ಸೋಮವಾರ, ಏಪ್ರಿಲ್ 28, 2025
HomeBreaking2500 ಮಕ್ಕಳ ತಂದೆಯಾಗೋ ಕನಸು ಹೊತ್ತ ಮಹಾ”ಪುರುಷ”ನಿಗೆ ಈಗಲೇ ಇದ್ದಾರೆ 150 ಮಕ್ಕಳು…!!

2500 ಮಕ್ಕಳ ತಂದೆಯಾಗೋ ಕನಸು ಹೊತ್ತ ಮಹಾ”ಪುರುಷ”ನಿಗೆ ಈಗಲೇ ಇದ್ದಾರೆ 150 ಮಕ್ಕಳು…!!

- Advertisement -

ಅಮೇರಿಕಾ: ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕನಸಿರುತ್ತೆ. ಆದರೆ ಈತನ ಕನಸು ಹಾಗೂ ಗುರಿ ಕೇಳಿ ವಿಶ್ವವೇ ಬೆಚ್ಚಿಬಿದ್ದಿದೆ. ಹೌದು ಈಗಾಗಲೇ 150 ಮಕ್ಕಳ ತಂದೆಯಾಗಿರೋ ಈ ವ್ಯಕ್ತಿಗೆ ತಾನು ಸಾಯೋ ಮೊದಲು 2500 ಮಕ್ಕಳ ತಂದೆಯಾಗಬೇಕೆನ್ನೋ ಕನಸಿದೆಯಂತೆ.

ಅಮೇರಿಕಾದ ವರ್ಮಾಂಟ್ ನಿವಾಸಿ ಜಾಯ್ ಡೋನರ್ ಇಂತಹದೊಂದು ಮಹತ್ವಾಕಾಂಕ್ಷೆ ಹೊಂದಿದ ಮಹಾನ ತಂದೆ. ಈತನಿಗೆ ಮಕ್ಕಳನ್ನು ಹುಟ್ಟಿಸೋದರಲ್ಲಿ ವಿಚಿತ್ರ ಆನಂದ, ಸಂತೃಪ್ತಿ ಹಾಗೂ ಖುಷಿ ಇದೆಯಂತೆ. ಹೀಗಾಗಿ ವೀರ್ಯದಾನವನ್ನೇ ವೃತ್ತಿ ಮಾಡ್ಕೊಂಡಿರೋ ಈತ ಇದುವರೆಗೂ ಬರೋಬ್ಬರಿ 150 ಮಕ್ಕಳಿಗೆ ತಂದೆಯಾಗಿದ್ದಾನೆ. ಈತನ   ಈ ಸಾಧನೆಗೆ ಲಾಕ್ ಡೌನ್ ಕೂಡ ಅಡ್ಡಿಯಾಗಿಲ್ಲವಂತೆ. ಈಗಾಗಲೇ ಲಾಕ್ ಡೌನ್ ಅವಧಿಯಲ್ಲೂ ಐದು ಮಹಿಳೆಯರಿಗೆ ಸಂತಾನ ಭಾಗ್ಯದ ಕೃಪೆ ಮಾಡಿರೋ ಈತ ಇದೇ ಕೆಲಸಕ್ಕಾಗಿ ಊರುರು ಅಲೆಯುತ್ತಾನಂತೆ.

ಜಾಯ್ ಡೋನರ್ ವೀರ್ಯದಾನಿ. ಯಾವುದೋ ಆರೋಗ್ಯ ಸಮಸ್ಯೆಗಳಿಂದ ಮಕ್ಕಳಾಗದ ದಂಪತಿಗೆ ಅಥವಾ ಸಿಂಗಲ್ ಪೇರೆಂಟ್ ಆಗಲು ಬಯಸುವ ತಾಯಂದರಿಗೆ ವೀರ್ಯದಾನ ಮಾಡೋ ಮೂಲಕ ಮಕ್ಕಳ ಭಾಗ್ಯ ಕಲ್ಪಿಸೋ ಈತನ ಗುರಿ 2500 ಮಕ್ಕಳನ್ನು ಹುಟ್ಟಿಸೋದು.

ಅರ್ಜೆಂಟೈನಾ ಸೇರಿದಂತೆ ವಿಶ್ವದ ಹಲವೆಡೆ ಇದೇ ಕಾರ್ಯಕ್ಕಾಗಿ ಪ್ರವಾಸ ಮಾಡಿರೋ ಈತ ವೀರ್ಯದಾನ ಮಾತ್ರವಲ್ಲ, ಮಹಿಳೆಯರು ಬಯಸಿದ್ರೇ ನೇರವಾಗಿ ಅವರ ಜೊತೆ ದೈಹಿಕ ಸಂಪರ್ಕ ನಡೆಸಿಯೂ ಪುತ್ರ-ಪುತ್ರಿ ವರ ನೀಡುತ್ತಾನಂತೆ. 2020 ರ 12 ತಿಂಗಳಿನಲ್ಲಿ ಕನಿಷ್ಠ 15 ಮಹಿಳೆಯರಿಗೆ ತಾಯ್ತನದ ಅವಕಾಶ ನೀಡಬೇಕು ಅನ್ನೋ ಟಾರ್ಗೆಟ್ ನಲ್ಲಿಯೋ ಜಾಯ್ ಇದಕ್ಕಾಗಿ ಇನ್ನು 10 ಮಹಿಳೆಯರನ್ನು ಹುಡುಕುತ್ತಿದ್ದಾನಂತೆ.

ಮಕ್ಕಳು ಬಯಸಬೇಕೆಂದು ಬಯಸುವ ಹೆಣ್ಣುಮಕ್ಕಳಿಗೆ ಸಹಾಯ ಮಾಡೋದು ನನ್ನ ಪ್ರವೃತ್ತಿ ಎಂತಿರೋ ಜಾಯ್ ಇದಕ್ಕಾಗಿ ಹಣವನ್ನು ಪಡೆಯೋದಿಲ್ಲವಂತೆ. ಬದಲಾಗಿ ಕೆಲವೊಮ್ಮೆ ತನ್ನ ಪ್ರಯಾಣದ ವೆಚ್ಚವನ್ನು ಪಡೆಯುತ್ತಾನಂತೆ. ತನ್ನ ವೀರ್ಯದಿಂದ ಹುಟ್ಟಿದ ಮಕ್ಕಳ ಮೇಲೂ ಪ್ರೀತಿ ಹೊಂದಿರೋ ಈತ ಆಗಾಗ  ಆ ಮಕ್ಕಳನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆಯುತ್ತಾನಂತೆ.

ಆನ್ಲೈನ್ ನಲ್ಲ ಜಾಯ್ ಡೋನರ್ ನನ್ನು ಸಂಪರ್ಕಿಸೋ ಮಹಿಳೆಯರು ತಮಗೂ ಮಕ್ಕಳ ಭಾಗ್ಯ ನೀಡುವಂತೆ ಆಹ್ವಾನಿಸುತ್ತಾರಂತೆ. ಇದನ್ನು ಆಧರಿಸಿ ಜಾಯ್ ತನ್ನ  ಕಾರ್ಯಕ್ಷೇತ್ರ ವಿಸ್ತರಿಸಿದ್ದಾನಂತೆ. 49 ವರ್ಷದ ಜಾಯ್ ಟಾರ್ಗೆಟ್ ಸಂಖ್ಯೆ ದೊಡ್ಡದಿದ್ದು, ಕೊನೆಯಲ್ಲಿ ಎಷ್ಟು ಮಕ್ಕಳ ತಂದೆಯಾಗುತ್ತಾನೆ ಅನ್ನೋದನ್ನು ಕಾದು ನೋಡಬೇಕಿದೆ. ಆದರೆ ಕಂಡವರಿಗೆಲ್ಲ ಸಂತಾನ ಭಾಗ್ಯ ನೀಡೋ ಜಾಯ್ ಗೆ ಸ್ವಂತಕ್ಕೆಷ್ಟು ಮಕ್ಕಳಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ.

RELATED ARTICLES

Most Popular