಲಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್ ಮತ್ತು ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದೊಡ್ಡಸೀಬಿ, ದುರ್ಗದಹಳ್ಳಿ, ತಿಪ್ಪನಹಳ್ಳಿ, ಅಜ್ಜಯ್ಯನಪ್ಪನಹಳ್ಳಿ, ಅಜ್ಜಯ್ಯನಪಾಲ್ ಬ್ಯಾಡರಹಳ್ಳಿ, ಸರಸ್ವತಿ ನಗರ, ವಿನಾಯಕ ಲೇಔಟ್, ಕನಕನಗರ, ಗಂಗಾಧರ ಲೇಔಟ್, ಸೆಂಟ್ರಲ್ ಎಕ್ಸೈಸ್ ಲೇಔಟ್, ಕೆಜಿಎಸ್ ಲೇಔಟ್, ಶೋಭಾ ಆಸ್ಪತ್ರೆ, ಯಲದಬಾಗಿ, ಹಾವಿನಹಾಳು.

4 days power cut in Bangalore In which area on which day there is no electricity Here is the complete information
Image Credit to Original Source

ಅಕ್ಟೋಬರ್ 14 ಶನಿವಾರ :
ಬಾಬು ಜಗಜೀವನ ನಗರ, ಶಂಕರಾನಂದ ಬಡಾವಣೆ, ಸಚಿನ್‌ ಲೇಔಟ್‌, ಗಂಗಮ್ಮ ಲೇಔಟ್‌, ಕಲ್ಲುಕೋಟೆ, ಡೈರಿ ಸರ್ಕಲ್, ಫುಡ್ ಗೋಡೌನ್, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ದೇವರಾಜ್‌ ಅರಸ್‌ ಬಡಾವಣೆ, ವಿಜಯನಗರ ಬಡಾವಣೆ, ಪ್ರೆಸಿಡೆನ್ಸಿ, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ದೊಡರಸ ಅಗ್ರಹಾರ, ತಿ. ಲಶೆಟ್ಟಿಹಳ್ಳಿ, ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್ ಮತ್ತು ಬ್ಯಾಡರಹಳ್ಳಿ, ಪದವಿ ಕಾಲೇಜು ಸುತ್ತಮುತ್ತ, ನಾಗಾಜಿ ಗುಡೆನ್ಸಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ದೊಡ್ಡರಸಹಳ್ಳಿ, ಎಲ್.ಎಚ್.ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ರಾಜೀವ್‌ ಗಾಂಧಿ ಬಡಾವಣೆ, ಎಸ್‌ಪಿ ಕಚೇರಿ, ಎಸ್‌ಜೆಎಂ ನಗರ, ಎಸ್‌ಎಂಕೆ ನಗರ, ಆರ್‌ಟಿಒ ಕಚೇರಿ, ಜ್ಯೋತಿನಗರ.

ಇದನ್ನೂ ಓದಿ : ನಮ್ಮ ಮೆಟ್ರೋದಿಂದ ಐಟಿ ಮಂದಿಗೆ ಗಿಫ್ಟ್: ಕೆಂಗೇರಿಯಿಂದ ವೈಟ್ ಫಿಲ್ಡ್ಕೆ, ಕೆ.ಆರ್. ಪುರಂವರೆಗೆ ಮೆಟ್ರೋ ಪ್ರಯಾಣ

ಅಕ್ಟೋಬರ್ 15 ಭಾನುವಾರ :
ಶಂಕರಾನಂದ ಬಡವಾಣೆ, ಸಚಿನ್ ಲೇಔಟ್, ಯುನಾನಿ ಆಸ್ಪತ್ರೆ, ನಿರೀಕ್ಷಿತ ಭವನ, ಪಿ & ಟಿ ಲೇಔಟ್, ಸುಬ್ರಹ್ಮಣ್ಯ ನಗರ, ಆಹಾರ ಗೋದಾಮು, ಕುಂಟೇಗೌಡನಹಳ್ಳಿ, ಯಲದಬಾಗಿ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದೊಡ್ಡಸಿ ಅಗ್ರಹಾರ, ಡಿ ತಿಗದಹಳ್ಳಿ, ಹಾವಿನಹಾಳು, ಗಂಗಮ್ಮ ಲೇಔಟ್, ಕಲ್ಲುಕೋಟೆ, ಪದವಿ ಕಾಲೇಜು ಸುತ್ತಮುತ್ತ, ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್ ಮತ್ತು ಬ್ಯಾಡರಹಳ್ಳಿ, ನಾಗಾಜಿ ಗುಡೆನ್ಸಿ, ಪ್ರೆಸಿಡೆನ್ಸಿ ಕಾಲೇಜು , ಪ್ರೇಮ್ ನಗರ, ಶಂಕರಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಲೋಕಿಕೆರೆ ರಸ್ತೆ, ಕೈಗಾರಿಕಾ ಪ್ರದೇಶ, ಜ್ಯೋತಿನಗರ, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್.ಎಚ್.ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ದೊಡ್ಡಸಿಯನಹಳ್ಳಿ, ದೊಡ್ಡಸಿ.

4 days power cut in Bangalore. In which area, on which day there is no electricity ? Here is the complete information

Comments are closed.