Upcoming Cars : ಸಪ್ಟೆಂಬರ್‌ನಲ್ಲಿ ಭಾರತ ಮಾರುಕಟ್ಟೆಗೆ ಬರುತ್ತೆ ಈ ಕಾರುಗಳು

ದೇಶಿಯ ವಾಹನ ತಯಾರಕ ಕಂಪನಿಗಳು ಹಬ್ಬದ ಸಂದರ್ಭದಲ್ಲಿ ತಮ್ಮ ಹೊಸ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ದವಾಗುತ್ತಿವೆ. ಸೆಪ್ಟೆಂಬರ್ ನಲ್ಲಿ ಕೆಲವು ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ.. ಈ ಬಾರಿ ಎಸ್‌ಯು‌ವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳು ಇಲ್ಲಿವೆ ನೋಡಿ.

Mahindra XUV 700
ಭಾರತೀಯ ಮೂಲದ ಕಾರು ತಯಾರಕ ಕಂಪನಿಯಾದ Mahindra & Mahindra ತನ್ನ ಹೊಸ XUV 700 ಎಸ್‌ಯು‌ವಿಯನ್ನು ಆಗಸ್ಟ್ 15 ರಂದು ಅನಾವರಣಗೊಳಿಸಿತು. ಈ ಎಸ್‌ಯು‌ವಿಯನ್ನು ಸೆಪ್ಟೆಂಬರ್ 2 ರಂದು ಬಿಡುಗಡೆಗೊಳಿಸಲಾಗುವುದು. Mahindra ಕಂಪನಿಯು ಈ ಎಸ್‌ಯು‌ವಿಯನ್ನು ಈ ಸೆಗ್ ಮೆಂಟಿನಲ್ಲಿಯೇ ಮೊದಲ ಬಾರಿಗೆ ಹಲವು ಹೊಸ ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸುತ್ತಿದೆ.

ಇದನ್ನೂ ಓದಿ: Upcoming Top 10 Bikes : ಭಾರತದಲ್ಲಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಟಾಪ್‌ 10 ಬೈಕ್‌

ಈ ಫೀಚರ್ ಗಳಲ್ಲಿ ಸ್ಮಾರ್ಟ್ ಡೋ ಹ್ಯಾಂಡಲ್‌ಗಳು, ಎಡಿ‌ಎಎಸ್ ಹಾಗೂ ಇನ್ನಿತರ ಸುರಕ್ಷತಾ ಫೀಚರ್ ಗಳು ಸೇರಿವೆ. Mahindra XUV 700 ಎಸ್‌ಯು‌ವಿಯನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು. ಇವುಗಳಲ್ಲಿ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳು ಸೇರಿವೆ. 2.0 ಲೀಟರ್ ಪೆಟ್ರೋಲ್ ಎಂಜಿನ್ 200 ಬಿ‌ಹೆಚ್‌ಪಿ ಪವರ್ ಹಾಗೂ 300 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, 2.2 ಲೀಟರ್ ಡೀಸೆಲ್ ಎಂಜಿನ್ 185 ಬಿ‌ಹೆಚ್‌ಪಿ ಪವರ್ ಹಾಗೂ 420 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Volkswagen Taigun
Volkswagen ಕಂಪನಿಯು ತನ್ನ Taigun ಎಸ್‌ಯು‌ವಿಯನ್ನು ಸೆಪ್ಟೆಂಬರ್ 23 ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. Taigun ಎಸ್‌ಯು‌ವಿ Volkswagen ಕಂಪನಿಯು ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರಂನಲ್ಲಿ ನಿರ್ಮಿಸಿದ ಮೊದಲ ಕಾರ್ ಆಗಿದೆ. Taigun ಎಸ್‌ಯು‌ವಿಯನ್ನು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು. ಇವುಗಳಲ್ಲಿ 1.0 ಲೀಟರ್, 3 ಸಿಲಿಂಡರ್ ಟಿಎಸ್‌ಐ ಎಂಜಿನ್ ಹಾಗೂ 1.5 ಲೀಟರ್ 4 ಸಿಲಿಂಡರ್ ಟಿಎಸ್‌ಐ ಎಂಜಿನ್ ಗಳು ಸೇರಿವೆ.

MG Aster ಎಸ್‌ಯುವಿ
Aster ಎಸ್‌ಯುವಿಯು MG Motor ಕಂಪನಿಯ ಎಲೆಕ್ಟ್ರಿಕ್ ಎಸ್‌ಯುವಿಯಾದ MG ZS ಎಲೆಕ್ಟ್ರಿಕ್ ಕಾರಿನ ಪೆಟ್ರೋಲ್ ಆವೃತ್ತಿಯಾಗಿದೆ. MG Motor ಕಂಪನಿಯು ಈ ಕಾರಿನಲ್ಲಿ ಈ ಸೆಗ್ ಮೆಂಟಿನಲ್ಲಿಯೇ ಮೊದಲ ಬಾರಿಗೆ ಎಐ ಅಸಿಸ್ಟೆನ್ಸ್ ಹಾಗೂ ಅಟಾನಾಮಸ್ ಲೆವೆಲ್ 2 ಗಳನ್ನು ಅಳವಡಿಸಿದೆ. ಈ ಎಸ್‌ಯುವಿ 2 ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು. ಈ ಎಂಜಿನ್ ಆಯ್ಕೆಗಳಲ್ಲಿ 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹಾಗೂ 1.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಗಳು ಸೇರಿವೆ.

ಇದನ್ನೂ ಓದಿ: ಟಾಟಾ ಪರಿಚಯಿಸುತ್ತಿದೆ ಹೊಸ SUV : ಪೀಚರ್ಸ್ ಕೇಳಿದ್ರೆ ಅಚ್ಚರಿ ಪಡ್ತೀರಿ

Ford Ecosport ಫೇಸ್ ಲಿಫ್ಟ್
Ford Ecosport ಫೇಸ್ ಲಿಫ್ಟ್ ಎಸ್‌ಯು‌ವಿಯು ಪರೀಕ್ಷೆ ಸಂದರ್ಭಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದೆ. Ford ಕಂಪನಿಯು ಈ ಎಸ್‌ಯು‌ವಿಯನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲಿದೆ. ಈ ಎಸ್‌ಯು‌ವಿಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಲಾಗಿದೆ. ಈ ಎಸ್‌ಯುವಿಯನ್ನು 1.5 ಲೀಟರ್, 3 ಸಿಲಿಂಡರ್ ಟಿವಿಸಿಟಿ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಟಿಡಿಸಿಐ ​​ಡೀಸೆಲ್ ಎಂಜಿನ್ ಎರಡು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

Hyundai i20 N – Line
ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ Hyundai ತನ್ನ N – Line ಸರಣಿಯ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಸರಣಿಯ ಅಡಿಯಲ್ಲಿ Hyundai ಕಂಪನಿಯು ಮೊದಲಿಗೆ ಐ 20 ಎನ್ – ಲೈನ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಕಾರ್ ಅನ್ನು 2021 ರ ಸೆಪ್ಟೆಂಬರ್ 2 ರಂದು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು.

ಕಂಪನಿಯು ಹೊಸ ಹುಂಡೈ ಐ 20 ಎನ್ ಲೈನ್ ಸರಣಿಯಲ್ಲಿ N6 ಹಾಗೂ N8 ಎಂಬ ಎರಡು ಮಾದರಿಗಳನ್ನು ಬಿಡುಗಡೆಗೊಳಿಸಲಿದೆ. ಈ ಕಾರಿನಲ್ಲಿ ಹಲವು ಕಾಸ್ಮೆಟಿಕ್ ಅಪ್‌ಡೇಟ್‌ಗಳನ್ನು ಮಾಡಲಾಗಿದೆ. ಈ ಕಾರಿನಲ್ಲಿ Hyundai i 20 ಕಾರಿನಲ್ಲಿರುವಂತಹ 1.0 ಲೀಟರ್, 3-ಸಿಲಿಂಡರ್ ಜಿಡಿಐ, ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಹಾಗೂ 172 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Comments are closed.