ಅಪ್ಪನ ಜೊತೆಗೆ ಕಾಂಪಿಟೇಶನ್ ಗೆ ನಿಂತ ಮಗ…! ಜ್ಯೂನಿಯರ್ ಚಿರು ಪೋಟೋದಲ್ಲಿದೆ ವಿಶೇಷ…!!

ಸ್ಯಾಂಡಲ್ ವುಡ್ ನ ಯುವಸಾಮ್ರಾಟ್ ಚಿರು ಸಿನಿಮಾ ಟ್ರೇಲರ್ ಗೆ ಚಾಲನೆ ನೀಡಿದ ಜ್ಯೂನಿಯರ್ ಚಿರು ಈಗ ಅಪ್ಪನ ಸೇಮ್ ಟೂ ಸೇಮ್ ಕಾಸ್ಟ್ಯೂಮ್ ಮೂಲಕ ಕಾಂಪಿಟೇಶನ್ ನೀಡಿದ್ದಾರೆ.

ಸದಾ ಅಪ್ಪ-ಮಗನ ಪೋಟೋ ವಿಡಿಯೋ ಮೂಲಕ ಖುಷಿ ಹಂಚಿಕೊಳ್ಳೋ ಮೇಘನಾ ರಾಜ್ ಇಂತಹದೊಂದು ಅಪರೂಪದ ಪೋಟೋ ಹಂಚಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಹಳದಿ ಚೆಕ್ಸ್ ಚೆಕ್ಸ್ ಶರ್ಟ್ ಹಾಕಿಕೊಂಡಿದ್ದು,ಈಗ ಇಂತಹುದೇ ಶರ್ಟ್ ನ್ನು ಜ್ಯೂನಿಯರ್ ಚಿರು ಹಾಕಿಕೊಂಡಿದ್ದಾನೆ.

ಅಪ್ಪ-ಮಗ ಇಬ್ಬರ ಪೋಟೋ ಕೋಲಾಜ್ ಮಾಡಿರೋ ಮೇಘನಾ ರಾಜ್ ಟ್ವಿನ್ವಿಂಗ್ ವಿತ್ ಸೀನಿಯರ್ ಚಿರು ಎಂದು ಕ್ಯಾಪ್ಸನ್ ನೀಡಿದ್ದಾರೆ. ಮೇಘನಾ ರಾಜ್ ಹಂಚಿಕೊಂಡಿರೋ ಪೋಟೋ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ ಪುಟಾಣಿ ಚಿರುಗೆ ಶುಭಹಾರೈಸಿದ್ದಾರೆ.

Comments are closed.