Upcoming SUVs : ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ 6 SUV ಕಾರುಗಳು

ಈಗ ವಿಶ್ವದಲ್ಲಿ ಅತ್ಯಂತ ಜನಪ್ರಿಯ ಕಾರು ಮಾದರಿಗಳೆಂದರೆ SUV ಆಗಿದೆ. ಈ ಶೈಲಿಯ ಕಾರುಗಳನ್ನು ಬಹಳಷ್ಟು ಜನರು ಮೆಚ್ಚಿಕೊಂಡಿದ್ದಾರೆ. ಅದಕ್ಕಾಗಿಯೇ ಹೆಚ್ಚಿನ ತಯಾರಕರು SUVಗಳನ್ನು ಪರಿಚಯಿಸುವತ್ತ ಗಮನಹಿರಿಸುತ್ತಿದ್ದಾರೆ. ಈಗ ನಾವು ವರ್ಷದ ಕೊನೆಯ ತಿಂಗಳುವಿನಲ್ಲಿ ಇದ್ದೇವೆ. ಇನ್ನೂ ಕೆಲವು ಹೊಸ ವಾಹನಗಳು (Upcoming SUVs) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ. ಅವುಗಳಲ್ಲಿ ಹೆಚ್ಚಿನವು SUV ಗಳಾಗಿವೆ.

ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ 6 SUV ಕಾರುಗಳು ಕಿರು ಪರಿಚಯ ಇಲ್ಲಿದೆ.

ಮಾರುತಿ ಸುಜುಕಿ ಗ್ರ್ಯಾಂಡ್‌ ವಿಟಾರಾ ಸಿಎನ್‌ಜಿ :
ಪ್ರಸ್ತುತ ಭಾರತದಲ್ಲಿ ಮಾರುತಿ ಸುಜುಕಿ ಸಿಎನ್‌ಜಿ ವಿಭಾಗದಲ್ಲಿ ಮುಂಚೂಣಿಯಲ್ಲಿದೆ ಏಕೆಂದರೆ ಅದು ಹೆಚ್ಚು ಸಿಎನ್‌ಜಿ ವಾಹನಗಳನ್ನು ಮರುಕಟ್ಟೆಗೆ ಪರಿಚಯಿಸಿದೆ. ಮಾರುತಿ ಸುಜುಕಿಯು ತಮ್ಮ ಗ್ರ್ಯಾಂಡ್ ವಿಟಾರಾ ಎಸ್‌ಯುವಿಗಾಗಿ ಸಿಎನ್‌ಜಿ ಪವರ್‌ಟ್ರೇನ್ ಅನ್ನು ಸಹ ನೀಡಲಿದೆ. ಇದು 1.5-ಲೀಟರ್ ಎಂಜಿನ್ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರಲಿದೆ. ಇಂಧನ ದಕ್ಷತೆಯ ಅಂಕಿಅಂಶವು ಸುಮಾರು ಪ್ರತಿ ಕೆಜಿಗೆ 26 ಕಿಮೀ ಎಂದು ಹೇಳಲಾಗುತ್ತಿದೆ.

ಟೊಯೊಟಾ ಅರ್ಬನ್‌ ಕ್ರೂಸರ್‌ ಹೈರೈಡರ್‌ ಸಿಎನ್‌ಜಿ :
ಟೊಯೋಟಾ ನವೆಂಬರ್‌ನಲ್ಲಿ ಗ್ಲ್ಯಾನ್ಜಾ ಮತ್ತು ಅರ್ಬನ್ ಕ್ರೂಸರ್ ಹೈರೈಡರ್‌ನ ಸಿಎನ್‌ಜಿ ಆವೃತ್ತಿಯನ್ನು ಮಾರಾಟ ಮಾಡುವುದಾಗಿ ಘೋಷಿಸಿತ್ತು. ಆದರೆ ಅದು ಗ್ಲ್ಯಾನ್ಜಾ CNG ಬೆಲೆಗಳನ್ನು ಘೋಷಿಸಿದರೂ ಅರ್ಬನ್ ಕ್ರೂಸರ್ ಹೈರೈಡರ್ CNG ಬೆಲೆಯನ್ನು ಬಹಿರಂಗಪಡಿಸಿರಲಿಲ್ಲ. ಟೊಯೊಟಾ ಹೈರೈಡರ್‌ನ ಸಿಎನ್‌ಜಿ ಪವರ್‌ಟ್ರೇನ್ ಮುಂದಿನ ತಿಂಗಳು ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಮಾರುತಿಯ 1.5-ಲೀಟರ್ ಕೆ-ಸಿರೀಸ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಹೊಂದಿದೆ. ಟೊಯೊಟಾವು ಪ್ರತಿ ಕೆಜಿಗೆ 26.10 ಕಿಮೀ ಇಂಧನ ದಕ್ಷತೆ ನೀಡಲಿದೆ ಎಂದು ಹೇಳಿಕೊಂಡಿದೆ.

BMW X7:
BMW ಜಾಗತಿಕ ಮಾರುಕಟ್ಟೆಯಲ್ಲಿ X7 ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಈಗಾಗಲೇ ಅನಾವರಣಗೊಳಿಸಿದೆ. ಈಗ ಅದನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದು ಡಿಸೆಂಬರ್ 10 ರಂದು ಬಿಡುಗಡೆಯಾಗಲಿದೆ. BMW X7 ನ ಮುಂಭಾಗವನ್ನು ಹೆಚ್ಚು ಪರಿಷ್ಕರಿಸಲಾಗಿದೆ. ಒಳಭಾಗವನ್ನು ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ನವೀಕರಿಸಲಾಗಿದೆ.

BMW XM :
BMW ವಿನ ಈ ಕಾರು M ವಿಭಾಗದಿಂದ ತಯಾರಾದ ಎರಡನೇ ಬೆಸ್ಪೋಕ್ ಮಾಡೆಲ್ ಆಗಿದೆ. ಇದನ್ನು ಡಿಸೆಂಬರ್ 10 ರಂದು ಬಿಡುಗಡೆಮಾಡಲಿದೆ.
4.4-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್‌ ಹೊಂದಿದೆ. BMW XM ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಪಡೆದ ಮೊದಲ M ಮಾದರಿಯಾಗಿದೆ. MBW XM SUV ಕಾರು EV ಮೋಡ್‌ನಲ್ಲಿ 80 ಕಿಮೀ ವರೆಗೆ ಕ್ರಮಿಸಬಲ್ಲದು.

ಮರ್ಸಡೀಸ್‌ ಬೆಂಜ್‌ GLB :
ಮರ್ಸಡೀಸ್‌ ಬೆಂಜ್‌ GLB ಡಿಸೆಂಬರ್ 2 ರಂದು ಬಿಡುಗಡೆಯಾಗಲಿದೆ. ಇದು ಮೆಕ್ಸಿಕೋದಿಂದ ಕಂಪ್ಲೀಟ್‌ಲೀ ಬಿಲ್ಟ್‌ ಯುನಿಟ್‌ (CBU) ಬರಲಿದೆ. GLB ಭಾರತೀಯ ಮಾರುಕಟ್ಟೆಗೆ ಮರ್ಸಡೀಸ್-ಬೆಂಜ್‌ನ ಏಳು ಆಸನಗಳಿರುವ ಎರಡನೇ SUV ಆಗಿದೆ. ಇದು 190 hp ಯ 1.3 ಲೀಟರ್ ಟರ್ಬೊ ಪೆಟ್ರೋಲ್ ಅಥವಾ 163 hp ಯ 2.0 ಲೀಟರ್ ಡೀಸೆಲ್ ಎಂಜಿನ್‌ ಗಳಲ್ಲಿ ಬರಲಿದೆ.

ಮರ್ಸಡೀಸ್‌ ಬೆಂಜ್‌ EQB:
ಮರ್ಸಡೀಸ್‌ ಬೆಂಜ್‌ ಪ್ರಸ್ತುತ ಐಷಾರಾಮಿ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಯಾರಕರಲ್ಲಿ ಒಂದಾಗಿದೆ. ಅವರು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ EQS ಮತ್ತು EQC ಅನ್ನು ಬಿಡುಗಡೆಮಾಡಿದ್ದಾರೆ. ಮತ್ತೆ ಈಗ ಅವರು EQB ಅನ್ನು ಪರಿಚಯಿಸಲಿದ್ದಾರೆ. ಹೊಸ EV EQB ಅನ್ನು GLB ಜೊತೆಗೆ ಡಿಸೆಂಬರ್ 2 ರಂದು ಬಿಡುಗಡೆ ಮಾಡಲಿದೆ.

ಇದನ್ನೂ ಓದಿ : Toyota Innova Hycross : ಹೊಸ ತಲೆಮಾರಿನ ಕಾರು : ಟೊಯೊಟಾ ಇನ್ನೋವಾ ಹೈಕ್ರಾಸ್‌ ಅನಾವರಣ

ಇದನ್ನೂ ಓದಿ : Used EV Purchase : ನಿಮಗಿದು ಗೊತ್ತಾ; ಸೆಕೆಂಡ್‌ ಹ್ಯಾಂಡ್‌ ಇಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವ ಮೊದಲು ಏನೇನು ಚೆಕ್‌ ಮಾಡಬೇಕು ಎಂದು…

(Upcoming SUVs to launch in December bmw x7,xm, toyota hyryder, mercedes benz eqb and more)

Comments are closed.