ಮೇಘನಾ ರಾಜ್ ಕುಟುಂಬಕ್ಕೆ ಮತ್ತೊಂದು ಸಂಕಷ್ಟ…! ಆಸ್ಪತ್ರೆ ಗೆ ದಾಖಲಾದ ಪ್ರಮೀಳಾ ಜೋಷಾಯ್…!!

  • ಪೂರ್ಣಿಮಾ ಹೆಗಡೆ

ಇತ್ತೀಚಿಗಷ್ಟೇ ಮೊಮ್ಮಗನ ತೊಟ್ಟಿಲ ಶಾಸ್ತ್ರ ಮುಗಿಸಿ ಮಗಳ ಬಾಳಂತನದಲ್ಲಿ ಬ್ಯುಸಿಯಾಗಿದ್ದ ನಟಿ ಪ್ರಮೀಳಾ ಜೋಷಾಯ್ ಅಸ್ವಸ್ಥ ರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ರಾತ್ರಿ ಪ್ರಮೀಳಾ ಜೋಷಾಯ್ ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಜಯನಗರದ ಎಕ್ಸೈಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರಿಗೆ ಏನಾಗಿದೆ ಎಂಬ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಕಳೆದ ಜೂನ್ 7 ರಂದು ಪತಿ ಚಿರಂಜೀವಿ ಸರ್ಜಾ ರನ್ನು ಕಳೆದುಕೊಂಡ ನಟಿ ಮೇಘನಾ ರಾಜ್ ತವರಿನಲ್ಲೇ ಇದ್ದು ಅಕ್ಟೋಬರ್ 22 ರಂದು ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಮೇಘನಾ ರಾಜ್ ಹಾಗು ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿರುವ ಪ್ರಮೀಳಾ ಜೋಷಾಯ್ ದಿಢೀರ್ ಅನಾರೋಗ್ಯಕ್ಕೆ ಈಡಾಗಿದ್ದು ಕುಟುಂಬಸ್ಥರ ಹಾಗೂ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಪ್ರಮೀಳಾ ಜೋಷಾಯ್ ಕೊರೋನಾ ಸೋಂಕಿಗೆ ತುತ್ತಾಗಿದ್ದು ಮನೆಯಲ್ಲಿ ಬಾಳಂತಿ ಹಾಗೂ ಪುಟ್ಟ ಮಗು ಇರುವ ಕಾರಣಕ್ಕೆ ಅವರ ಸುರಕ್ಷತೆ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಆದರೆ ಅಧಿಕೃತವಾಗಿ ಸುಂದರ್ ರಾಜ್ ಅಥವಾ ಮೇಘನಾ ರಾಜ್ ಇದುವರೆಗೂ ಈ ಬಗ್ಗೆ ಏನು ಹೇಳಿಲ್ಲ. ನವೆಂಬರ್ ನಲ್ಲಿ ಪುತ್ರನ ತೊಟ್ಟಿಲ ಶಾಸ್ತ್ರದ ವೇಳೆ ತಾಯಿ ಬಗ್ಗೆ ಮನದುಂಬಿ ಮಾತನಾಡಿದ್ದ ಮೇಘನಾ ರಾಜ್, ತಾಯಿಯ ತ್ಯಾಗ ತಾಯಿಯ ಬೆಲೆ ಏನು ಅನ್ನೋದು ನಾವು ತಾಯಿ ಆದಾಗ ಮಾತ್ರ ಗೊತ್ತಾಗುತ್ತದೆ ಎಂದಿದ್ದರು.

ಅಷ್ಟೇ ಅಲ್ಲ, ಚಿರು ನಿಧನದ ಬಳಿಕ ನಾನು ಸ್ಟ್ರಾಂಗ್ ಆಗಿದ್ದಿನಿ ಅಂತ ಎಲ್ಲರೂ ಹೇಳ್ತಾರೆ ಆದರೆ ನಾನು ಎಷ್ಟು ಕಷ್ಟ ಅನುಭವಿಸಿದ್ದೀನಿ. ಏನಾಗಿದ್ದೇ,ಹೇಗಿದ್ದೇ ಅನ್ನೋದು ನನ್ನ ತಾಯಿಗೆ ಮಾತ್ರ ಗೊತ್ತು ಎಂದಿದ್ದಾರೆ.

ಅಂದಾಜು 3 ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಮೀಳಾ ಜೋಷಾಯ್ 170 ಕ್ಕೂ ಹೆಚ್ಚು ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ.

Comments are closed.