PFI Ban Petition Dismissed: ಪಿಎಫ್‌ಐ ಬ್ಯಾನ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ: ಏಕಸದಸ್ಯ ಪೀಠದಿಂದ ಮಹತ್ವದ ತೀರ್ಪು

ಬೆಂಗಳೂರು: (PFI Ban Petition Dismissed) ದೇಶದಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ನಿಷೇಧವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು, ಏಕಸದಸ್ಯ ಪೀಠ ಬುಧವಾರ ವಜಾ ಮಾಡಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕರ್ನಾಟಕದ ಪಿಎಫ್‌ಐ ಅಧ್ಯಕ್ಷ ನಾಸಿರ್‌ ಅಲಿ ರಿಟ್‌ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಕುರಿತಾಗಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಇಂದು ಮಹತ್ವದ ಆದೇಶ ಪ್ರಕಟಿಸಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI Ban Petition Dismissed) ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳನ್ನು 5 ವರ್ಷದ ಅವಧಿಗೆ ‘ತಕ್ಷಣದ ಪರಿಣಾಮ’ದೊಂದಿಗೆ “ಕಾನೂನುಬಾಹಿರ ಸಂಘಗಳು” ಎಂದು ಘೋಷಿಸಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿದೆ.

ಕರ್ನಾಟಕ ಪಿಎಫ್‌ಐ ಅಧ್ಯಕ್ಷ ನಾಸಿರ್‌ ಅಲಿ ಪ್ರಸ್ತುತ ಜೈಲಿನಲ್ಲಿದ್ದು, ಪತ್ನಿ ಮೂಲಕ ರಿಟ್‌ ಅರ್ಜಿ ಸಲ್ಲಿಕೆ ಮಾಡಿದ್ದರು. ವಾದ ವಿವಾದಗಳನ್ನು ಆಲಿಸಿದ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿತ್ತು. ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್ ವಾದಿಸಿದರು. ಅಪರಾಧದ ವಿವಿಧ ಘಟನೆಗಳ ಬಗ್ಗೆ ಕೇಂದ್ರವು ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಇದು ಸಂವಿಧಾನದ 19 ನೇ ವಿಧಿಯ ಅಡಿಯಲ್ಲಿ ನೀಡಲಾದ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ನಿರ್ಬಂಧಿಸುತ್ತದೆ ಎಂದು ಮನವಿಯಲ್ಲಿ ಹೇಳಲಾಗಿತ್ತು.

ಇದನ್ನೂ ಓದಿ : Karnataka Farmer : ಕರ್ನಾಟಕದ ರೈತ 205 ಕೆಜಿ ಈರುಳ್ಳಿಯನ್ನು ಕೇವಲ 8.36 ರೂ.ಗೆ ಮಾರಾಟ ಮಾಡಿದ ರಸೀದಿ ಫೋಟೋ ವೈರಲ್

ಇದನ್ನೂ ಓದಿ : KSRTC Money offer: ಹೀಗೊಂದು ಬಂಪರ್ ಆಫರ್: ಕೆಎಸ್ ಆರ್ ಟಿಸಿ ಗೆ ಐಡಿಯಾ ಕೊಡಿ; 35 ಸಾವಿರ ರೂ. ಬಹುಮಾನ ಗೆಲ್ಲಿ..!

A single member bench on Wednesday dismissed a petition filed in the Karnataka High Court challenging the ban on the Popular Front of India (PFI) in the country. Karnataka PFI President Nasir Ali had filed a writ petition challenging the central government’s decision. The single-member bench headed by Justice M. Nagaprasanna, which heard the matter, announced an important order today.

Comments are closed.