Ashish Nehra to be new t20 coach: ಭಾರತ ಟಿ20 ತಂಡಕ್ಕೆ ಆಶಿಶ್ ನೆಹ್ರಾ ಕೋಚ್..? ಬಿಸಿಸಿಐ ಮುಂದೆ ಹೊಸ ಲೆಕ್ಕಾಚಾರ

ಬೆಂಗಳೂರು: (Ashish Nehra to be new t20 coach)ಟಿ20 ವಿಶ್ವಕಪ್ ಬೆನ್ನಲ್ಲೇ ಮೇಜರ್ ಸರ್ಜರಿಗೆ ಮುಂದಾಗಿರುವ ಬಿಸಿಸಿಐ (BCCI) ಈಗಾಗ್ಲೇ ಸೀನಿಯರ್ ಆಯ್ಕೆ ಸಮಿತಿಯನ್ನು ವಜಾ ಮಾಡಿದೆ. ಇದ್ರ ಬೆನ್ನಲ್ಲೇ ಟಿ20 ತಂಡಕ್ಕೆ ಪ್ರತ್ಯೇಕ ನಾಯಕನನ್ನು ನೇಮಕ ಮಾಡಲು ಬಿಸಿಸಿಐ ಮುಂದಾಗಿದ್ದು, ಚುಟುಕು ಮಾದರಿಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕ ಪಟ್ಟ ಕಟ್ಟುವುದು ಬಹುತೇಕ ಖಚಿತ. ಮುಂದಿನ ವರ್ಷದ ಜನವರಿಯಲ್ಲಿ ಭಾರತ ಟಿ20 ತಂಡಕ್ಕೆ ಹೊಸ ನಾಯಕನ ನೇಮಕವಾಗಲಿದೆ ಎನ್ನಲಾಗ್ತಿದೆ.

ಟಿ20 ತಂಡದ ಹೊಸ ನಾಯಕನ ಬೆನ್ನಲ್ಲೇ ಹೊಸ ಕೋಚ್(Ashish Nehra to be new t20 coach) ನೇಮಿಸುವ ಬಗ್ಗೆಯೂ ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಹಾಲಿ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ಮಾತ್ರ ಉಳಿಸಿಕೊಂಡು ಟಿ20 ತಂಡದ ಕೋಚಿಂಗ್ ಜವಾಬ್ದಾರಿಯನ್ನು ಬೇರೂಬ್ಬರಿಗೆ ವಹಿಸುವ ಲೆಕ್ಕಾಚಾರ ಬಿಸಿಸಿಐ ಮುಂದಿದೆ. ಮೂಲಗಳ ಪ್ರಕಾರ ಭಾರತ ತಂಡದ ಮಾಜಿ ಎಡಗೈ ವೇಗದ ಬೌಲರ್ ಆಶಿಶ್ ನೆಹ್ರಾ (Ashish Nehra) ಟೀಮ್ ಇಂಡಿಯಾ ಟಿ20 ತಂಡದ ನೂತನ ಕೋಚ್ ರೇಸ್’ನಲ್ಲಿದ್ದಾರೆ. ನೆಹ್ರಾ ಅವರನ್ನೇ ಬಿಸಿಸಿಐ ಮುಂದಾಗಿದೆ.

ಆಶಿಶ್ ನೆಹ್ರಾ ಕೋಚಿಂಗ್’ನಲ್ಲಿ ಗುಜರಾತ್ ಟೈಟನ್ಸ್ ತಂಡ ಕಳೆದ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ವಿಶೇಷ ಏನಂದ್ರೆ ಗುಜರಾತ್ ಟೈಟನ್ಸ್ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದು ನಾಯಕ ಹಾರ್ದಿಕ್ ಪಾಂಡ್ಯ. ಹೀಗಾಗಿ ಪಾಂಡ್ಯ-ನೆಹ್ರಾ ಜೋಡಿಯ ಕಾಂಬಿನೇಷನ್ ಅನ್ನು ಭಾರತ ತಂಡಕ್ಕೆ ತರಲು ಬಿಸಿಸಿಐ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ : Umran Malik shines in ODI debut: ಪದಾರ್ಪಣೆಯ ಪಂದ್ಯದಲ್ಲೇ ಬೆಂಕಿ ಚೆಂಡುಗಳನ್ನು ಉಗುಳಿದ ಜಮ್ಮು ಎಕ್ಸ್‌ಪ್ರೆಸ್ ಉಮ್ರಾನ್ ಮಲಿಕ್

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಗ್ಗರಿಸಿತ್ತು. ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್’ಗಳ ಹೀನಾಯ ಸೋಲು ಕಂಡಿತ್ತು. 2013ರ ನಂತರ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಲೇ ಬಂದಿರುವ ಭಾರತ ಕಳೆದ 15 ವರ್ಷಗಳಿಂದ ಟಿ20 ವಿಶ್ವಕಪ್ ಅನ್ನೂ ಗೆದ್ದಿಲ್ಲ. ಹೀಗಾಗಿ ಟಿ20 ತಂಡದಲ್ಲಿ ಬಹುತೇಕ ಯುವ ಆಟಗಾರರಿಗೆ ಸ್ಥಾನ ನೀಡಿ ಹೊಸ ತಂಡ ಕಟ್ಟಲು ಬಿಸಿಸಿಐ ಮುಂದಾಗಿದೆ. ಪ್ರತ್ಯೇಕ ಕೋಚ್ ಹಾಗೂ ಪ್ರತ್ಯೇಕ ನಾಯಕನ್ನು ನೇಮಿಸುವ ಮೂಲಕ ಹೊಸ ಪ್ರಯೋಗಕ್ಕೆ ಬಿಸಿಸಿಐ ಮುಂದಾಗಿದೆ. ರೋಹಿತ್ ಶರ್ಮಾ ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ಮಾತ್ರ ನಾಯಕರಾಗಿ ಮುಂದುವರಿಯಲಿದ್ದು, ಮುಂದಿನ ವರ್ಷ ಭಾರತದಲ್ಲೇ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಎಲ್ಲಾ ಮಾದರಿಯ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ನಾಯಕತ್ವನ್ನು ಕಳೆದುಕೊಳ್ಳಲಿದ್ದಾರೆ.

Ashish Nehra to be new t20 coach) BCCI has already dismissed the senior selection committee, which is going for major surgery after the T20 World Cup. After this, the BCCI has decided to appoint a separate captain for the T20 team, and it is almost certain that all-rounder Hardik Pandya will be given the captaincy in a pinch. It is said that a new captain will be appointed for the Indian T20 team in January next year.

Comments are closed.