ಏಷ್ಯಾದಲ್ಲೇ ಶ್ರೀಮಂತ ಅಂಬಾನಿ…! ಚೀನಾದ ಉದ್ಯಮಿ ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಭಾರತೀಯ…!!

ಮುಂಬೈ : ಭಾರತದ ಹಿರಿಯ ಉದ್ಯಮಿ ಹಾಗೂ ರಿಲಯನ್ಸ್ ಗ್ರೂಫ್ ಆಫ್ ಕಂಪನೀಸ್ ಮಾಲೀಕ ಮುಕೇಶ್ ಅಂಬಾನಿ ಮುಡಿಗೆ ಏಷ್ಯಾದ ಅತ್ಯಂತ ಶ್ರೀಮಂತ ಎಂಬ ಗರಿ ಸಂದಿದೆ.

ಮುಖೇಶ್ ಅಂಬಾನಿ ಚೀನಾದ ಉದ್ಯಮಿ ಝೋಂಗ್ ಶನ್ಯಾನ್ ಹಿಂದಿಕ್ಕಿ ಈ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ವಾರದವರೆಗೂ ಚೀನಾದ ಉದ್ಯಮಿ ಝೋಂಗ್ ಶನ್ಯಾನ್ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಆದರೆ ಕಳೆದ ವಾರ ಝೋಂಗ್ ಶನ್ಯಾನ್ ಆಸ್ತಿಯಲ್ಲಿ ಶೇಕಡಾ 20 ರಷ್ಟು ಇಳಿಕೆಯಾದ ಹಿನ್ನೆಲೆಯಲ್ಲಿ ಮುಕೇಶ್ ಅಂಬಾನಿ ಅಗ್ರಸ್ಥಾನಕ್ಕೆ ಏರಿದ್ದಾರೆ.

ಬ್ಲೂಮ್ ಬರ್ಗ್ ಬಿಲಿಯೇನರ್ಸ್ ಸೂಚಂಕ್ಯದ ಪ್ರಕಾರ ಅಂಬಾನಿ 80 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದರೇ, ಝೋಂಗ್ 76. ಶತಕೋಟಿ ಡಾಲರ್ ಆಸ್ತಿ ಹೊಂದಿದ್ದಾರೆ. ಕಳೆದ ವಾರ ಝೋಂಗ್ ಆಸ್ತಿಯಲ್ಲಿ 22 ಶತಕೋಟಿ ಡಾಲರ್ ಇಳಿಕೆಯಾಗಿದೆ. ಹೀಗಾಗಿ ಮುನ್ನಡೆ ಹಾಗೂ ಮೊದಲ ಸ್ಥಾನ ಮುಕೇಶ್ ಅಂಬಾನಿಗೆ ಒಲಿದು ಬಂದಿದೆ.

ಅಂಬಾನಿ ಈ ಸ್ಥಾನಕ್ಕಾಗಿ ಚೀನಾದ ಅಲಿಬಾಬಾ ಗ್ರೂಪ್ ನ ಜಾಕ್ ಮಾ ಅವರನ್ನು ಕಳೆದ ಎರಡು ವರ್ಷದಿಂದ ಹಿಂದಿಕ್ಕಿ ಮುನ್ನಡೆ ಸಾಧಿಸುತ್ತ ಬಂದಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಅಂಬಾನಿ ಆಸ್ತಿಯಲ್ಲಿ ಇಳಿಕೆಯಾಗಿದ್ದು 90 ಶತಕೋಟಿಯಿಂದ 86 ಶತಕೋಟಿಗೆ ಬಂದು ತಲುಪಿದೆ. ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿದ್ದ ಅಂಬಾನಿ ಈ ವರ್ಷ ಮೊದಲ ಸ್ಥಾನ ಪಡೆದಿದ್ದಾರೆ.

ಇನ್ನು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಗೆ 9 ಸ್ಥಾನ ಸಿಕ್ಕಿದ್ದು, ಮೊದಲ ಸ್ಥಾನದಲ್ಲಿ ಅಮೆಜಾನ್ ಸಂಸ್ಥೆಯ ಸಂಸ್ಥಾಪಕ ಜೆಫ್ ಬಿಜೋಸ್ ಇದ್ದಾರೆ.

Comments are closed.