actor deepak mahadev : ನಾಗಾಣಿ 2 ಧಾರವಾಹಿಯಲ್ಲಿ ಬಹುಮುಖ್ಯ ಬದಲಾವಣೆ : ನಿನಾದ್​ ಪಾತ್ರದಲ್ಲಿನ್ನು ದೀಪಕ್​ ನಟನೆ

actor deepak mahadev : ನಾಗಿಣಿ 2 ಧಾರವಾಹಿ ಖ್ಯಾತಿಯ ಕಿರುತೆರೆ ನಟ ನಿನಾದ್​ ಇತ್ತೀಚೆಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ರಮ್ಯಾ ಎಂಬವರ ಜೊತೆಯಲ್ಲಿ ನಿನಾದ್​ ಮದುವೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ರಮ್ಯಾ ಹಾಗೂ ನಿನಾದ್​​ ಜೋಡಿ ವೈವಾಹಿಕ ಬಂಧ ಬೆಸೆದರು. ಈ ವಿವಾಹ ಕಾರ್ಯಕ್ರಮದಲ್ಲಿ ನಾಗಿಣಿ 2 ಧಾರವಾಹಿಯ ತಂಡ ಸೇರಿದಂತೆ ಸಾಕಷ್ಟು ಕಿರುತೆರೆಯ ನಟರು ಕಾಣಿಸಿಕೊಂಡಿದ್ದರು. ನಿನಾದ್​ ಹಾಗೂ ರಮ್ಯಾ ಮದುವೆಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.


ಮದುವೆ ಸುದ್ದಿಯ ಜೊತೆಯಲ್ಲಿಯೇ ನಿನಾದ್​ ನಾಗಿಣಿ 2 ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​ ನೀಡಿದ್ದಾರೆ. ನಾಗಿಣಿ 2 ಸೀರಿಯಲ್​ನ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಟ ನಿನಾದ್​ ಇದೀಗ ಅದೇ ಧಾರವಾಹಿಯಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಅದರೆ ಈ ಬಗ್ಗೆ ನಾಗಿಣಿ 2 ಕಿರುತೆರೆ ತಂಡ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ, ನಾಗಿಣಿ 2 ಧಾರವಾಹಿಯಲ್ಲಿ ಸಧ್ಯ ನಿನಾದ್​ ಅಭಿನಯದ ಎಪಿಸೋಡ್​ಗಳೇ ಬರುತ್ತಿದೆ.
ಮದುವೆಯಾಗುತ್ತಿದ್ದಂತೆಯೇ ನಿನಾದ್​ ಯಾಕೆ ನಾಗಿಣಿ 2 ತಂಡದಿಂದ ಹೊರ ಬಂದರು ಎಂಬುದಕ್ಕೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಮೂಲಗಳ ಪ್ರಕಾರ ಕಿರುತೆರೆಯ ಖ್ಯಾತ ನಟ ದೀಪಕ್​ ಮಹದೇವ್​ ನಿನಾದ್​​ ಪಾತ್ರದಲ್ಲಿ ಇನ್ಮುಂದೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಈ ಯಾವುದರ ಬಗ್ಗೆಯೂ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.


ನಿನಾದ್​ ಜಾಗವನ್ನು ತುಂಬಲಿರುವ ದೀಪಕ್ ಮಹದೇವ್​​ ನಿನ್ನಿಂದಲೇ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇದಾದ ಬಳಿಕ ಮರಳಿ ಮನಸ್ಸಾಗಿದೆ ಎಂಬ ಧಾರವಾಹಿಯಲ್ಲಿಯೂ ದೀಪಕ್​ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಾಗಿಣಿ 2 ಧಾರವಾಹಿಯ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಇದನ್ನು ಓದಿ : Prashath : ಹಾಸನದಲ್ಲಿ ಡಾ.ರಾಜ್ ಅಭಿಮಾನಿ ಕುಟುಂಬದ ಸದಸ್ಯನ ಬರ್ಬರ ಹತ್ಯೆ: ಪ್ರತಿಕಾರಕ್ಕಾಗಿ ನಡೆಯಿತಾ ಪ್ರಶಾಂತ್ ಹತ್ಯೆ

ಇದನ್ನೂ ಓದಿ : ಶಾಸಕರೊಬ್ಬರ ಮರ್ಸಿಡಿಸ್ ಕಾರಿನಲ್ಲಿ ಬಾಲಕಿಯ ಮೇಲೆ ಬಾಲಕರಿಂದ ಸಾಮೂಹಿಕ ಅತ್ಯಾಚಾರ

actor deepak mahadev replace to actor ninad in naagini 2 serial

Comments are closed.