ಉದ್ಯಾನನಗರಿ ಎಂಬ ಪಟ್ಟ ಪಡೆದಿರುವ ಬೆಂಗಳೂರಿನಲ್ಲಿ ನಿಧಾನಕ್ಕೆ ಹಸಿರಿನ ಪ್ರಮಾಣ ಕ್ಷೀಣಿಸತೊಡಗಿದ್ದು, ಇದೀಗ ಮತ್ತೊಂದು ಅಭಿವೃದ್ಧಿ ಕಾರ್ಯಕ್ಕಾಗಿ 6 ಸಾವಿರ ಮರಗಳ ಬುಡಕ್ಕೆ ಕೊಡಲಿ ಪೆಟ್ಟು ನೀಡಲು ಸ್ವತಃ ಅರಣ್ಯ ಇಲಾಖೆ ಸಿದ್ಧವಾಗಿದೆ.

ಬೆಂಗಳೂರು ನಗರದ ಹೊರವಲಯದಲ್ಲಿರುವ ದೊಡ್ಡಬಳ್ಳಾಪುರ ರಸ್ತೆಯ ಪಕ್ಕದಲ್ಲಿರುವ ಸಿಂಗನಾಯಕನ ಕೆರೆ ಅಭಿವೃದ್ಧಿಗಾಗಿ ಅರಣ್ಯ ನಾಶಕ್ಕೆ ಅರಣ್ಯ ಇಲಾಖೆ ಸಿದ್ಧವಾಗಿದೆ.

ಸಿಂಗನಾಯಕನಹಳ್ಳಿ ಕೆರೆಯ ಪುನರುಜ್ಜೀವನಕ್ಕಾಗಿ 6 ಸಾವಿರ ಮರಗಳನ್ನು ನಾಶ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿ ಸಾರ್ವಜನಿಕರಿಂದ ಆಕ್ಷೇಪಣಾ ಅರ್ಜಿ ಆಹ್ವಾನಿಸಿದೆ.

ಸಿಂಗನಾಯಕನಹಳ್ಳಿ ಕೆರೆಯನ್ನು ಕಿರು ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ಅಭಿವೃದ್ಧಿ ಪಡಿಸಲು ಮುಂಧಾಗಿದೆ. ಈ ಕಾರ್ಯಕ್ಕೆ ಕೆರೆಯ ಬಳಿ ಇರುವ ಅಂದಾಜು 6 ಸಾವಿರ ಮರಗಳು ಅಡ್ಡಿಯಾಗಿವೆ. ಹೀಗಾಗಿ ಈ ಮರಗಳನ್ನು ಕಡಿಯಲು ಇಲಾಖೆ ನಿರ್ಧರಿಸಿದೆ.’

ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಯಿಂದ ಬೆಂಗಳೂರು ಗ್ರಾಮಾಂತರ , ಚಿಕ್ಕಬಳ್ಳಾಪುರ ಜಿಲ್ಲೆಗಳ 65 ಕೆರೆಗಳಿಗೆ ನೀರು ತುಂಬಿಸಲು ನೆರವಾಗಲಿದೆ ಎಂದು ಇಲಾಖೆ ಹೇಳಿದೆ. ಅಲ್ಲದೇ ಈ ಪ್ರದೇಶದಲ್ಲಿ ಇರೋದು ಜಾಲಿ ಮರವಾಗಿದ್ದು, ಇದನ್ನು ಕಡಿಯೋದರಿಂದ ಪರಿಸರಕ್ಕೆ ಏನು ಹಾನಿಯಾಗೋದಿಲ್ಲ ಎಂದು ಅರಣ್ಯ ಇಲಾಖೆ ಹೇಳಿದೆ.

ಆದರೆ ಒಂದೊಂದೆ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ನಾಶಪಡಿಸಲಾಗುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಮರಗಳನ್ನು ಬೆಳೆಸುವ ಕಾರ್ಯ ಮಾತ್ರ ನಡೆಯುತ್ತಿಲ್ಲ ಎಂದು ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.