Shabarimala Ayyappa : ಇಂದಿನಿಂದ ಭಕ್ತರಿಗೆ ಶಬರಿಮಲೆ ಅಯ್ಯಪ್ಪನ ದರ್ಶನ

ಶಬರಿಮಲೆ : ಧರ್ಮಶಾಸ್ತ ಶಬರಿಮಲೆ ಅಯ್ಯಪ್ಪಸ್ವಾಮಿ ಇಂದಿನಿಂದ ಭಕ್ತರಿಗೆ ದರ್ಶನ ನೀಡಲಿದ್ದಾರೆ. ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ದೇವಸ್ಥಾನ ಭಕ್ತರ ದರ್ಶನಕ್ಕಾಗಿ ತೆರೆಯಲಿದ್ದು, ಭಕ್ತರಿಗೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

ಇಂದಿನಿಂದ ಜುಲೈ 21ರ ವರೆಗೆ ಭಕ್ತರಿಗೆ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ನಿತ್ಯವೂ ಐದು ಸಾವಿರ ಅಯ್ಯಪ್ಪ ಭಕ್ತರು ಮಾತ್ರವೇ ಸ್ವಾಮಿಯ ದರ್ಶನವನ್ನು ಪಡೆಯಬಹುದಾಗಿದೆ ಎಂದು ತಿರುವಾಂಕೂರು ದೇವಸಂ ಮಂಡಳಿ ತಿಳಿಸಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಗೆ ಹಲವು ನಿಯಮಗಳನ್ನು ಹೇರಿಕೆ ಮಾಡಲಾಗಿದೆ. ಅಯ್ಯಪ್ಪಸ್ವಾಮಿಯ ದರ್ಶನ ಪಡೆಯಬೇಕಾದ್ರೆ, ಭಕ್ತರು ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿರುವ ರಿಪೋರ್ಟ್. ಇಲ್ಲವಾದ್ರೆ 48 ಗಂಟೆಯೊಳಗೆ ಮಾಡಿಸಿದ ಆರ್‌ಟಿಪಿಸಿಆರ್‌ ರಿಪೋರ್ಟ್​ ಕಡ್ಡಾಯ ಗೊಳಿಸಲಾಗಿದೆ.‌

ಇದನ್ನೂ ಓದಿ : ಜುಲೈ 17 ರಿಂದ ಶಬರಿಮಲೆ ಅಯ್ಯಪ್ಪ ದರ್ಶನ : ಕೋವಿಡ್‌ ಲಸಿಕೆ ಅಥವಾ ಟೆಸ್ಟ್‌ ರಿಪೋರ್ಟ್‌ ಕಡ್ಡಾಯ

ದೇವಸ್ಥಾನದಲ್ಲಿಯೂ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್‌, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ಶಬರಿಮಲೆಗೆ ಬರುವ ಭಕ್ತರು ಕಡ್ಡಾಯವಾಗಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಸಿರಬೇಕು. ಇಲ್ಲವಾದ್ರೆ ಅಂತಹ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವನ್ನು ನಿರಾಕರಿಸಲಾಗುತ್ತದೆ.

Comments are closed.