ಅರ್ಜನ್ ಜನ್ಯಾಗೆ ಅಂಜಿಯೋಪ್ಲಾಸ್ಟ್ : ಸ್ವಲ್ಪ ತಡವಾಗಿದ್ರೂ ಆಪಾಯವಾಗ್ತಿತ್ತು ಎಂದ ವೈದ್ಯರು!

ಮೈಸೂರು : ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರಿಗೆ ಅಂಜಿಯೋಪ್ಲಾಸ್ಟ್ ಸರ್ಜರಿ ಮಾಡಲಾಗಿದೆ. ಹಾರ್ಟ್ ನಲ್ಲಿ ಶೇ.99 ರಷ್ಟು ಬ್ಲಾಕೇಜ್ ಆಗಿದ್ದು, ಆಸ್ಪತ್ರೆಗೆ ದಾಖಲಿಸೋದು ಸ್ವಲ್ಪ ತಡವಾಗಿದ್ರೂ ಕೆಟ್ಟ ಪರಿಣಾಮ ಎದುರಿಸಬೇಕಾಗಿತ್ತು ಅಂತಾ ವೈದ್ಯರು ಹೇಳಿದ್ದಾರೆ.
ಮೈಸೂರಿನ ತನ್ನ ಮನೆಯಲ್ಲಿ ನಿನ್ನೆ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆಯಲ್ಲಿ ಅರ್ಜುನ್ ಜನ್ಯಾಗೆ ಒಮ್ಮಿದ್ದೊಮ್ಮೆಲೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಲಘ ಹೃದಯಾಘಾತವಾಗಿದೆ ಎಂದು ತಿಳಿಸಿದ್ದಾರೆ. ಕೂಡಲೇ ಅಂಜಿಯೋ ಗ್ರಾಂ ಪರೀಕ್ಷೆ ನಡೆಸಿದ್ದಾರೆ. ಆಗ ಹಾರ್ಟ್ ನಲ್ಲಿ ಶೇ.99ರಷ್ಟು ಬ್ಲಾಕೇಜ್ ಇರೋದು ತಿಳಿಯಿತು. ಕೂಡಲೇ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಅಂಜಿಯೋಪ್ಲಾನ್ ಸರ್ಜರಿ ಮಾಡಲಾಗಿದ್ದು, ಅರ್ಜುನ್ ಜನ್ಯಾ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯಾಗೆ ಗ್ಯಾಸ್ಟ್ರಿಕ್ , ತಲೆನೋವು, ಎದೆನೋವು, ಬೆನ್ನುನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆಸ್ಪತ್ರೆಗೆ ಬಂದಿದ್ದಾಗ ಅವರಿಗೆ ಗ್ಯಾಸ್ಟ್ರಿಕ್ ಗೆ ಔಷಧ ನೀಡಲಾಗಿತ್ತು. ಆದರೆ ಮಂಗಳವಾರ ಮತ್ತೆ ತಪಾಸಣೆಗೆ ಒಳಪಡಿಸಿದಾಗ ಇಸಿಜಿಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ನಿನ್ನೆ ರಾತ್ರಿ ಅರ್ಜುನ್ ಜನ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸೋದು 2 ಗಂಟೆ ತಡವಾಗಿದ್ರೆ ಕೆಟ್ಟ ಸ್ಥಿತಿ ಎದುರಿಸಬೇಕಿತ್ತು ಎಂದು ಆಸ್ಪತ್ರೆಯ ಹೃದ್ರೋಗ ತಜ್ಞ ಆದಿತ್ಯ ಉಡುಪ ತಿಳಿಸಿದ್ದಾರೆ.

Comments are closed.