ಶಾರದೆಯಾಗಿ ಮಿಂಚಿದ ಕರಾವಳಿ ಬೆಡಗಿ..! ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಪೋಟೋಶೂಟ್..!!

ಮಂಗಳೂರು: ಕಿರುತೆರೆ-ಹಿರಿತೆರೆ ನಟ-ನಟಿಯರು ಸಾಮಾನ್ಯವಾಗಿ ಹಾಟ್ ಪೋಟೋಶೂಟ್ ಮಾಡಿಸೋದು ಕಾಮನ್. ಆದರೆ ಇಲ್ಲೊಬ್ಬ ಕಿರುತೆರೆ ನಟಿ ಮಾತ್ರ ನವರಾತ್ರಿ ಅಂಗವಾಗಿ ತಾಯಿ ಶಾರದೆ ಗೆಟಪ್ ನಲ್ಲಿ ಮಿಂಚಿದ್ದು, ಸುಂದರ ಕಲಾಕೃತಿಯಂತೆ ಮೂಡಿಬಂದ ಪೋಟೋಶೂಟ್ ನಲ್ಲಿ ಮಿಂಚುತ್ತಿರುವ ಶಾರದೆ ಕಂಡು ನಾಸ್ತಿಕರೂ ಕೈ ಮುಗಿಯುತ್ತಿದ್ದಾರೆ.

ರಾಧಾ ಕಲ್ಯಾಣ ಧಾರಾವಾಹಿ ಮೂಲಕ ಕರ್ನಾಟಕದ ಮನೆಮಾತಾದ ಕಿರುತೆರೆ ನಟಿ ಚೈತ್ರಾ ಪೈ ಶಾರದಾ ದೇವಿಯಾಗಿ ಪೋಟೋ ಶೂಟ್ ಗೆ ಪೋಸ್ ನೀಡಿದ್ದು, ಪೋಟೋಗಳು ಒಂದಕ್ಕಿಂತ  ಒಂದು ಸುಂದರವಾಗಿ ಮೂಡಿಬಂದಿದ್ದು, ಸೋಷಿಯಲ್ ಮೀಡಿಯಾ, ಟ್ವೀಟ್ ಮ ನ್ಸ್ಟಾಂ, ಫೇಸ್ಬುಕ್, ವಾಟ್ಸಪ್ ಗಳಲ್ಲಿ ವೈರಲ್ ಆಗಿದೆ.

ಗುಲಾಬಿ ಬಣ್ಣದ ಬ್ಲೌಸ್, ಅದಕ್ಕೊಪ್ಪುವ ಬಿಳಿ ಬಣ್ಣದ ಸೀರೆ, ತಲೆಯನ್ನು ಅಪ್ಪಿದ ಮಲ್ಲಿಗೆ ಮಾಲೆ, ಚಿನ್ನದ ಹಾರಗಳು, ಕೈಯಲ್ಲಿ ವೀಣೆ ಎಲ್ಲ ಅಲಂಕಾರಕ್ಕೆ ಒಪ್ಪುವ ಸುಂದರ ದೃಶ್ಯಾವಳಿಯಲ್ಲಿ ನಿಂತ ಚೈತ್ರಾ ರೈ ನಿಜಕ್ಕೂ ಶಾರದಾ ದೇವಿಯೇ ಧರೆಗಿಳಿದಂತೆ ಭಾಸವಾಗುತ್ತಾರೆ.

ಸುಂದರವಾದ ಕೇಶ ಶೃಂಗಾರ, ಮುಖವರ್ಣಿಕೆ ಎಲ್ಲದಕ್ಕೂ ಹೊಂದಿಕೊಳ್ಳುವ ಭಾವನೆಗಳು ಎಲ್ಲವುಗಳಿಂದ ಪೋಟೋಶೂಟ್ ಮತ್ತಷ್ಟು ಕಳೆತುಂಬಿದೆ. 

ಚೈತ್ರಾಗೆ ಶ್ವೇತಾ ಹಾಗೂ ಅರ್ಪಿತಾ ಈ ಸುಂದರ ಮೇಕಪ್ ಹಾಗೂ ವೇಷಭೂಷಣ ಸಿದ್ಧಪಡಿಸಿದ್ದರೇ, ಛಾಯಾಗ್ರಾಹಕ ಅಫುಲ್ ಆಳ್ವ ಸುಂದರ ಪೋಟೋಗಳನ್ನು ತೆಗೆದಿದ್ದಾರೆ.

ಕರಾವಳಿಯಲ್ಲಿ ನವರಾತ್ರಿ ವಿಶೇಷ ವೈಭವದಿಂದ ಆಚರಿಸಲ್ಪಡುವ ಹಬ್ಬ.

ಅದರಲ್ಲೂ ಶಾರದೆಗೆ ಅಲ್ಲಿ ವಿಶೇಷ ಮಹತ್ವ ಹಾಗೂ ಪೂಜೆ ಇದೆ.

ಈ ಹಿನ್ನೆಲೆಯಲ್ಲಿ ಈ ಪೋಟೋಶೂಟ್ ಮತ್ತಷ್ಟು ಸೆಳೆಯುತ್ತಿದ್ದು, ಜನರು ತಮ್ಮ ಡಿಪಿ,ಸ್ಟೇಟಸ್ ಗಳಲ್ಲಿ ಈ ಪೋಟೋಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ.

Comments are closed.