ಬೆಂಗಳೂರು : ಪಾಪಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ ಆರೋಪದಡಿ ಅಮೂಲ್ಯ ಲಿಯೋನ್ ಬಂಧನವಾಗಿದೆ. ಆದ್ರಿಂದು ಮತ್ತೊಂದು ಯುವತಿ ಪಾಕ್ ಪರ ಘೋಷಣೆ ಕೂಗಿದ್ದಾಳೆ. ಪಾಕ್ ಪ್ರೇಮ ತೋರಿಸಿದ ಯುವತಿಯನ್ನು ಆರ್ದ್ರಾ ನಾರಾಯಣ್ ಎಂದು ಗುರುತಿಸಲಾಗಿದ್ದು, ಯುವತಿಯನ್ನು ವಶಕ್ಕೆ ಪಡೆದಿರೋ ಪೊಲೀಸರು ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಪಾಕಿಸ್ತಾನಕ್ಕೆ ಜೈಕಾರ ಹಾಕಿರೋ ಅಮೂಲ್ಯ ವಿರುದ್ದ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಅಂತೆಯೇ ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿಯೂ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆಯಲ್ಲಿ ಆರ್ದ್ರಾ ನಾರಾಯಣ್ ಪಾಕ್ ಪರ ಘೋಷಣೆ ಕೂಗಿದ್ದಾಳೆ. ಮಾತ್ರವಲ್ಲ ಕೈಯಲ್ಲಿ ಪ್ರೀ ಕಾಶ್ಮೀರ್ ಬಿತ್ತಿಪತ್ರ ಹಿಡಿದಿದ್ದಳು. ಯುವತಿಯನ್ನು ಬಂಧಿಸುತ್ತಿದ್ದಂತೆಯೇ ಪೊಲೀಸರು ಆಕೆಯನ್ನು ಬಂಧಿಸಿದ್ದು, ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಆರ್ದ್ರಾ ನಾರಾಯಣ್ ಹಾಗೂ ಅಮೂಲ್ಯ ಲಿಯೋನಿ ಸ್ನೇಹಿತರಾಗಿದ್ದು, ಹಲವಾರು ಹೋರಾಟಗಳಲ್ಲಿ ಜೊತೆಯಾಗಿದ್ದವರು ಎಂದು ತಿಳಿದು ಬಂದಿದೆ. ಇದೀಗ ಆರ್ದ್ರಾ ನಾರಾಯಣ್ ಹಿನ್ನೆಲೆಯ ಕುರಿತು ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಆದರೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ ರಾವ್, ಯುವತಿ ಪಾಕ್ ಪರ ಘೋಷಣೆ ಕೂಗಿಲ್ಲ, ಬದಲಾಗಿ “ದಲಿತ ಮುಕ್ತಿ, ಕಾಶ್ಮೀರ ಮುಕ್ತಿ ಹಾಗು ಮುಸ್ಲಿಂ ಮುಕ್ತಿ” ಎಂದು ಭಿತ್ತಿಪತ್ರ ಪ್ರದರ್ಶಿಸಿದ್ದಾಳೆ. ಈಗಾಗಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.