ಚುನಾವಣೆ ಎಫೆಕ್ಟ್….! ಕೊವೀಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಪೋಟೋ ತೆರವಿಗೆ ಸೂಚನೆ…!!

ಪಂಚ ರಾಜ್ಯ ಚುನಾವಣೆ ಎಫೆಕ್ಟ್ ಕೇಂದ್ರ ಸರ್ಕಾರಕ್ಕೆ ತಾಗಿದ್ದು, ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪೋಟೋ ತೆರವಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ.

ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿರುವ ಆಯೋಗ ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಚುನಾವಣೆ ನೀತಿ ಸಂಹಿತೆ ಪಾಲಿಸುವಂತೆ ಹಾಗೂ ಆರೋಗ್ಯಕರ ಸ್ಪೂರ್ತಿದಾಯಕ ನೀತಿಯನ್ನು ಪಾಲಿಸುವಂತೆ ಹೇಳಿದೆ. ಹೀಗಾಗಿ ಪರೋಕ್ಷವಾಗಿ ಮೋದಿ ಪೋಟೋ ತೆರವಿಗೆ ಸೂಚಿಸಿದೆ ಎನ್ನಲಾಗುತ್ತಿದೆ.

ಕೆಲ ದಿನಗಳ ಹಿಂದೆಯಷ್ಟೇ ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಪೋಟೋ ಬಳಸುವ ಮೂಲಕ ಜನರ ಮೇಲೆ ಪ್ರಭಾವ ಬೀರುವ ಹಾಗೂ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸುವ ಕೆಲಸ ನಡೆದಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದ್ದಲ್ಲದೇ ಆಯೋಗಕ್ಕೆ ದೂರು ನೀಡಿತ್ತು.

ಪಶ್ಚಿಮಬಂಗಾಳ.ತಮಿಳುನಾಡು,ಕೇರಳ,ಪುದುಚೇರಿ,ಅಸ್ಸಾಂಗಳಲ್ಲಿ ಇನ್ನೆರಡು ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಲಸಿಕೆ ಬ್ಯಾನರ್ ಹಾಗೂ ಪ್ರಮಾಣಪತ್ರದಲ್ಲಿ ಮೋದಿ ಪೋಟೋ ಬಳಕೆ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಲಾಗಿದೆ.

Comments are closed.