Tarikere : ಕಾರನ್ನು ನಾಲೆಗೆ ಹಾರಿಸಿ ಆತ್ಮಹತ್ಯೆಗೆ ಯತ್ನ : ಇಬ್ಬರು ನಾಪತ್ತೆ, ತಾಯಿ, ಮಗು ಸೇಫ್‌

ಚಿಕ್ಕಮಗಳೂರು : ವಾಯ್ಸ್‌ ಮೆಸೇಜ್‌ ಕಳುಹಿಸಿ ಒಂದೇ ಕುಟುಂಬ ನಾಲ್ವರು ಕಾರನ್ನು ನಾಲೆಗೆ ಹಾರಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಎಂ.ಸಿ.ಹಳ್ಳಿ ಎಂಬಲ್ಲಿ ನಡೆದಿದೆ.

ನೀತು ( 35 ವರ್ಷ) ಹಾಗೂ ಧ್ಯಾನ್‌ ( 12 ವರ್ಷ) ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಮಂಜು ಹಾಗೂ ತಾಯಿ ಸುನಂದಮ್ಮ ನಾಪತ್ತೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರವಾತಿ ತಾಲೂಕಿನ ಹಳೇಜೇಡಿಕಟ್ಟೆಯ ನಿವಾಸಿಯಾಗಿರುವ ನೀತು ಅವರನ್ನು ಬೆಂಗಳೂರು ಮೂಲದ ಮಂಜು ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ದಂಪತಿಗಳಿಗೆ 13 ವರ್ಷದ ಧ್ಯಾನ್‌ ಅನ್ನೋ ಮಗನಿದ್ದಾನೆ.

ನಿನ್ನೆ ರಾತ್ರಿ ಸುಮಾರು 1 ಗಂಟೆಗೆ ಬೆಂಗಳೂರಿನಿಂದ ನಾಲ್ವರು ಕಾರಿನಲ್ಲಿ ಬಂದಿದ್ದಾರೆ. ಎಂ.ಸಿ.ಹಳ್ಳಿ ಸಮೀಪದ ಭದ್ರಾ ನಾಲೆಗೆ ಕಾರನ್ನು ಹಾರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆಯಲ್ಲಿ ನೀತು ಹಾಗೂ ಮಗು ಬಚಾವಾಗಿದ್ದು, ಮಂಜು ಹಾಗೂ ಆತನ ತಾಯಿ ನಾಪತ್ತೆಯಾಗಿದ್ದಾರೆ. ನಾಲೆಯಲ್ಲಿ ಕೊಚ್ಚಿ ಹೋಗಿರುವ ಅನುಮಾನ ವ್ಯಕ್ತವಾಗುತ್ತಿದೆ.

ಸ್ಥಳಕ್ಕೆ ತರಿಕೆರೆ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಜೊತೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಯತ್ನ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಬದುಕುಳಿದಿರುವ ನೀತು ಅವರಿಂದ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಇದನ್ನೂ ಓದಿ : ಅತ್ತೆಯ ಮೇಲಿನ ಸಿಟ್ಟಿಗೆ ಟೀಯಲ್ಲಿ ವಿಷ ಬೆರೆಸಿ ಮನೆಯವರಿಗೆ ಕೊಟ್ಟ ಸೊಸೆ

ಇದನ್ನೂ ಓದಿ : ಯುವತಿಯ ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆಯಿಟ್ಟ ಕಾಮುಕರು : ಮೊಬೈಲ್‌ ಟವರ್‌ ಆಧರಿಸಿ ತನಿಖೆ

Comments are closed.