ಸೋಮವಾರ, ಏಪ್ರಿಲ್ 28, 2025
HomeBreakingFlower show: ಕೊರೋನಾ ಮೂರನೇ ಅಲೆ ಕರಿನೆರಳು…! ಲಾಲ್ ಭಾಗ್ ಫಲಪುಷ್ಪ ಪ್ರದರ್ಶನ ರದ್ದು…!!

Flower show: ಕೊರೋನಾ ಮೂರನೇ ಅಲೆ ಕರಿನೆರಳು…! ಲಾಲ್ ಭಾಗ್ ಫಲಪುಷ್ಪ ಪ್ರದರ್ಶನ ರದ್ದು…!!

- Advertisement -

ಕೊರೋನಾ ಎರಡನೇ ಅಲೆಯ ಪ್ರಭಾವ ನಿಧಾನಕ್ಕೆ ಕುಗ್ಗುತ್ತಿದ್ದರೂ ಮೂರನೇ ಅಲೆಯ ಎಚ್ಚರಿಕೆ ತಜ್ಞರಿಂದ  ಹೊರಬಿದ್ದಾಗಿದೆ. ಹೀಗಾಗಿ ಈ ಭಾರಿಯೂ ಬೆಂಗಳೂರಿನ ಪ್ರತಿಷ್ಠಿತ ಲಾಲ್ ಭಾಗ್ ಫಲಪುಷ್ಪಪ್ರದರ್ಶನ ರದ್ದಾಗಲಿದ್ದು, ಪುಷ್ಪಪ್ರಿಯರಿಗೆ ನಿರಾಸೆ ಎದುರಾಗಿದೆ.

ವರ್ಷದಲ್ಲಿ ಎರಡು ಭಾರಿ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವದ ವೇಳೆ ಬೆಂಗಳೂರಿನ ಪ್ರಸಿದ್ಧ ಸಸ್ಯತೋಟ ಲಾಲ್ ಭಾಗ್ ನಲ್ಲಿ ಆಕರ್ಷಕ ಫಲಪುಷ್ಪ ಪ್ರದರ್ಶನ ಆಯೋಜಿಸುವುದು ವಾಡಿಕೆ. ಆದರೆ ಕಳೆದ ವರ್ಷವೂ ಕೊರೋನಾ ಕಾರಣಕ್ಕೆ ಫಲಪುಷ್ಪ ಪ್ರದರ್ಶನ ರದ್ದುಗೊಂಡಿತ್ತು.

ಈ ವರ್ಷ ಎರಡನೇ ಅಲೆಯ ಅಬ್ಬರ ಕುಸಿದಿರುವುದರಿಂದ  ಫಲಪುಷ್ಪ ಪ್ರದರ್ಶನ ಆಯೋಜಿಸುವ ಉತ್ಸಾಹದಲ್ಲಿತ್ತು ತೋಟಗಾರಿಕಾ ಇಲಾಖೆ. ಆದರೆ ತಜ್ಞರು ಸಧ್ಯದಲ್ಲೇ ಮೂರನೇ ಅಲೆಯ ಎಚ್ಚರಿಕೆ ನೀಡಿದ್ದಾರೆ.

ಫಲಪುಷ್ಪ ಪ್ರದರ್ಶನ ಆಯೋಜಿಸಿದರೇ ಪ್ರತಿನಿತ್ಯ ಸಾವಿರಾರು ಜನರು ವೀಕ್ಷಣೆಗೆ ಭೇಟಿ ನೀಡುತ್ತಾರೆ. ಹೀಗಾಗಿ ಮತ್ತೆ ಸೋಂಕು ಹರಡುವ ಪ್ರಮಾಣ ಹೆಚ್ಚುವ ಸಾಧ್ಯತೆ ಇರೋದರಿಂದ  ಫಲಪುಷ್ಪ ಪ್ರದರ್ಶನ ರದ್ದುಗೊಳಿಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಹೇಳಿದೆ.

ಅಗಸ್ಟ್ ತಿಂಗಳು ಸಮೀಪಿಸುತ್ತಿದ್ದರೂ ಇನ್ನೂ ಫಲಪುಷ್ಪ ಪ್ರದರ್ಶನಕ್ಕೆ ಯಾವುದೇ ಸಿದ್ಧತೆ ನಡೆದಿಲ್ಲ. ಬಹುತೇಕ ಫಲಪುಷ್ಪ ಪ್ರದರ್ಶನ ನಡೆಯೋದು ಅನುಮಾನವಾಗಿದ್ದು, ಹಿರಿಯ ಅಧಿಕಾರಿಗಳ ಸಭೆ ಬಳಿಕ ಅಧಿಕೃತ ಹೇಳಿಕ ಹೊರಬರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

RELATED ARTICLES

Most Popular