ಯಶ್-ರಾಧಿಕಾ ಸಧ್ಯ ಅವಳಿ ಮಕ್ಕಳಂತಿರೋ ಇಬ್ಬರು ಮುದ್ದು ಪುಟಾಣಿಗಳ ಜೊತೆ ಹೆತ್ತವರಾಗಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಸದಾ ಮಕ್ಕಳಒಂದಿಲ್ಲೊಂದು ವಿಡಿಯೋ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ರಾಧಿಕಾ ಈ ಭಾರಿ ಮಗಳ ಸಿಂಗಿಂಗ್ ಸಿಕ್ರೇಟ್ ರಿವೀಲ್‌ಮಾಡಿದ್ದು ಅಭಿಮಾನಿಗಳು ಸಖತ್ ಎಂಜಾಯ್ ಮಾಡ್ತಿದ್ದಾರೆ.

ಆಯ್ರಾ ಯಶ್ ಮತ್ತು ರಾಧಿಕಾ ಮಗಳು. ಹುಟ್ಟಿದಾಗಿನಿಂದಲೂ ತನ್ನ ಮುಗ್ಧತೆ ಹಾಗೂ ಕ್ಯೂಟ್ ಕ್ಯೂಟ್ ಬಿಹೇವಿಯರ್ ಇಂದ ಮನಸೆಳೆದ ಆಯ್ರಾ ಇದೀಗ ಸಂಗೀತದಲ್ಲಿ ತನ್ನ ಆಸಕ್ತಿ ತೋರಿಸಿದ್ದಾಳೆ.
ಯಶ್ ಪುತ್ರಿ ಆಯ್ರಾ ಜೂನ್ ನಲ್ಲಿ ತನ್ನ ಬೊಂಬೆ ಮಲಗಿಸೋದಿಕ್ಕೆ ಪಂ.ಭೀಮಷೇನ್ ಜೋಶಿ ಹಾಡಿರುವ ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀ ಹರಿ ಎಂಬ ಹಾಡನ್ನು ಮುದ್ದು ಮುದ್ದಾಗಿ ಗುನುಗಿದ್ದಾಳೆ.

ಈ ವಿಡಿಯೋವನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭೀಮಸೇನ್ ಜೋಶಿಯವರ ಅತಿ ಚಿಕ್ಕ ಫ್ಯಾನ್. ಇದು ಜೂನ್‌ನಲ್ಲಿ ಮಾಡಲಾದ ವಿಡಿಯೋ. ಈಗ ಇನ್ನು ಚೆನ್ನಾಗಿ ಈ ಹಾಡು ಹೇಳುತ್ತಾಳೆ ಎಂದು ರಾಧಿಕಾ ಬರೆದಿದ್ದಾರೆ.

ಅಷ್ಟೇ ಅಲ್ಲ ಈ ವಿಡಿಯೋದ ಜೊತೆ ರಾಧಿಕಾ ಅಭಿಮಾನಿಗಳಿಗೆ ನವರಾತ್ರಿ ಶುಭಾಶಯ ಕೋರಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ರಾಧಿಕಾ ಯಶ್ ಮತ್ತು ಅವರ ಪುತ್ರ ಯಥರ್ವ ರೈಮ್ಸ್ ಹೇಳಿಕೊಳ್ಳುವ ವಿಡಿಯೋ ಹಂಚಿಕೊಂಡಿದ್ದರು.

ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಯಶ್ ಮತ್ತು ರಾಧಿಕಾ ಮಕ್ಕಳ ಈ ರೀತಿಯ ಕ್ಯೂಟ್ ವಿಡಿಯೋಗಳು ರಿಲೀಸ್ ಆಗುತ್ತೆ ಮತ್ತು ಅವರ ತುಂಟಾಟಗಳ ಬಗ್ಗೆ ರಾಧಿಕಾ ಖುಷಿಯಿಂದ ಮಾಹಿತಿ ಕೂಡ ಹಂಚಿಕೊಳ್ಳುತ್ತಾರೆ.

ಈ ಹಿಂದೆ ಆಯ್ರಾ ತಮ್ಮ ಯಥರ್ವನನ್ನು ಮಲಗಿಸುವುದು, ಇಬ್ಬರು ಯಶ್ ರಾಧಿಕಾ ಪೋಟೋ ಗುರುತಿಸುವುದು ಸೇರಿದಂತೆ ಹಲವು ವೀಡಿಯೋ ಹಂಚಿಕೊಂಡಿದ್ದರು.
ಸ್ಟಾರ್ ಕಪಲ್ಸ್‌ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಮಕ್ಕಳ ಜೊತೆ ಸಾಕಷ್ಟು ಸಮಯ ಕಳೆದಿದ್ದು ಈಗ ಯಶ್ ಕೆಜಿಎಫ್-೨ ಚಿತ್ರೀಕರಣಕ್ಕೆ ಮರಳಿದ್ದರೆ, ರಾಧಿಕಾ ಇಬ್ಬರು ಮಕ್ಕಳ ಜೊತೆ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ.