YES Bank FD Interest Rate Hike : ಎಫ್‌ಡಿ ಹೂಡಿಕೆದಾರರ ಗಮನಕ್ಕೆ : ಈ ಬ್ಯಾಂಕ್‌ ಸ್ಥಿರ ಠೇವಣಿಗಳ ಬಡ್ಡಿದರ ಶೇ. 6ಕ್ಕೆ ಹೆಚ್ಚಳ

ನವದೆಹಲಿ: ಜನರು ತಮ್ಮ ದುಡಿಮೆಯ ಸಣ್ಣ ಭಾಗವನ್ನು ಭವಿಷ್ಯಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಾರೆ. ಅದರಲ್ಲಿ ಒಂದು ಸ್ಥಿರ ಠೇವಣಿಗಳು ಆಗಿದೆ. 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲಿನ ಆಯ್ದ ಅವಧಿಗಳ ಮೇಲಿನ ಎಫ್‌ಡಿ ಬಡ್ಡಿ ದರಗಳನ್ನು 25 ರಿಂದ 50 ಬೇಸಿಸ್ ಪಾಯಿಂಟ್‌ಗಳಷ್ಟು (ಬಿಪಿಎಸ್) ಹೆಚ್ಚಿಸಿದೆ ಎಂದು ಯೆಸ್ ಬ್ಯಾಂಕ್ (YES Bank FD Interest Rate Hike) ಹೇಳಿದೆ. ಇತ್ತೀಚಿನ ಎಫ್‌ಡಿ ಬಡ್ಡಿ ಹೆಚ್ಚಳವು ಫೆಬ್ರವರಿ 21, 2023 ರಿಂದ ಜಾರಿಗೆ ಬಂದಿದೆ. ಖಾಸಗಿ ವಲಯದ ಬ್ಯಾಂಕ್‌ನ ವೆಬ್‌ಸೈಟ್‌ನ ಪ್ರಕಾರ, ಇತ್ತೀಚಿನ ಎಫ್‌ಡಿ ಬಡ್ಡಿ ದರಗಳು ಸಾಮಾನ್ಯ ಜನರಿಗೆ ಶೇಕಡಾ 3.25 ರಿಂದ 7.5 ರ ವ್ಯಾಪ್ತಿಯಲ್ಲಿವೆ. ಇನ್ನುಳಿದಂತೆ ಶೇಕಡಾ 3.75 ರಿಂದ ಶೇ. 8ರಷ್ಟು ಬಡ್ಡಿದರವು ಗ್ರಾಹಕರು ಆಯ್ಕೆ ಮಾಡುವ ಎಫ್‌ಡಿ ಅವಧಿಯನ್ನು ಅವಲಂಬಿಸಿರುತ್ತದೆ.

181 ದಿನಗಳು ಮತ್ತು 271 ದಿನಗಳ ನಡುವಿನ ಅವಧಿಯ ಠೇವಣಿಗಳ ಮೇಲೆ, ಎಫ್‌ಡಿ ಬಡ್ಡಿ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 5.75 ರಿಂದ ಶೇಕಡಾ 6 ಕ್ಕೆ ಹೆಚ್ಚಿಸಿದೆ ಎಂದು ಬ್ಯಾಂಕ್ ಹೇಳಿದೆ. ಬ್ಯಾಂಕ್ 272 ದಿನಗಳು ಮತ್ತು 1 ವರ್ಷದ ನಡುವಿನ ಅವಧಿಯ FD ಮೇಲಿನ ಬಡ್ಡಿದರಗಳನ್ನು ಶೇಕಡಾ 6.25 ಕ್ಕೆ ಏರಿಸಿದೆ, ಈ ಮೊದಲು ಶೇಕಡಾ 6 ರಷ್ಟಿತ್ತು. ಇನ್ನು ವಿವಿಧ ಅವಧಿಗೆ ಒಳಗೊಂಡಂತೆ ಸ್ಥಿರ ಠೇವಣಿಗಳ ಇತ್ತೀಚಿನ ಬಡ್ಡಿ ದರಗಳನ್ನು ಈ ಕೆಳಗೆ ತಿಳಿಸಲಾಗಿದೆ.

ವಿವಿಧ ಅವಿಧಿ ಸ್ಥಿರ ಠೇವಣಿಗಳ ಮೇಲಿನ ಇತ್ತೀಚಿನ ಬಡ್ಡಿ ದರಗಳ ವಿವರ :

  • 7 ದಿನಗಳಿಂದ 14 ದಿನಗಳು : ಸಾಮಾನ್ಯ ನಾಗರಿಕರಿಗೆ ಶೇ 3.25 ಮತ್ತು ಹಿರಿಯ ನಾಗರಿಕರಿಗೆ ಶೇ 3.75
  • 15 ದಿನಗಳಿಂದ 45 ದಿನಗಳು : ಸಾಮಾನ್ಯ ನಾಗರಿಕರಿಗೆ ಶೇ 3.70 ಮತ್ತು ಹಿರಿಯ ನಾಗರಿಕರಿಗೆ ಶೇ 4.20
  • 46 ದಿನಗಳಿಂದ 90 ದಿನಗಳು : ಸಾಮಾನ್ಯ ನಾಗರಿಕರಿಗೆ ಶೇ 4.10 ಮತ್ತು ಹಿರಿಯ ನಾಗರಿಕರಿಗೆ ಶೇ 4.60
  • 91 ದಿನಗಳಿಂದ 180 ದಿನಗಳು : ಸಾಮಾನ್ಯ ನಾಗರಿಕರಿಗೆ ಶೇ 4.75 ಮತ್ತು ಹಿರಿಯ ನಾಗರಿಕರಿಗೆ ಶೇ 5.25
  • 181 ದಿನಗಳಿಂದ 271 ದಿನಗಳು : ಸಾಮಾನ್ಯ ನಾಗರಿಕರಿಗೆ ಶೇ 6.00 ಮತ್ತು ಹಿರಿಯ ನಾಗರಿಕರಿಗೆ ಶೇ 6.50
  • 272 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ: ಸಾಮಾನ್ಯ ನಾಗರಿಕರಿಗೆ ಶೇ 6.25 ಮತ್ತು ಹಿರಿಯ ನಾಗರಿಕರಿಗೆ ಶೇ 6.75
  • 1 ವರ್ಷದಿಂದ 15 ತಿಂಗಳವರೆಗೆ : ಸಾಮಾನ್ಯ ನಾಗರಿಕರಿಗೆ ಶೇ 7.25 ಮತ್ತು ಹಿರಿಯ ನಾಗರಿಕರಿಗೆ ಶೇ 7.75
  • 15 ತಿಂಗಳಿಂದ 35 ತಿಂಗಳಿಗಿಂತ ಕಡಿಮೆ : ಸಾಮಾನ್ಯ ನಾಗರಿಕರಿಗೆ ಶೇ.7.50 ಮತ್ತು ಹಿರಿಯ ನಾಗರಿಕರಿಗೆ ಶೇ.7.71
  • 35 ತಿಂಗಳು 1 ದಿನದಿಂದ 36 ತಿಂಗಳಿಗಿಂತ ಕಡಿಮೆ : ಸಾಮಾನ್ಯ ನಾಗರಿಕರಿಗೆ ಶೇ 7.50 ಮತ್ತು ಹಿರಿಯ ನಾಗರಿಕರಿಗೆ ಶೇ 8.00
  • 36 ತಿಂಗಳಿಂದ 120 ತಿಂಗಳವರೆ ಗೆ: ಸಾಮಾನ್ಯ ನಾಗರಿಕರಿಗೆ ಶೇ 7.00 ಮತ್ತು ಹಿರಿಯ ನಾಗರಿಕರಿಗೆ ಶೇ 7.75

ಇದನ್ನೂ ಓದಿ : Aadhaar registration for own land: ಸ್ವಂತ ಭೂಮಿಗೂ ಆಧಾರ್‌ ನೊಂದಣಿ ಅಗತ್ಯ: ಕೆಂದ್ರ ಸರಕಾರದ ಮಹತ್ವದ ಘೋಷಣೆ

ಇದನ್ನೂ ಓದಿ : Wheat price: ಗೋಧಿ ಮತ್ತು ಹಿಟ್ಟಿನ ಬೆಲೆ ಬಗ್ಗೆ ಮೋದಿ ಸರಕಾರದಿಂದ ಮಹತ್ವದ ನಿರ್ಧಾರ

ಇದನ್ನೂ ಓದಿ : UK visa for indians: ಗುಡ್ ನ್ಯೂಸ್ : ಭಾರತೀಯರಿಗೆ 2,400 ವೀಸಾ ಪ್ರಕಟಿಸಿದ ಯುಕೆ

ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದ್ದರಿಂದ 2022 ರ ಆರಂಭದಿಂದಲೂ ಹಲವಾರು ಬ್ಯಾಂಕ್‌ಗಳು ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ ಎನ್ನುವುದನ್ನು ಗಮನಿಸಬೇಕಾಗಿದೆ. ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐನಂತಹ ಬ್ಯಾಂಕ್‌ಗಳು ಇತ್ತೀಚಿನ ದಿನಗಳಲ್ಲಿ ಠೇವಣಿ ಮತ್ತು ಸಾಲ ಎರಡರ ಮೇಲಿನ ಬಡ್ಡಿದರವನ್ನು ಹಲವು ಬಾರಿ ಹೆಚ್ಚಿಸಿವೆ.

YES Bank FD Interest Rate Hike: Attention FD Investors: This bank fixed deposit interest rate hike. Increase to 6

Comments are closed.