Tata Dark Red Edition Cars: ಟಾಟಾದ ಮೂರು ಡಾರ್ಕ್‌–ರೆಡ್‌ ಎಡಿಷನ್‌ ಎಸ್‌ಯುವಿ ಕಾರುಗಳು

ಭಾರತದ ವಾಹನ ತಯಾರಿಕೆಯ ದೈತ್ಯ ಕಂಪನಿ ಟಾಟಾ ತನ್ನ ಡಾರ್ಕ–ರೆಡ್‌ ಎಡಿಷನ್‌ನಲ್ಲಿ (Tata Dark Red Edition Cars) ಬರುವ ಮೂರು ಎಸ್‌ಯುವಿಗಳನ್ನು ಬಿಡುಗಡೆ ಮಾಡಿದೆ. ಅವು ಟಾಟಾ ನೆಕ್ಸಾನ್‌, ಟಾಟಾ ಹೈರಿಯರ್‌ ಮತ್ತು ಟಾಟಾ ಸಫಾರಿಗಳಾಗಿವೆ. ಟಾಟಾ ಈ ಕಾರುಗಳಲ್ಲಿ ಅನೇಕ ವೈಶಿಷ್ಟ್ಯಗಳನ್ನು ಹೊಂದಿಸಿದೆ. ಇವುಗಳ ಬೆಲೆಗಳನ್ನು ಘೋಷಿಸಿದೆ. ಟಾಟಾ ಈ ಕಾರುಗಳಲ್ಲಿ ಏನೆಲ್ಲಾ ವಿಶೇಷತೆಗಳನ್ನು ಅಳವಡಿಸಿದೆ ಹಾಗೂ ಇದರ ಬೆಲೆ ಎಷ್ಟಿರಬಹುದು ಇಲ್ಲಿದೆ ಓದಿ.

ವೈಶಿಷ್ಟ್ಯತೆಗಳು :
ಡಾರ್ಕ್ ರೆಡ್ ಎಡಿಷನ್‌ನಲ್ಲಿ ಪರಿಚಯಿಸಲಾದ ಎಲ್ಲಾ ಮೂರು SUV ಗಳಲ್ಲಿ ಅನೇಕ ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದರಲ್ಲಿ ADAS (ಅಡ್ವಾನ್ಸ್‌ ಡ್ರೈವರ್‌ ಅಸಿಸ್ಟನ್ಸ್‌ ಸಿಸ್ಟಮ್‌) ಸುರಕ್ಷತಾ ವೈಶಿಷ್ಟ್ಯವನ್ನು ಸಹ ಸೇರಿಸಲಾಗಿದೆ. ಈ ಎಸ್‌ಯುವಿಗಳ ಹೊರಭಾಗದಲ್ಲಿರುವ ಡಾರ್ಕ್ ಥೀಮ್ ಅನ್ನು ಎಸ್‌ಯುವಿಯ ಒಳಭಾಗದಲ್ಲಿಯೂ ಕಾಣಬಹುದಾಗಿದೆ. ಇದರಲ್ಲಿ ಕಪ್ಪು ಡ್ಯಾಶ್‌ಬೋರ್ಡ್, ಸೀಟುಗಳು ಮತ್ತು ಬಾಗಿಲುಗಳು ಕೆಂಪು ಬಣ್ಣದಲ್ಲಿ ಕಂಡುಬರುತ್ತದೆ. ಇದಲ್ಲದೆ, ಇವುಗಳಲ್ಲಿ ವೈರ್‌ಲೆಸ್ ಚಾರ್ಜರ್, ಆರು ಭಾಷೆಗಳಲ್ಲಿ 200 ಕ್ಕೂ ಹೆಚ್ಚು ವೈಸ್‌ ಕಮಾಂಡ್‌, ಏರ್ ಪ್ಯೂರಿಫೈಯರ್, ವೆಂಟಿಲೇಟೆಡ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ಪಾವರ್ಡ್‌ ಡ್ರೈವರ್ ಸೀಟ್, 360 ಡಿಗ್ರಿ ಸರೌಂಡ್ ವ್ಯೂ ಸಿಸ್ಟಮ್, 17.78 cm ಡಿಜಿಟಲ್ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 26.03 cm ಹರ್ಮನ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋದಂತಹ ಕಾರಿನ ವೈಶಿಷ್ಟ್ಯಗಳನ್ನು ನೀಡಲಾಗಿದೆ.

ಡಾರ್ಕ್‌–ರೆಡ್‌ ಎಡಿಷನ್‌ ಕಾರುಗಳ ಬೆಲೆ:
ಟಾಟಾದ ಡಾರ್ಕ್ ರೆಡ್ ಎಡಿಷನ್ ಎಸ್‌ಯುವಿಗಳ ಬೆಲೆಗಳು ಹೀಗಿವೆ, ಟಾಟಾ ನೆಕ್ಸಾನ್ ಕಾರಿನ ಬೆಲೆ 12.35 ಲಕ್ಷ ರೂ. (ಎಕ್ಸ್ ಶೋರೂಂ), ಟಾಟಾ ಹ್ಯಾರಿಯರ್ ಬೆಲೆ ರೂ 21.77 ಲಕ್ಷ (ಎಕ್ಸ್ ಶೋ ರೂಂ) ಮತ್ತು ಟಾಟಾ ಸಫಾರಿಯ ಬೆಲೆ ರೂ 22.61 ಲಕ್ಷ (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗುತ್ತದೆ.

ಟಾಟಾ ತನ್ನ ಡಾರ್ಕ್–ರೆಡ್‌ ಎಡಿಷನ್‌ನಲ್ಲಿ ಬರುವ ಕಾರುಗಳಿಗೆ ಕೆಲವು ದಿನಗಳ ಮೊಡಲೇ ಬುಕ್ಕಿಂಗ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತ್ತು ಹಾಗೂ ಇಂದು ಅವುಗಳನ್ನು ಬಿಡುಗಡೆ ಮಾಡಲಾಗಿದೆ. ಡಾರ್ಕ್ ಆವೃತ್ತಿಗಾಗಿ ಕಾಯುತ್ತಿರುವ ಗ್ರಾಹಕರು ಈಗ ಅವುಗಳನ್ನು ಖರೀದಿಸಬಹುದಾಗಿದೆ.

ಕಾರು ತಯಾರಕರ ನಡುವಿನ ಪೈಪೋಟಿಯಿಂದಾಗಿ ಎಲ್ಲಾ ಕಂಪನಿಗಳು ತಮ್ಮ ವಾಹನಗಳನ್ನು ನವೀಕರಿಸುವಲ್ಲಿ ನಿರತವಾಗಿವೆ. ಇದರಿಂದಾಗಿ ಟಾಟಾ ಕೂಡ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತನ್ನ ಕಾರುಗಳನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದೆ. ಇತ್ತೀಚಿಗೆ ಮಾರುತಿ ತನ್ನ ಬ್ಲ್ಯಾಕ್ ಎಡಿಷನ್ ಅನ್ನು ಸಹ ಬಿಡುಗಡೆ ಮಾಡಿದೆ.

ಇದನ್ನೂ ಓದಿ : Best Electric Bikes : 1.5 ಲಕ್ಷದ ಒಳಗೆ ಖರೀದಿಸಬಹುದಾದ 5 ಎಲೆಕ್ಷ್ರಿಕ್‌ ಬೈಕ್‌ಗಳು

ಇದನ್ನೂ ಓದಿ : Best Mileage Scooters : ಸ್ಕೂಟರ್‌ ಖರೀದಿಸಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಮೈಲೇಜ್‌ ಕೊಡುವ ಸ್ಕೂಟರ್‌ಗಳು

(Tata Dark Red Edition Cars launched in India. Tata Nexon, safari, and harrier are the SUVs that come in the dark edition)

Comments are closed.