ಈಗೀಗ ಎಲೆಕ್ಟ್ರಿಕ್ ಬೈಕ್ಗಳು ಹೆಚ್ಚು ಪ್ರಚಲಿತದಲ್ಲಿ ಇರೋದ್ರಿಂದ ಹಣ ಉಳಿತಾಯ ಮಾಡುವ ದೃಷ್ಟಿಯಿಂದ ಅನೇಕರು ಎಲೆಕ್ಟ್ರಿಕ್ ಬೈಕ್ಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ನೀವು ಕೂಡ ಈ ಬಾರಿಯ ಹಬ್ಬದ ಸೀಸನ್ಗೆ ಹೊಸ ಬೈಕ್ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕ್ ಖರೀದಿ ಮಾಡಬೇಕು ಎಂದು ಪ್ಲಾನ್ ಏನಾದ್ರೂ ಹಾಕಿಕೊಂಡಿದ್ದರೆ ಇದಕ್ಕಿಂತ ಸರಿಯಾದ ಸಮಯ ನಿಮಗೆ ಮತ್ತೆ ಸಿಗಲಿಕ್ಕಿಲ್ಲ. ಆದರೆ ನೀವು ಇಂದು ಆಟಮ್ ವಾಡರ್ ಎಲೆಕ್ಟ್ರಿಕ್ ಬೈಕ್ (atum vader electric bike) ಬುಕ್ ಮಾಡಿದ್ರೆ ಮಾತ್ರ ಈ ಸದಾವಕಾಶ ನಿಮ್ಮದಾಗಲಿದೆ.
ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ Automobile.co, ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರನ್ನು ಸೆಳೆಯಲು ಸೂಪರ್ ಆಗಿರುವ ಎರಡು ಆಫರ್ಗಳನ್ನು ನೀಡಿದೆ. ದೀಪಾವಳಿ ಹಬ್ಬದ ಈ ಆಫರ್ನ್ನು ಬಳಸಿಕೊಂಡು ನೀವು ಅತೀ ಕಡಿಮೆ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ನ ಮಾಲೀಕರಾಗಬಹುದಾಗಿದೆ.

ಈ ಬೈಕ್ನ ಬೆಲೆಯು . 1,36,000 ರೂಪಾಯಿಯಾಗಿದ್ದು ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ ಬೈಕ್ಗಳ ಖರೀದಿಗೆ ನಿಮಗೆ 27,500 ರೂಪಾಯಿ ರಿಯಾಯಿತಿ ಸಿಗಲಿದೆ. ಅಂದರೆ ನೀವು ಕೇವಲ 1.08.500 ರೂಪಾಯಿಗೆ ಇ ಎಲೆಕ್ಟ್ರಿಕ್ ಬೈಕ್ನ ಮಾಲೀಕರಾಗಬಹುದಾಗಿದೆ. ಇನ್ನೊಂದು ವಿಶೇಷತೆ ಏನು ಅಂದ್ರೆ ಈ ಬೈಕ್ನ್ನು ನೀವು ಪ್ರಿ ಬುಕ್ ಮಾಡಬೇಕು ಎಂದುಕೊಂಡಿದ್ದರೆ ಕೇವಲ 999 ರೂಪಾಯಿ ಪಾವತಿ ಮಾಡಿದ್ರೆ ಸಾಕು.
ಇದನ್ನೂ ಓದಿ : ಜಾಗತಿಕವಾಗಿ ಲಾಂಚ್ ಆಗಿದೆ ಹೊಸ ಆವೃತ್ತಿಯ ಹಿಮಾಲಯನ್ ಮೋಟಾರ್ ಸೈಕಲ್: ಇಲ್ಲಿದೆ ವಿಶೇಷತೆ
ಬೈಕ್ ಖರೀದಿ ಮಾಡುವ ಸಂದರ್ಭದಲ್ಲಿ ನೀವು ಬಾಕಿ ಮೊತ್ತವನ್ನು ಪಾವತಿ ಮಾಡಿದರೆ ಸಾಕಾಗುತ್ತದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಈ ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್ ನಿಮಗೆ ಗರಿಷ್ಠ ಅಂದ್ರೆ ಗಂಟೆಗೆ 65 ಕಿಲೋಮೀಟರ್ ವೇಗವನ್ನು ನೀಡಲಿದೆ. ಮೂರರಿಂದ ನಾಲ್ಕು ಗಂಟೆಗಳ ಅವಧಿಯಲ್ಲಿ ಈ ಬೈಕ್ಗಳು ಚಾರ್ಜ್ ಆಗಲಿವೆ.

2.4 kWh ಬ್ಯಾಟರಿ ಪ್ಯಾಕ್ ಇದೆ. ಪೋರ್ಟಬಲ್ ಬ್ಯಾಟರಿ ಆಯ್ಕೆಯೂ ಇದರಲ್ಲಿ ಲಭ್ಯವಿದೆ. ಲೈಫ್ ಟೈಮ್ ಫ್ರೇಮ್ ವಾರಂಟಿ ಕೂಡ ನಿಮಗೆ ಸಿಗಲಿದೆ. ಅಲ್ಲದೇ ಈ ಬೈಕ್ಗಳು ಗ್ರಾಹಕರಿಗೆ ಕೆಂಪು, ಕಪ್ಪು, ಬಿಳಿ, ಬೂದು ಹಾಗೂ ನೀಲಿ ಬಣ್ಣದ ವಿನ್ಯಾಸಗಳಲ್ಲಿ ಲಭ್ಯವಿದೆ. ಇನ್ನು ಒಂದು ಬಾರಿಗೆ ನೀವು ಬೈಕ್ನ್ನು ಫುಲ್ ಜಾರ್ಜ್ ಮಾಡಿದಲ್ಲಿ 100 ಕಿಲೋಮೀಟರ್ವರೆಗೆ ಮೈಲೇಜ್ ಪಡೆಯಲಿದ್ದೀರಿ.
ಇದನ್ನೂ ಓದಿ : ದೀಪಾವಳಿ ಹಬ್ಬಕ್ಕೆ ಇಲ್ಲಿದೆ ಬಂಪರ್ : ಒಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಇನ್ನೊಂದು ಇ ಸ್ಕೂಟರ್ ಉಚಿತ
25 ಕಿ.ಮೀ ವೇಗದಲ್ಲಿ ಹೋದರೆ ನಿಮಗೆ 100 ಕಿಲೋಮೀಟರ್ವರೆಗೂ ಚಾರ್ಜ್ ಬರಲಿದೆ. ಅದೇ ನೀವು ಗಂಟೆಗೆ 45 ಕಿಲೋ ಮೀಟರ್ ವೇಗದಲ್ಲಿ ಬೈಕ್ ಚಲಾಯಿಸಿದಲ್ಲಿ ನಿಮಗ 80 ಕಿಲೋ ಮೀಟರ್ವರೆಗೆ ಬ್ಯಾಟರಿ ಚಾರ್ಜ್ ಬಾಳಿಕೆ ಬರಲಿದೆ.
ಹೀಗಾಗಿ ಈ ಬೈಕ್ನಿಂದ ಹೆಚ್ಚು ಮೈಲೇಜ್ ಪಡೆಯುವುದು ನಿಮ್ಮ ಮೇಲೆಯೇ ಅವಲಂಭಿಸಿ ಇರುತ್ತದೆ. ಸದ್ಯ ಏರುತ್ತಿರುವ ಪೆಟ್ರೋಲ್ ದರಗಳನ್ನೆಲ್ಲ ಗಮನಿಸಿದ್ರೆ ಈ ಎಲೆಕ್ಟ್ರಿಕ್ ಬೈಕ್ಗಳು ಖಂಡಿತವಾಗಿಯೂ ನಿಮಗೆ ಉತ್ತಮ ಆಯ್ಕೆ ಎಂದೇ ಹೇಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀವು Automobile.co ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ : ಮಾರುತಿ ದಸರಾ ಆಫರ್ : ಮಾರುತಿ ಸುಜುಕಿ ಜಿಮ್ನಿ ಕಾರು ಖರೀದಿಸಿದ್ರೆ ಸಿಗುತ್ತೆ 50000 ರೂ.
atum vader electric bike up to 28000 offers available Monthly pay EMI just 999