ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ : ನಟಿ ರಾಗಿಣಿ, ಸಂಜನಾಗೆ ಇಂದು ಸಿಗುತ್ತಾ ಜಾಮೀನು

0

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿಗೆ ಜಾಮೀನು ಅರ್ಜಿ ಇಂದು ನಿರ್ಧಾರವಾಗಲಿದೆ. ನಟಿ ಮಣಿಯರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಎನ್‍ಡಿಪಿಎಸ್ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದಿನಕ್ಕೊಬ್ಬರನ್ನು ಪ್ರಕರಣದಡಿಯಲ್ಲಿ ಬಂಧಿಸುತ್ತಿದ್ದಾರೆ. ಈಗಾಗಲೇ ನಟಿ ರಾಗಿಣಿ ಹಾಗೂ ಸಂಜನಾ ಅವರನ್ನು ವಿಚಾರಣೆ ನಡೆಸಿರು ಸಿಸಿಬಿ ಪೊಲೀಸರು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ನಟಿಯರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನವಿಧಿಸಿ ಆದೇಶಿಸಿತ್ತು. ನಟಿ ಮಣಿಯರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಶನಿವಾರ ವಿಚಾರಣೆ ನಡೆದಾಗ ಸಿಸಿಬಿ ಪರ ವಕೀಲರು ಎಲ್ಲ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಸೋಮವಾರದವರೆಗೂ ಸಮಯ ಕೇಳಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರು ಈಗಾಗಲೇ ಸಾಕ್ಷ್ಯ ನಾಶದ ಆರೋಪ ಇದೆ. ಹೀಗಾಗಿ ಮತ್ತೆ ಸಾಕ್ಷ್ಯ ನಾಶ ಮಾಡ್ತಾರೆ. ಇವರಿಂದ ಮತ್ತಷ್ಟು ಆರೋಪಿಗಳು ಬಚವಾಗೋ ಸಾಧ್ಯತೆ ಇದೆ. ಅಲ್ಲದೆ ಜಾಮೀನು ಸಿಕ್ಕರೆ ಮತ್ತೆ ವಿಚಾರಣೆಗೆ ಸ್ಪಂದಿಸೋದಿಲ್ಲ. ಪ್ರಭಾವಿಗಳ ಸಹಾಯ ಇದೆ. ತನಿಖಾ ಹಾದಿ ತಪ್ಪಲಿದೆ. ಡ್ರಗ್ಸ್ ಪೆಡ್ಲರ್ ಗಳು ಅನ್ನೋದನ್ನ ಆರೋಪಿಗಳು ಈಗಾಗಲೇ ಒಪ್ಪಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳಾಗುತ್ತೆ, ಓಆPS ಪ್ರಬಲವಾದ ಪ್ರಕರಣ. ರಾಜ್ಯ ಬಿಟ್ಟು ಹೋಗುವ ಭಯ ಕೂಡ ಇದ್ದು, ಅರ್ಗನೈಸ್ಡ್ ಕ್ರೈಂ ಇದು, ಜಾಮೀನು ಸಿಕ್ಕರೆ ಸಹಾಯ ಆಗಲಿದೆ ಎಂಬುದು ಆಕ್ಷೇಪಣೆಯ ಪ್ರಮುಖ ಅಂಶಗಳಾಗಿವೆ.

ಇನ್ನು ಪ್ರಕರಣದಲ್ಲಿ ನಟಿ ರಾಗಿಣಿಯನ್ನು 2ನೇ ಆರೋಪಿಯನ್ನಾಗಿ ಮಾಡಲಾಗಿದೆ. ಅಲ್ಲದೇ ರಾಗಿಣಿ ಮನೆಯಲ್ಲಿ ದಾಳಿ ನಡೆಸಿದ ವೇಳೆಯಲ್ಲಿ ಬಲವಾದ ಸಾಕ್ಷಿಗಳು ಲಭ್ಯವಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಗಿಣಿಗೆ ಜಾಮೀನು ಅಷ್ಟು ಸುಲಭಕ್ಕೆ ಸಿಗುವ ಸಾಧ್ಯತೆಗಳು ತೀರಾ ಕಡಿಮೆ. ಇಂತಹ ಪ್ರಕರಣಗಳಲ್ಲಿ ಆರೋಪಿಗೆ ಸೆಷನ್ಸ್ ಕೊರ್ಟ್ ಜಾಮೀನು ನೀಡಿರುವುದು ತೀರಾ ಕಡಿಮೆ. ಅಲ್ಲದೇ ಸಿಸಿಬಿ ಅಧಿಕಾರಿಗಳ ಬಳಿ ಪ್ರಮುಖ ಸಾಕ್ಷಿಗಳು ಇದೆ.

ಸಿಸಿಬಿ ಅಧಿಕಾರಿಗಳು ನೀಡಿದ ನೊಟೀಸ್ ಗೆ ಉತ್ತರ ನೀಡದೇ ಸಾಕ್ಷಿ ನಾಶ ಪ್ರಯತ್ನ ಆರೋಪ ಮುಖ್ಯವಾಗಲಿದೆ. ಕಷ್ಟಡಿಯಲ್ಲಿದ್ದೂ ವಿಚಾರಣೆಗೆ ಸಹಕರಿಸದ ಆರೋಪ ಇದೆ. ಈ ಕಾರಣಗಳಿಂದ ಸದ್ಯ ರಾಗಿಣಿಗೆ ಜಾಮೀನು ಕನಸಿನ ಮಾತಾಗಿದೆ.

Leave A Reply

Your email address will not be published.