ಪಾಕಿಸ್ತಾನದ Suzuki Alto Vs ಭಾರತದ Maruti Alto ! ಈ ಕಾರುಗಳ ನಡುವಿನ ವ್ಯತ್ಯಾಸ ನಿಮಗೆ ಗೊತ್ತಾ ?

ಪಾಕಿಸ್ತಾನದಲ್ಲಿ ಮಾರಾಟವಾಗುವ Suzuki Alto ಕಾರು ಮತ್ತು ಭಾರತದಲ್ಲಿ ಮಾರಾಟವಾಗುವ Maruti Alto ಕಾರು ಭಿನ್ನವಾಗಿದೆ. ಭಾರತದಲ್ಲಿ Alto ಕಾರನ್ನು Maruti Suzuki ಕಂಪನಿಯು 2000ದಲ್ಲಿ ಬಿಡುಗಡೆಗೊಳಿಸಿತು. ಈ ಕಾರು ಸರಿಸಾಟಿ ಇಲ್ಲದ ರೀತಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.

ಪಾಕಿಸ್ತಾನದಲ್ಲಿ ಮೊದಲ ಬಾರಿಗೆ 1984 ರಲ್ಲಿ ಎಫ್‌ಎಕ್ಸ್‌ ಎಂಬ ಹೆಸರಿನಲ್ಲಿ Alto ಕಾರನ್ನು ಪರಿಚಯಿಸಿದ್ದರು. ಭಾರತದ ಆಲ್ಟೋ ಖಂಡಿತವಾಗಿಯೂ ಶಕ್ತಿಯುತವಾಗಿದೆ. ಸ್ವಲ್ಪ ದೊಡ್ಡದಾದ ಎಂಜಿನ್ ಕೆಲವು ಹೆಚ್ಚುವರಿ ಅಂಕಿಗಳನ್ನು ಉತ್ಪಾದಿಸುತ್ತದೆ. ಆದರೆ ಗೇರ್ ಬಾಕ್ಸ್ ಆಯ್ಕೆಗಳಿಗೆ ಬಂದಾಗ, ಪಾಕಿಸ್ತಾನದಲ್ಲಿ ಸುಜುಕಿ ಆಲ್ಟೊ AGS ರೂಪದಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ಇದನ್ನೂ ಓದಿ: ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ ಓವರ್‌ ಕಾರುಗಳಿವು

ಸದ್ಯ ಭಾರತದಲ್ಲಿರುವ Maruti Suzuki Alto ಕಾರಿನಲ್ಲಿ 0.8-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 48 ಬಿಹೆಚ್‍ಪಿ ಪವರ್ ಮತ್ತು 69 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಕಾರು 22.05 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಪಾಕಿಸ್ತಾನದಲ್ಲಿ ಮಾರಾಟವಾಗುತ್ತಿರುವ Suzuki Alto ಕಾರಿನಲ್ಲಿ 658 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 39.42 ಬಿಹೆಚ್‍ಪಿ ಪವರ್ ಮತ್ತು 56 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಎಂಟಿ/ಎಜಿಎಸ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಕಾರು 25 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.

ಒಟ್ಟಾರೆಯಾಗಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ Maruti Suzuki Alto ಕಾರು ಮಾರ್ಡನ್ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಆದರೆ ಪಾಕಿಸ್ತಾನದಲ್ಲಿ ಮಾರಾಟವಾಗುವ Suzuki Alto ಕಾರು ಬ್ಯಾಕ್ಸಿ ವಿನ್ಯಾಸವನ್ನು ಹೊಂದಿದೆ. ಪೀಚರ್ಸ್ ಮತ್ತು ಎಂಜಿನ್ ಕ್ಷಮತೆಯಲ್ಲಿ ಭಾರತದ Maruti Suzuki Alto ಮೇಲುಗೈ ಸಾಧಿಸಿದೆ.

ಇದನ್ನೂ ಓದಿ: Mahindra : ಸವಾರರ ಗಮನ ಸೆಳೆದ ಮಹೀಂದ್ರಾ XUV700 : 11.99 ಲಕ್ಷಕ್ಕೆ ಸಿಗುತ್ತೆ ಲಕ್ಸುರಿ ಕಾರು

Comments are closed.