ಟಿ20 ವಿಶ್ವಕಪ್ : ಸೆಮಿಫೈನಲ್ ಗೆ ಲಗ್ಗೆ ಇಟ್ಟ ಭಾರತದ ವನಿತೆಯರು

0

ಮೆಲ್ಬೋರ್ನ್ : ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸೋ ಮೂಲಕ ಭಾರತೀಯ ವನಿತೆಯರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮೆಲ್ಬೋರ್ನ್ ನ ಓವಲ್ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ತಂಡ ಉತ್ತಮ ಆರಂಭವನ್ನು ಕಂಡಿತ್ತು. ಆದರೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಕೇವಲ 11 ರನ್ ಗಳಿಗೆ ತಾಹುಗೆ ವಿಕೆಟ್ ಒಪ್ಪಿಸಿದ್ರು. ನಂತರ ಶಿಫಾಲಿ ವರ್ಮಾಗೆ ಜೊತೆಯಾದ ತನಿಯಾ ಭಟಿಯಾ ಉತ್ತಮ ಜೊತೆಯಾಟ ನೀಡಿದರು. ತನಿಯಾ ಭಟಿಯಾ 23 ರನ್ ಗಳಿಸಿದ್ರೆ ಶಿಫಾಲಿ ವರ್ಮಾ 46 ರನ್ ಗಳ ಕೊಡುಗೆಯನ್ನು ನೀಡಿದ್ರು.

ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ ಕೇವಲ 1 ರನ್ ಗಳಿಸಿ ನಿರಾಸೆ ಮೂಡಿಸಿದ್ರೆ, ಆಲ್ ರೌಂಡರ್ ದೀಪ್ತಿ ಶರ್ಮಾ 8 ರನ್ ಗಳಿಸಿ ಔಟಾದ್ರು. ಆದರೆ ಜೆಮಿಯಾ ರೋಡ್ರಿಗಸ್, ಶಿಖಾ ಪಾಂಡೆ ಹಾಗೂ ರಾಧಾ ಯಾದವ್ ಎರಡಂಕಿ ರನ್ ಗಳ ಕೊಡುಗೆ ನೀಡಿದ್ರು. ಈ ಮೂಲಕ ಭಾರತ 20 ಓವರ್ ಗಳಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತ್ತು. ನ್ಯೂಜಿಲೆಂಡ್ ಪರ ರೋಸ್ ಮೆರಿ ಮೈರ್ ಹಾಗೂ ಕೇರ್ ತಲಾ 2 ವಿಕೆಟ್ ಪಡೆದುಕೊಂಡ್ರೆ, ತೂಹು, ಸೋಫಿಯಾ ಡಿವೈನ್ ಹಾಗೂ ಕ್ಯಾಸ್ಪ್ರೆಕ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.

ಭಾರತ ನೀಡಿದ್ದ 133 ರನ್ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ರೆಚೆಲ್ ಪ್ರೀಸ್ಟ್ ಹಾಗೂ ಸೋಫಿಯಾ ಡಿವೈನ್ ಉತ್ತಮ ಆರಂಭ ನೀಡೋ ಭರವಸೆಯನ್ನು ನೀಡಿದ್ರು. ಆದರೆ ಪ್ರೀಸ್ಟ್ 12 ರನ್ ಆಗಿದ್ದಾಗ ಶಿಖಾ ಪಾಂಡೆ ಬಲಿಪಡಿದ್ರೆ, ನಂತರ ಬಂದ ಬೇಟ್ಸ್ ಗೆ ದೀಪ್ತಿ ಶರ್ಮಾ ಫೆವಿಲಿಯನ್ ಹಾದಿ ತೋರಿಸಿದ್ರು. ಇನ್ನು ಸೋಫಿಯಾ ಡಿವೈನ್ ಕೂಡ 14 ರನ್ ಗೆ ವಿಕೆಟ್ ಒಪ್ಪಿಸಿದ್ರು. ಗ್ರೀನ್ 24, ಮಾರ್ಟಿನ್ 23 ಹಾಗೂ ಕೇರ್ 34 ರನ್ ನೆರವಿನಿಂದ ನ್ಯೂಜಿಲೆಂಡ್ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಭಾರತೀಯ ವನಿತೆಯರು ನ್ಯೂಜಿಲೆಂಡ್ ಗೆಲುವಿಗೆ ತಡೆಯೊಡ್ಡಿದ್ದಾರೆ. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 129 ರನ್ ಗಳಿಸಿದೆ. ಈ ಮೂಲಕ ಭಾರತ 4 ರನ್ ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ವಿಶ್ವಕಪ್ ನಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.

ಸಂಕ್ಷೀಪ್ತ ಸ್ಕೋರ್ :
ಭಾರತ : ಸೋಫಿಯಾ ಡಿವೈನ್ 46 (34), ಸ್ಮೃತಿ ಮಂದಾನ 23 (25), ತನಿಯಾ ಭಟಿಯಾ 23 (25), ಜೆಮಿಯಾ ರೋಡ್ರಿಗಸ್ 10(9). ಹರ್ಮನ್ ಪ್ರೀತ್ ಕೌರ್ 1 (5), ದೀಪ್ತಿ ಶರ್ಮಾ 8(11), ವೇದಾ ಕೃಷ್ಣಮೂರ್ತಿ 6 (5), ಶಿಖಾ ಪಾಂಡೆ 10 (14), ರಾಧಾ ಯಾದವ್ 14 (9) ಕೇರ್ 21/2, ಮೈರ್ 27/2, ಸೋಫಿಯಾ ಡಿವೈನ್ 12/1, ತೂಹು 14/1, ಕೆಸ್ಪ್ರೇಕ್ 19/1
ನ್ಯೂಜಿಲೆಂಡ್ :
ರಾಹೆಲ್ ಪ್ರೀಸ್ಟ್ 12(9), ಸಫೀಯಾ ಡಿವೈನ್ 14(21), ಸೂಜು ಬೇಟ್ಸ್ 6 (13), ಮೆಡ್ಡಿ ಗ್ರೀನ್ 24 (23), ಕೆಟಿ ಮಾರ್ಟಿನ್ 25 (28), ಅಮ್ಲಿಯಾ ಕೇರ್ 34 (19), ಹೀಲಿ ಜೆನ್ಸೆನ್ 12 (7)

Leave A Reply

Your email address will not be published.