WTC, ಏಕದಿನ ವಿಶ್ವಕಪ್, U19 ವಿಶ್ವಕಪ್‌ : ಭಾರತ ವಿರುದ್ದ ಹ್ಯಾಟ್ರಿಕ್‌ ಐಸಿಸಿ ಟ್ರೋಫಿ ಗೆದ್ದ ಆಸ್ಟ್ರೇಲಿಯಾ

U19 World Cup : ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌, ಏಕದಿನ ವಿಶ್ವಕಪ್‌ ಸೋಲಿನ ಬೆನ್ನಲ್ಲೇ ಭಾರತ ತಂಡ ಇದೀಗ ಆಸ್ಟ್ರೇಲಿಯಾ ಇದೀಗ U19 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸೋಲನ್ನು ಕಂಡಿದೆ.

U19 World Cup : ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC), ಏಕದಿನ ವಿಶ್ವಕಪ್‌ (ODI World Cup 2023) ಸೋಲಿನ ಬೆನ್ನಲ್ಲೇ ಭಾರತ ತಂಡ ( Indian Cricket Team) ಇದೀಗ ಆಸ್ಟ್ರೇಲಿಯಾ ಇದೀಗ U19 ವಿಶ್ವಕಪ್‌ ಫೈನಲ್‌  ಪಂದ್ಯದಲ್ಲಿ ಸೋಲನ್ನು ಕಂಡಿದೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ದ ಭಾರತ ಹ್ಯಾಟ್ರಿಕ್‌ ಐಸಿಸಿ ಟ್ರೋಫಿಯಲ್ಲಿ ( ICC Trophy ) ಸೋಲು ಕಂಡಿದೆ. ಈ ಮೂಲಕ ಕೋಟ್ಯಾಂತರ ಭಾರತೀಯರಿಗೆ ನಿರಾಸೆಯಾಗಿದೆ.

ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ 2023 ರ ODI ವಿಶ್ವಕಪ್ ಫೈನಲ್‌ ಫೈನಲ್‌ಗೆ ಅಜೇಯವಾಗಿ ಎಂಟ್ರಿ ಕೊಟ್ಟಿತ್ತು. ದಶಕದಿಂದಲೂ ಐಸಿಸಿ ಟ್ರೋಫಿ ಗೆಲ್ಲುವ ಭಾರತದ ಕನಸು ನನಸಾಗುತ್ತೆ ಅಂತ ಭಾರತೀಯರು ನಿರೀಕ್ಷೆಯಲ್ಲಿದ್ದರು. ಆದರೆ ಆಸ್ಟ್ರೇಲಿಯ ತಂಡ ನಿರಾಸೆ ಅನುಭವಿಸುವಂತೆ ಮಾಡಿದೆ. ಪ್ಯಾಟ್‌ ಕಮ್ಮಿನ್ಸ್‌ ನೇತೃತ್ವದ ತಂಡ ಭಾರತವನ್ನು ಸೋಲಿಸುವ ಮೂಲಕ ಆರನೇ ಬಾರಿಗೆ ವಿಶ್ವಕಪ್‌ ಗೆದ್ದು ಬೀಗಿತ್ತು.

WTC ODI World Cup U19 World Cup Australia clinch hat-trick ICC trophy against India
Image Credit to Original Source

ಇದರ ಬೆನ್ನಲ್ಲೇ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡ ಲೀಗ್‌, ಸೆಮಿಫೈನಲ್‌ ಹಂತದಲ್ಲಿ ಒಂದೇ ಒಂದು ಸೋಲನ್ನು ಕಾಣದೆ ಫೈನಲ್‌ಗೆ ಎಂಟ್ರಿಯನ್ನು ಕೊಟ್ಟಿತ್ತು. ಆದರೆ ಫೈನಲ್‌ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ದ ಸೋಲನ್ನು ಕಾಣುವ ಮೂಲಕ ಪತ್ತೆ ನಿರಾಸೆಯನ್ನು ಅನುಭವಿಸಿದೆ.

ಇದನ್ನೂ ಓದಿ : U19 WC 2024 ಫೈನಲ್ ನಲ್ಲಿ ಎದುರಾಗುತ್ತಾ ಭಾರತ-ಪಾಕಿಸ್ತಾನ ? ಇಂದು 2ನೇ ಸೆಮಿಫೈನಲ್‌ ಹೈವೋಲ್ಟೇಜ್‌ ಪಂದ್ಯ

ನಾಲ್ಕನೇ ವಿಕೆಟ್‌ಗೆ ಹರ್ಜಸ್ ಸಿಂಗ್ ಮತ್ತು ರಯಾನ್ ಹಿಕ್ಸ್ ನಡುವೆ 66 ರನ್‌ಗಳ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ 254 ರನ್‌ಗಳ ದಾಖಲೆಯ ಗುರಿಯನ್ನು ನೀಡಿತ್ತು. ಆದರೆ ದಕ್ಷಿಣ ಆಫ್ರಿಕಾ ತಂಡದ ವಿರುದ್ದ ಭರ್ಜರಿ ಗೆಲುವು ತಂದುಕೊಟ್ಟಿದ್ದ ಸಹರಾನ್‌ ಮತ್ತು ಸಚಿನ್‌ ದಾಸ್‌ ಫೈನಲ್‌ ಪಂದ್ಯದಲ್ಲಿ ನಿರೀಕ್ಷಿತ ಆಟದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆರಂಭಿಕ ಆಟಗಾರ ಆದರ್ಶ್‌ ಸಿಂಗ್‌ ಉತ್ತಮ ಇನ್ನಿಂಗ್ಸ್‌ ಕಟ್ಟು ಭರವಸೆ ಮೂಡಿಸಿದ್ದರೂ ಕೂಡ ಗೆಲುವು ತಂದುಕೊಡುವಲ್ಲಿ ವಿಫಲರಾದರು.

ಆಸ್ಟ್ರೇಲಿಯಾ ತಂಡ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನತ್ತಲು ಹೊರಟ ಭಾರತ ತಂಡದಲ್ಲಿ ಮಧ್ಯಮ ಕ್ರಮಾಂಕ ಕೈಕೊಟ್ಟಿತ್ತು. ಯಾವೊಬ್ಬ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್‌ಗೆ ಅಂಟಿಕೊಂಡು ಆಡುವಲ್ಲಿ ವಿಫಲರಾದ್ರು. ಅಂತಿಮವಾಗಿ ಭಾರತ ತಂಡ 43.5 ಓವರ್‌ಗಳಲ್ಲಿ 174 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಭಾರತ ತಂಡದ ವಿಶ್ವಕಪ್‌ ಗೆಲುವು ಸಾಧ್ಯವಾಗಲೇ ಇಲ್ಲ.

ಇದನ್ನೂ ಓದಿ : ಮಹೇಂದ್ರ ಸಿಂಗ್‌ ಧೋನಿಗೆ IPL 2024 ಕೊನೆಯ ಐಪಿಎಲ್‌ ? ಚೆನ್ನೈ ಸೂಪರ್‌ ಕಿಂಗ್ಸ್‌ ಪರ ತರಬೇತಿ ಆರಂಭಿಸಿದ ಮಾಹಿ

2023 WTC ಫೈನಲ್ – ಭಾರತಕ್ಕೆ 209 ರನ್‌ ಸೋಲು

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಬಾರ್ಡರ್‌ – ಗವಾಸ್ಕರ್‌ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಆದರೆ ಓವಲ್‌ನಲ್ಲಿ ನಡೆದ ಫೈನಲ್‌ನಲ್ಲಿ ಟ್ರಾವಿಸ್ ಹೆಡ್ 163 ರನ್‌ಗಳ ಅದ್ಬುತ ಆಟ ಭಾರತಕ್ಕೆ ಸೋಲನ್ನು ತಂದೊಡ್ಡಿತ್ತು.ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಅವರೊಂದಿಗೆ 89 ರನ್ ಮತ್ತು 71 ರನ್‌ ಜೊತೆಯಾಟದಿಂದಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಸವಾಲು ಒಡ್ಡಿತ್ತು.

WTC ODI World Cup U19 World Cup Australia clinch hat-trick ICC trophy against India
Image Credit to Original Source

ಇದನ್ನೂ ಓದಿ : ಐಪಿಎಲ್ 2024 ಬಳಿಕ ಮುಂಬೈ ಇಂಡಿಯನ್ಸ್‌ನಿಂದ ದೂರವಾಗ್ತಾರಾ ರೋಹಿತ್‌ ಶರ್ಮಾ ? ಸುಳಿವು ಕೊಟ್ಟ ಕೋಚ್‌ ಬೌಚರ್‌

ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅಲೆಕ್ಸ್ ಕ್ಯಾರಿ 66 ರನ್ ಹಾಗೂ ಮಿಚೆಲ್ ಸ್ಟಾರ್ಕ್ ಜೊತೆಗಿನ 93 ರನ್ ಗಳ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ ತಂಡ 444 ರನ್‌ಗಳ ಬೃಹತ್‌ ಸವಾಲು ಒಡ್ಡಿತ್ತು. ವಿರಾಟ್‌ ಕೊಹ್ಲಿ, ಅಜಿಂಕ್ಯಾ ರಹಾನೆ ಪ್ರತಿರೋಧ ಒಡ್ಡಿದ್ದರೂ ಕೂಡ ಗೆಲುವು ತಂದುಕೊಡಲು ಸಾಧ್ಯವಾಗಲೇ ಇಲ್ಲ.

2023 ODI ವಿಶ್ವಕಪ್ ಫೈನಲ್ : ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ 6 ವಿಕೆಟ್‌ ಸೋಲು

ಇನ್ನು ಆಸ್ಟ್ರೇಲಿಯಾ ತಂಡಕ್ಕೆ ಟ್ರಾವೆಸ್‌ ಹೆಡ್‌ ಹಿರೋ ಆಗಿ ಕಾಣಿಸಿಕೊಂಡಿದ್ದು ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ. ಟ್ರಾವೆಸ್‌ ಹೆಡ್‌ 137 ರನ್‌ ಬಾರಿಸುವ ಮೂಲಕ ಭಾರತಕ್ಕೆ ಸವಾಲು ಒಡ್ಡಿದ್ದರು. ನಾಯಕ ರೋಹಿತ್‌ ಶರ್ಮಾ ಸ್ಪೋಟಕ ಬ್ಯಾಟಿಂಗ್‌ ನಡೆದಿದ್ದರು. ಆದರೆ ವಿರಾಟ್‌ ಕೊಹ್ಲಿ ಹಾಗೂ ಕೆಎಲ್‌ ರಾಹುಲ್‌ ಅವರ ನಿಧಾನಗತಿಯ ಜೊತೆಯಾಟ ಆಡಿದ್ದರೂ ಕೂಡ ಭಾರತಕ್ಕೆ ಗೆಲುವು ಪಡೆಯಲು ಸಾಧ್ಯವಾಗಿಲ್ಲ.

WTC ODI World Cup U19 World Cup Australia clinch hat-trick ICC trophy against India

Comments are closed.