ಜಾನ್ಸನ್ ಆಂಡ್ ಜಾನ್ಸನ್ ಕಂಪನಿಗೆ ಶಾಕ್…! ಕ್ಯಾನ್ಸರ್ ಸಂತ್ರಸ್ಥೆಗೆ 15,500 ಕೋಟಿ ಪರಿಹಾರಕ್ಕೆ ಆದೇಶ…!

ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾದ ಸುಪ್ರೀಂ ಕೋರ್ಟ್ ಅಧೀನ ನ್ಯಾಯಾಲಯದ ಆದೇಶ ಎತ್ತಿಹಿಡಿದಿದ್ದು, ಸಂತ್ರಸ್ಥೆಗೆ 15500 ಕೋಟಿ ಪರಿಹಾರ ನೀಡುವಂತೆ ಕಂಪನಿಗೆ ಆದೇಶಿಸಿದೆ.

https://kannada.newsnext.live/bollywood-dishapatani-tigershroff-fir-police-car-roming-bandr/

ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯ ಉತ್ಪಾದನೆ ಬಳಕೆಯಿಂದ ಕ್ಯಾನ್ಸರ್ ಉಂಟಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದ ಮಹಿಳೆಗೆ ಅಧೀನ ನ್ಯಾಯಾಲಯ ಈಗಾಗಲೇ, 2.1 ಬಿಲಿಯನ್ ಪರಿಹಾರ ನೀಡುವಂತೆ ಜಾನ್ಸನ್ ಆಂಡ್ ಜಾನ್ಸನ್ ಕಂಪನಿಗೆ ಆದೇಶಿಸಿತ್ತು.

https://kannada.newsnext.live/google-insult-kannada-language/

ಈ ಆದೇಶ ಪ್ರಶ್ನಿಸಿದ್ದ ಜಾನ್ಸನ್ ಆಂಡ್ ಜಾನ್ಸನ್ ಕಂಪನಿ ಮೇಲ್ಮನವಿ ಸಲ್ಲಿಸಿತ್ತು. ಒಂದು ದಶಕಕ್ಕೂ ಅಧಿಕ ಕಾಲ ನಡೆದ ಈ ಹೋರಾಟದಲ್ಲಿ ಕೊನೆಗೂ ಜಾನ್ಸನ್ ಆಂಡ್ ಜಾನ್ಸನ್ ಕಂಪನಿಗೆ ಹಿನ್ನಡೆಯಾಗಿದೆ.

https://kannada.newsnext.live/tet-certificate-eligebility-life-long/

ಸೇಂಟ್ ಲೂಯಿಸ್ ಜ್ಯೂರಿಸ್ ತಮಗೆ ಜಾನ್ಸನ್ ಕಂಪನಿಯ ಉತ್ಪಾದನೆಯಾಗಿರುವ ಜಾನ್ಸನ್ ಪೌಡರ್ ಬಳಕೆಯಿಂದ ಓವರಿಸ್ ಕ್ಯಾನ್ಸರ್ ರೋಗ ಕಾಣಿಸಿಕೊಂಡಿದೆ ಎಂದು ಆರೋಪಿಸಿ ಕಂಪನಿ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದರು.

ಇದೊಂದು ಪ್ರಕರಣ ಮಾತ್ರವಲ್ಲದೇ ಈಗಾಗಲೇ ಜಾನ್ಸನ್ ಪ್ರೊಡಕ್ಟ್ ಗಳ ಮೇಲೆ 26 ಸಾವಿರಕ್ಕೂ ಅಧಿಕ ಮೊಕದ್ದಮೆಗಳು ದಾಖಲಾಗಿದ್ದು ವಿಚಾರಣೆ ಹಂತದಲ್ಲಿವೆ. ಜಾನ್ಸನ್ ಆಂಡ್ ಜಾನ್ಸನ್ ಗುಣಮಟ್ಟದ ಮೇಲೆ ಸಾಕಷ್ಟು ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ವಿಶ್ವದ ಹಲವು ದೇಶಗಳಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಪ್ರೊಡಕ್ಟ್ ಗಳನ್ನು ಮಾರುಕಟ್ಟೆಯಿಂದ ಹೊರಗಿಡಲಾಗಿದೆ.

ಈ ಐತಿಹಾಸಿಕ ತೀರ್ಪಿನ ಬಗ್ಗೆ ಮಾತನಾಡಿರುವ ಲೂಯಿಸ್ ಜ್ಯೂರಿಸ್ ಪರ ವಕೀಲ, ಮಾರ್ಕ್ ಲೇನಿಯರ್, ಇವತ್ತು ನ್ಯಾಯ ಸಿಕ್ಕಂತಾಗಿದೆ ಎಂದಿದ್ದಾರೆ. ಅಲ್ಲದೇ 20 ಕ್ಕೂ ಹೆಚ್ಚು ಕುಟುಂಬಗಳು ಅನಗತ್ಯವಾಗಿ ಮಾರಣಾಂತಿಕ ರೋಗಕ್ಕೆ ತುತ್ತಾಗಿರುವುದಕ್ಕೆ ಪರಿಹಾರ ಸಿಕ್ಕಿದಂತಾಗಲಿದೆ ಎಂದಿದ್ದಾರೆ.   

Comments are closed.