Actor Armaan Kohili : ಡ್ರಗ್ಸ್‌ ಕೇಸ್‌ನಲ್ಲಿ ಬಾಲಿವುಡ್‌ ನಟ ಅರ್ಮಾನ್‌ ಕೊಯ್ಲಿ ಅರೆಸ್ಟ್‌

ಮುಂಬೈ : ಬಾಲಿವುಡ್‌ ನಟ ಅರ್ಮಾನ್‌ ಕೊಯ್ಲಿ ಅವರನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅರ್ಮಾನ್‌ ಕೊಯ್ಲಿ ಮನೆಯಲ್ಲಿ ಡ್ರಗ್ಸ್‌ ಪತ್ತೆಯಾಗಿದ್ದು, ಇದೇ ಕಾರಣವನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಮುಂಬೈನಲ್ಲಿರುವ ಅರ್ಮಾನ್‌ ಕೊಯ್ಲಿ ಅವರ ಮನೆಯಲ್ಲಿನಿನ್ನೆಯಷ್ಟೇ ಡ್ರಗ್ಸ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ದಾಳಿ ನಡೆಸಿದೆ. ದಾಳಿಯ ವೇಳೆಯಲ್ಲಿಯೂ ಸಣ್ಣ ಪ್ರಮಾಣದ ಮಾಧಕ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಟ ಅರ್ಮಾನ್‌ ಕೊಯ್ಲಿ ಹಾಗೂ ಡ್ರಗ್ಸ್‌ ಪೆಡ್ಲರ್‌ ಅಯರ್‌ ರಾಜುವನ್ನು ಎನ್‌ಸಿಬಿ ಅಧಿಕಾರಿಗಳು ಎನ್‌ಡಿಪಿಎಸ್‌ ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದಾರೆ.

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಬಾಲಿವುಡ್‌ ನಟ, ನಟಿಯರು ಡ್ರಗ್ಸ್‌ ಸೇವನೆಯ ಮಾತು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಹಲವ ನಟ, ನಟಿಯರ ಮನೆಯ ಮೇಲೆ ಎನ್‌ಸಿಬಿ ದಾಳಿಯನ್ನು ನಡೆಸಿದೆ. ಅಂತೆಯೇ ಎರಡು ದಿನಗಳ ಹಿಂದೆಯಷ್ಟೇ ಕಿರುತೆರೆ ನಟ ಗೌರವ್ ದೀಕ್ಷಿತ್ ಅವರನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳ ಬಂಧಿಸಿತ್ತು. ಇದರ ಮುಂದುವರಿದ ಭಾಗವಾಗಿ ನಿನ್ನೆ ಅರ್ಮಾನ್ ಕೊಹ್ಲಿ ಅವರ ನಿವಾಸದ ಮೇಲೆ ದಾಳಿ ನಡೆಸಿದೆ.

ಇದನ್ನೂ ಓದಿ : ಎದೆ ತುಂಬಿ ಬಂತು ಸೂರ್ಯನ ಹಾಡು ; ಕೈಮುಗಿದಿದೆ ಕರುನಾಡು

ಇದನ್ನೂ ಓದಿ : Priyanka timmesh: ಹಾಟ್ ಆಂಡ್ ಬೋಲ್ಡ್ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಪ್ರಿಯಾಂಕಾ ತಿಮ್ಮೇಶ್

(Actor Armaan Kohli got arrested in drugs case)

Comments are closed.