ಈ ಪೋಟೋದಲ್ಲಿರೋರನ್ನು ಗುರುತಿಸಿ…! ಬಾರ್ಬಿಡಾಲ್ ಖ್ಯಾತಿಯ ನಿವೇಧಿತಾ ಕೊಟ್ರು ಟಾಸ್ಕ್..!

ಲಾಕ್ ಡೌನ್ ನಿಂದ ಮನೆಯಲ್ಲೇ ಇರೋ ಸೆಲೆಬ್ರೆಟಿಗಳು ತಮ್ಮ ಬಾಲ್ಯದ ಪೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ಕೊಡ್ತಿದ್ದಾರೆ. ಇದಕ್ಕೆ  ಸ್ಯಾಂಡಲ್ ವುಡ್ ನ ಬೇಬಿಡಾಲ್ ಖ್ಯಾತಿಯ ನಿವೇದಿತಾ ಗೌಡ ಕೂಡ ಹೊರತಲ್ಲ. ಪುಟ್ಟ ಮಗುವಿನ ಪೋಟೋ ಶೇರ್ ಮಾಡಿರೋ ನಿವೇದಿತಾ ಇದು ಯಾರು ಗುರುತಿಸಿ ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋ,ಪೋಟೋ ಹಾಗೂ ಮುದ್ದಾದ ಮಾತುಗಳಿಂದಲೇ ಪ್ರಸಿದ್ಧಿ ಪಡೆದಿರೋ ಬೇಬಿ ಡಾಲ್ ಖ್ಯಾತಿಯ ನಿವೇದಿತಾ ಪುಟ್ಟ ಮಗುವಿನ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಇದು ಯಾರು ಗುರುತಿಸಿ ಎಂದು ಅಭಿಮಾನಿಗಳಿಗೆ ಸವಾಲೆಸೆದಿದ್ದಾರೆ.

ಬಾರ್ಬಿ ಡಾಲ್ ಎಂದೇ ಕರೆಸಿಕೊಳ್ಳೋ ನಿವೇದಿತಾ ಪೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಖತ್ ಕಮೆಂಟ್ ಮಾಡ್ತಿದ್ದು, ಇದು ಮತ್ಯಾರೂ ಅಲ್ಲ ನಮ್ಮ ಬೇಬಿ ಡಾಲ್ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

https://www.instagram.com/p/CP5WplvpSN3/?utm_medium=copy_link

ಪುಟ್ಟ ಫ್ರಾಕ್, ಎರಡು ಜಡೆ ಹಾಗೂ ನೀಲಿಬಣ್ಣದ ಬುಟ್ಟಿಯೊಂದಿಗೆ ಆಟವಾಡುತ್ತಿರುವ ಪೋಟೋ ಹಂಚಿಕೊಂಡಿರುವ ನಿವೇಧಿತಾ ಪೋಟೋದಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ.

ಸದಾ ಕಾಲ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗುವ ನಿವೇಧಿತಾಗೆ ಇತ್ತೀಚಿಗೆ ನೆಟ್ಟಿಗರು ಮಗು ಆಗೋ ವಯಸ್ಸಲ್ಲಿ ಮಗು ತರ ಆಡ್ತಿಯಾ ಎಂದು ಕಮೆಂಟ್ ಮಾಡಿದ್ದರು. ಅಷ್ಟೇ ಅಲ್ಲ ನಿವೇದಿತಾ ಇಂಗ್ಲೀಷ್ ಭಾಷೆಯನ್ನೇ ಮಾತಾಡ್ತಾರೆ ಅನ್ನೋದು ಹಲವರ ಟೀಕೆಗೆ ಕಾರಣವಾಗಿತ್ತು.

ವೃತ್ತಿಯಲ್ಲಿ ವಿಮಾನ ನಿಲ್ದಾಣದ ಕ್ಯಾಬಿನ್ ಕ್ರೂ ಆಗಿರುವ ನಿವೇದಿತಾ ಹಲವು ಅಲ್ಬಂ,ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.

Comments are closed.