ಮಾಸ್ಕ್ ತೆಗೆಯದೇ ತಿನ್ನಬಹುದು ರುಚಿ ರುಚಿ ತಿಂಡಿ…! ಇದು ಕೊರೋನಾ ಸ್ಪೆಶಲ್ ರೆಸ್ಟೋರೆಂಟ್…!!

ಕೋಲ್ಕತ್ತಾ: ದೇಶಕ್ಕೆ ಕಾಲಿಟ್ಟ ಕೊರೋನಾ ನಮ್ಮ ಬದುಕಿನ ರೀತಿ-ನೀತಿಯನ್ನೇ ಬದಲಿಸಿ ಬಿಟ್ಟಿದೆ. ರುಚಿ-ರುಚಿಯಾದ ಊಟ ತಿಂಡಿನಾ ಬಾಯಾಡೋಕೆ ಈ ಮಾಸ್ಕ್ ಅಡ್ಡಿಯಾಗ್ತಿದೆ. ಆದರೇ ಈ ಗೊಣಗಾಟಕ್ಕೆ ಇಲ್ಲೊಂದು ರೆಸ್ಟೋರೆಂಟ್ ಬ್ರೇಕ್ ಹಾಕಿದ್ದು ಮಾಸ್ಕ್ ಹಾಕ್ಕೊಂಡೆ ನೀವು ನಿಮ್ಮ ಇಷ್ಟದ ಊಟ ತಿಂಡಿ ಸವಿಯೋ ಅವಕಾಶ ಕಲ್ಪಿಸಿದೆ.

ಕೊಲ್ಕತ್ತಾದ wokies ಎಂಬ ರೆಸ್ಟೋರೆಂಟ್ ಇಂತಹದೊಂದು ವಿಭಿನ್ನ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ. ಕೊವೀಡ್ ಅನ್ ಲಾಕ್ ನಿಯಮದಂತೆ ಈ ರೆಸ್ಟೋರೆಂಟ್ ಗೆ ಬರೋ ಗ್ರಾಹಕರಿಗೆ ಮೊದಲು ಟೆಂಪರೇಚರ್ ಚೆಕ್ ಮಾಡಲಾಗುತ್ತದೆ. ಬಳಿಕ ಉಚಿತವಾಗಿ ಜಿಪ್ ಇರುವ ಮಾಸ್ಕ್ ವಿತರಿಸಲಾಗುತ್ತದೆ.

ಗ್ರಾಹಕರು ಈ ಮಾಸ್ಕ್ ಧರಿಸಿ, ಮುಖದಿಂದ ಮಾಸ್ಕ್ ತೆಗೆಯದೆಯೇ ಕೇವಲ ಜಿಪ್ ತೆಗೆದು ಊಟ-ತಿಂಡಿ ಸವಿಯಬಹುದು. ತಿಂಡಿ-ಊಟದ ಬಳಿಕ ಮತ್ತೆ ಜಿಪ್ ಎಳೆದು ಹೊರಬರಬಹುದು. ಪದೇ ಪದೇ ಮಾಸ್ಕ್ ತೆಗೆದು ಕೈತೊಳೆದು ಮತ್ತೆ ಮಾಸ್ಕ್ ಹಾಕಿ ಕೈತೊಳೆಯುವುದು ಈ ರೀತಿಯ ಕಿರಿ ಕಿರಿ ತಪ್ಪಿಸಲು ಇಂತಹದೊಂದು ಪ್ರಯತ್ನ ನಡೆಸಿರೋದಾಗಿ ರೆಸ್ಟೋರೆಂಟ್ ಮಾಲೀಕ ಸೋಮೋಶ್ರಿ ಸೇನ್ ಗುಪ್ತಾ.

ರೆಸ್ಟೋರೆಂಟ್ ಇಂತಹದೊಂದು ವಿಭಿನ್ನ ಮಾಸ್ಕ್ ಬಳಕೆ ಆರಂಭಿಸಿದ ಮೇಲೆ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಜನರು ಇಷ್ಟ ಪಟ್ಟು ಈ ಮಾಸ್ಕ್ ಬಳಸಿ ಯಾವುದೇ ಅಡೆತಡೆ ಇಲ್ಲದೇ ಆಹಾರ ಸೇವಿಸಿ ಹೋಗುತ್ತಿದ್ದಾರಂತೆ.

ಅಂದಹಾಗೇ ಈ ಮಾಸ್ಕ್ ಬಳಕೆಯನ್ನು ರೆಸ್ಟೋರೆಂಟ್ ಕಡ್ಡಾಯಗೊಳಿಸಿಲ್ಲ. ಗ್ರಾಹಕರು ತಾವು ಧರಿಸಿರುವ ಮಾಸ್ಕ್ ತೆಗೆದಿರಿಸಿ ಆಹಾರ ಸೇವಿಸಬಹುದು. ಬೇಕಿದ್ದರೇ ರೆಸ್ಟೋರೆಂಟ್ ನೀಡುವ ಈ ಉಚಿತವಾದ ಜಿಪ್ ಸಹಿತ ಮಾಸ್ಕ್‌ಬಳಸಬಹುದು.

ಇದರಿಂದ ಕೆಲ ಗ್ರಾಹಕರು ಮಾಸ್ಕ್ ಮನೆಯಲ್ಲೇ ಮರೆತು ಬಂದ ಕಾರಣಕ್ಕೆ ಊಟ-ತಿಂಡಿ ಖರೀದಿಸಲಾಗದೆ ತೊಂದರೆ ಅನುಭವಿಸೋದು ತಪ್ಪಲಿದೆ. ಅಲ್ಲದೇ ಹೆಚ್ಚುತ್ತಿರುವ ಕೊರೋನಾ ‌ವಿರುದ್ಧ ಜಾಗೃತಿ ಮೂಡಿಸಿದಂತಾಗಲಿದೆ ಎಂಬ ಕಾರಣಕ್ಕೆ ಈ ಪ್ರಯತ್ನ ಆರಂಭಿಸಿರುವ ರೆಸ್ಟೋರೆಂಟ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Comments are closed.