Sugarcane Juice Benefits : ಕಬ್ಬಿನ ಹಾಲಿನ ಆರೋಗ್ಯ ಪ್ರಯೋಜನಗಳು ನಿಮಗೆ ಗೊತ್ತಾ…

ನಮಗೆಲ್ಲಾ ತಿಳಿದಿರುವಂತೆ ಕಿಡ್ನಿ (Kidney) ಯ ತೊಂದರೆ ಇರುವವರಿಗೆ ಕಬ್ಬಿನ ಹಾಲ (Sugarcane Juice) ನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಕಬ್ಬಿನ ಹಾಲು ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಆಯಾಸವನ್ನು ನೀಗಿಸುತ್ತದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ (Sugarcane Juice Benefits) . ಕಬ್ಬಿನ ಹಾಲನ್ನು ನೇರವಾಗಿ ಕಬ್ಬಿನಂದಲೇ ತೆಗೆಯಲಾಗುವುದರಿಂದ ಇದರಲ್ಲಿ ಯಾವುದೇ ಸಂರಕ್ಷಕಗಳಿರುವುದಿಲ್ಲ. ಅದಲ್ಲದೆ, ಇದು ಕೊಬ್ಬು ರಹಿತವಾಗಿದ್ದು ಮತ್ತು ನೈಸರ್ಗಿಕವಾಗಿ ಸಿಹಿ ಗುಣವನ್ನು ಹೊಂದಿದೆ. ಇದು ಕೊಬ್ಬು, ಪ್ರೋಟೀನ್, ಕೊಲೆಸ್ಟ್ರಾಲ್ ಮತ್ತು ಫೈಬರ್ ಅನ್ನು ಹೊಂದಿರುವುದಿಲ್ಲ. ಆದರೆ ಇದು ಸೋಡಿಯಂ, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳನ್ನು ಹೊಂದಿದೆ.

ಕಬ್ಬಿನ ಹಾಲಿನ ಪ್ರಯೋಜನಗಳು:
ಕಬ್ಬಿನ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ.

ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ:
ಕಬ್ಬಿನ ಹಾಲು ಮೂತ್ರವರ್ಧಕ. ಇದು ಯಾವುದೇ ರೀತಿಯ ಸೋಂಕಿನಿಂದ ದೂರವಿರಲು ಸಹಾಯ ಮಾಡುತ್ತದೆ. ಮೂತ್ರದ ಸೋಂಕಿನಂತಹ ಸೋಂಕುಗಳು ಸಾಮಾನ್ಯವಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ಅನುಭವಕ್ಕೆ ಬರುತ್ತದೆ. ಮತ್ತು ಇದು ಮೂತ್ರಪಿಂಡದ ಕಲ್ಲನ್ನು ಸಹ ತಡೆಯುತ್ತದೆ.

ಪಿತ್ತಜನಕಾಂಗದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ:
ಕಬ್ಬಿನ ರಸವು ಪ್ರಕೃತಿಯಲ್ಲಿ ಕ್ಷಾರೀಯವಾಗಿರುವುದರಿಂದ, ಯಕೃತ್ತಿನ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮತ್ತು ಮಾನವ ದೇಹದಲ್ಲಿ ಎಲೆಕ್ಟ್ರಾಲ್‌ ಬ್ಯಾಲೆನ್ಸ್‌ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಬ್ಬಿನ ಹಾಲು ಉತ್ತಮ ನೈಸರ್ಗಿಕ ಮೂಲವಾಗಿದೆ.

ಬಾಯಿಯಿಂದ ಬರುವ ದುರ್ವಾಸನೆಯನ್ನು ತಡೆಯಲು ಸಹಾಯ ಮಾಡುತ್ತದೆ:
ಕಬ್ಬಿನ ರಸವು ರಂಜಕ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇದು ಹಲ್ಲುಗಳ ದಂತಕವಚವನ್ನು ರಕ್ಷಿಸಲು ಮತ್ತು ಅವುಗಳನ್ನು ಬಲಪಡಿಸಲು ಉತ್ತಮವಾಗಿದೆ. ಇದರಲ್ಲಿ ಕಂಡುಬರುವ ಪೋಷಕಾಂಶವು, ಪೋಷಕಾಂಶಗಳ ಕೊರತೆಯಿಂದಾಗಿ ಸಂಭವಿಸುವ ಬಾಯಿಯ ದುರ್ವಾಸನೆ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ:
ಕಬ್ಬಿನ ರಸದಲ್ಲಿ ರಂಜಕ ಇರುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸತ್ತದೆ. ಇದಲ್ಲದೇ ಹೊಟ್ಟೆಯ ಸೋಂಕನ್ನು ತಡೆಯುತ್ತದೆ. ಮಲಬದ್ಧತೆಯಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ.

ಕಬ್ಬಿನ ರಸ ಚರ್ಮದ ರಕ್ಷಣೆಯಲ್ಲಿ ಸಹಾಯ ಮಾಡುತ್ತದೆ:
ಕಬ್ಬಿನ ರಸದಲ್ಲಿ ಕಂಡುಬರುವ ಖನಿಜಗಳು ಮೊಡವೆ, ಕೆಂಪು ಮತ್ತು ಚರ್ಮ ಕಳೆಗುಂದುವಂತಹ ಚರ್ಮ-ಸಂಬಂಧಿತ ಸಮಸ್ಯೆಗಳಿಗೆ ಅದ್ಭುತ ಪರಿಹಾರವನ್ನು ನೀಡುತ್ತದೆ. ಕಬ್ಬಿನ ಹಾಲು ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಬ್ಬಿನ ರಸದಲ್ಲಿರುವ ಗ್ಲೈಕೋಲಿಕ್ ಆಮ್ಲವು ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮೂಳೆಗಳ ಬಲವರ್ಧನೆಗೆ ಸಹಾಯ ಮಾಡುತ್ತದೆ:
ಕಬ್ಬು ರಂಜಕ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳ ಆಗರವಾಗಿದೆ. ಇವೆಲ್ಲವೂ ಮೂಳೆಗಳನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತದೆ. ಒಂದು ಗ್ಲಾಸ್‌ ಕಬ್ಬಿನ ಹಾಲು ಬೆಳೆಯುವ ಮಕ್ಕಳ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Jeera Soda Recipe: ಮನೆಯಲ್ಲಿಯೇ ತಯಾರಿಸಿ ಅಂಗಡಿಯಲ್ಲಿ ಸಿಗುವ ಜೀರಾ ಸೋಡ

ಇದನ್ನೂ ಓದಿ : Pomegranate Peel Tambuli:ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ಮಾಡಿ ನೋಡಿ ರುಚಿ ರುಚಿ ತಂಬುಳಿ

(Sugarcane Juice Benefits it helps for kidney problems)

Comments are closed.