Royal Enfield : ಹೊಸ ಅವತಾರದಲ್ಲಿ ಬಿಡುಗಡೆಯಾದ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌

ಬೈಕ್‌ (Bike) ಪ್ರಿಯರ ಅಚ್ಚುಮೆಚ್ಚಿನ ಆಯ್ಕೆಗಳಲ್ಲಿ ರಾಯಲ್‌ ಎನ್‌ಫೀಲ್ಡ್‌ (Royal Enfield) ಕೂಡಾ ಒಂದು. ಇದು ಶಕ್ತಿ ಶಾಲಿ ಬೈಕ್‌ ಎಂದೇ ಹೆಸರುವಾಸಿ. ರಾಯಲ್‌ ಎನ್‌ಫೀಲ್ಡ್‌ ಈಗ ತನ್ನ ಪ್ರಸಿದ್ಧ ಬೈಕ್‌ ಹಿಮಾಲಯನ್‌ (Royal Enfield Himalayan) ಅನ್ನು ಹೊಸ ಬಣ್ಣಗಳು ಮತ್ತು ಕೆಲವು ಬದಲಾವಣೆಗಳೊಂದಿಗೆ ಅಪ್ಡೇಟ್‌ ಆಗಿ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇದು ಅಡ್ವೆಂಚರ್‌ ಬೈಕ್‌ (Adventure Bike) ಆಗಿದೆ. ಈಗ ಬಿಡುಗಡೆಯಾಗಿರುವ ಬೈಕ್‌ ಗ್ಲೇಸಿಯರ್ ಬ್ಲೂ, ಡ್ಯೂನ್ ಬ್ರೌನ್ ಮತ್ತು ಸ್ಲೀಟ್ ಬ್ಲ್ಯಾಕ್ ಶೇಡ್‌ಗಳೆಂಬ ಮೂರು ಬಣ್ಣಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಈ ಮೂರು ಬಣ್ಣಗಳು ಹಿಮಾಲಯದ ಮೇಲಿನ ದೃಶ್ಯಗಳಿಂದ ಪ್ರೇರಿತವಾಗಿವೆ ಎಂದು ಹೇಳಲಾಗುತ್ತಿದೆ. ಕಂಪನಿಯ ಪ್ರಕಾರ ಗ್ಲೇಸಿಯರ್‌ ಬ್ಲೂ ಬಣ್ಣವು ಹಿಮಾಲಯದ ಶೀಥಲ ಗ್ಲೇಸಿಯರ್‌ ಅನ್ನೇ ಅನುಸರಿಸಿ ಅದೇ ಬಣ್ಣವನ್ನು ಹೊಂದಿಸಲಾಗಿದೆ. ಡ್ಯೂನ್ ಬ್ರೌನ್ ಬಣ್ಣವು ನುಬ್ರಾ ಘಾಟ್‌ ಮತ್ತು ಲಡಾಖ ದಿಬ್ಬಗಳಿಂದ ಪ್ರೇರೇಪಣೆಗೊಂಡಿದೆ. ಸ್ಥಗಿತಗೊಂಡಿದ್ದ ಸ್ಲಿಟ್‌ ಮಾದರಿಯು ಮತ್ತೆ ಮರಳಿರುವುದರಿಂದ ಸ್ಲೀಟ್‌ ಬ್ಲ್ಯಾಕ್‌ ಹೆಸರಿನೊಂದಿಗೆ ಹೊಸ ಆವೃತ್ತಿಯಲ್ಲಿ ಅಳವಡಿಸಲಾಗಿದೆ ಎಂದು ಹೇಳಿದೆ.

ಹೊಸ ಬಣ್ಣಗಳೊಂದಿಗೆ ಬಿಡುಗಡೆಯಾದ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಬೈಕ್‌ ಕೆಲವು ವೈಶಿಷ್ಟ್ಯಗಳನ್ನು ಅಪ್ಡೇಟ್‌ ಮಾಡಿಕೊಂಡಿದೆ. ಹೊಸ ಬೈಕ್‌ USB ಪೋರ್ಟ್‌ ಅನ್ನು ಹೊಂದಿದೆ. ಈ ಬೈಕಿನ ಆರಂಭಿಕ ಬೆಲಯು 2.16 ಲಕ್ಷವಾಗಿದೆ. ಇದರಲ್ಲೇ ಗ್ಲೇಸಿಯರ್‌ ಬ್ಲೂ ಮತ್ತು ಸ್ಲೀಕ್‌ ಬ್ಲಾಕ್‌ ಬಣ್ಣಗಳ ಬೈಕ್‌ಗೆ 2.23 ಲಕ್ಷ ರೂ. ಆಗಿದೆ. ಇದರ ಜೊತೆಗೆ ಬಿಡುಗಡೆಯಾದ ಡ್ಯೂನ್‌ ಬ್ರಾನ್‌ ಬಣ್ಣದ ಬೈಕ್‌ಗೆ 2.22 ಲಕ್ಷ ರೂ. ಆಗಿದೆ. ಸದ್ಯ ಈ ಬೈಕುಗಳಲ್ಲಿ ಯಾವುದೇ ರೀತಿಯ ಮ್ಯಾಕೆನಿಕಲ್‌ ಬದಲಾವಣೆಗಳನ್ನು ಮಾಡಲಾಗಿಲ್ಲ.

ವೈಶಿಷ್ಟ್ಯಗಳು :
ಈಗ ಬಿಡುಗಡೆಯಾಗಿರುವ ಹಿಮಾಲಯನ್‌ 411cc ಮತ್ತು SOHC ಎಂಜಿನ್‌ ಬೈಕ್‌ ಆಗಿದೆ. 4 ಸ್ಟ್ರೋಕ್ ಎಂಜಿನ್ ಹೊಂದಿರುವ ಈ ವಾಹನದ ಎಂಜಿನ್ 6,500 rpm ನಲ್ಲಿ 24.3 bhp ಮತ್ತು 4,000-4,500 rpm ನಲ್ಲಿ 32 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್ ಬಾಕ್ಸ್ ಟ್ರಾನ್ಸ್ಮಿಷನ್‌ ಅನ್ನು ಹೊಂದಿರುವ ಈ ಬೈಕ್‌ ಡ್ಯುಯಲ್‌ ಚಾನಲ್‌ ಆಂಟಿ ಲಾಕ್‌ ಬ್ರೆಕಿಂಗ್‌ ಸಿಸ್ಟ್‌ಮ್‌ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ ಹಿಂಬದಿಯ ವೀಲ್ಹ್‌ಗೆ ಸ್ವಿಚ್‌ ಮಾಡಬಹುದಾದ ಆಂಟಿ ಲಾಕ್‌ ಬ್ರೆಕಿಂಗ್‌ ಸಿಸ್ಟ್‌ಮ್‌ (ABS) ಅನ್ನು ಹೊಂದಿಸಲಾಗಿದೆ. ಹಜಾರ್ಡ್‌ ಲ್ಯಾಂಪ್‌ನಂತಹ ಆಕರ್ಷಕ ಫೀಚರ್‌ಗಳೂ ಇವೆ. ಈ ಬೈಕುಗಳಲ್ಲಿ 21 ಇಂಚಿನ ಮುಂಬಾಧ ಮತ್ತು 17 ಇಂಚಿನ ಹಿಂಭಾಗದ ಚಕ್ರಗಳನ್ನು ನೀಡಲಾಗಿದೆ. ಇದರಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್‌ ಫೀಚರ್‌ ಮತ್ತು ಹಿಂಭಾಗದಲ್ಲಿ ಮೊನೋಶಾಕ್‌ ಸಸ್ಪ್ನೆಶನ್‌ ನೀಡಲಾಗಿದೆ. ವರದಿಗಳ ಪ್ರಕಾರ ರಾಯಲ್‌ ಎನ್‌ಫೀಲ್ಡ್‌ನ ಹೊಸ ಮಾಡಲ್‌ಗಳಲ್ಲಿಯೂ ಈ ವೈಶಿಷ್ಟ್ಯಗಳನ್ನು ಅಳವಡಿಸಲಿದೆ.

ಇದನ್ನೂ ಓದಿ : Lamborghini Urus Performante : ಭಾರತಕ್ಕೆ ಇಂದು ಎಂಟ್ರಿ ಕೊಡಲಿರುವ ಲ್ಯಾಂಬೊರ್ಗಿನಿ ಯುರಸ್‌ ಪರ್ಫಾರ್ಮ್ನಟ್‌

ಇದನ್ನೂ ಓದಿ : India’s Longest Train Journey : ಭಾರತದ ಅತಿ ಉದ್ದದ ರೈಲು ಮಾರ್ಗದಲ್ಲಿ ನೀವು ಪ್ರಯಾಣಿಸಿದ್ದೀರಾ?

(Royal Enfield Himalayan launched three new colors and know the features)

Comments are closed.