ಮತ್ತೆ ಗಡಿ ವಿವಾದ ಕೆಣಕಿದ ಉದ್ಧವ್ ಠಾಕ್ರೆ….! “ಮಹಾ”ಪಿತೂರಿ ವಿರುದ್ಧ ಭುಗಿಲೆದ್ದ ಆಕ್ರೋಶ…!!

ಸದಾ ಒಂದಿಲ್ಲೊಂದು ಕಾರಣಕ್ಕೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಲೇ ಬಂದಿರುವ ಮಹಾರಾಷ್ಟ್ರ ಮತ್ತೇ ಅದೇ ಚಾಳಿ‌ಮುಂದುವರೆಸಿದ್ದು, ಸಿಎಂ ಉದ್ಧವ್ ಠಾಕ್ರೆ ಮತ್ತೆ ಬೆಳಗಾವಿ ವಿಚಾರ ಕೆಣಕಿದ್ದಾರೆ.

ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭಾಷಾವಾರು ಮರಾಠಿಗರ ಪ್ರಾಬಲ್ಯ ಇರುವ ಪ್ರಾಂತ್ಯಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡುವ ಮೂಲಕ ಮತ್ತೆ ಬೆಳಗಾವಿ ಮಹಾರಾಷ್ಟ್ರ ಸೇರ್ಪಡೆ ವಿಚಾರಕ್ಕೆ ಜೀವ ನೀಡಿದ್ದಾರೆ.

ಜ.17 ಹುತಾತ್ಮರ ದಿನಾಚರಣೆ ವೇಳೆ ಟ್ವೀಟ್ ಮೂಲಕ ವಿವಾದ ಸೃಷ್ಟಿಸಿರುವ ಠಾಕ್ರೆ, ಭಾಷಾವಾರು ಪ್ರಾಂತ್ಯ ವಿಂಗಡನೆ ವೇಳೆ ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಹಿಂಪಡೆಯುವುದೇ ಮರಾಠಾ ಹುತಾತ್ಮರಿಗೆ ನಾವು ಸಲ್ಲಿಸುವ ಗೌರವ ಎಂದಿದ್ದಾರೆ.

ಈ ಟ್ವೀಟ್ ಕರ್ನಾಟಕದ ಅಕ್ರೋಶಕ್ಕೆ‌ ಕಾರಣವಾಗಿದೆ. ಅಲ್ಲದೇ ಮರಾಠಾ ಭಾಷಿಗರು ಹೆಚ್ಚಿರುವ ಬೆಳಗಾವಿ ಮತ್ತು ಇತರೆ ಪ್ರದೇಶಗಳು ಮಹಾರಾಷ್ಟ್ರ ಕ್ಕೆ ಸೇರ್ಪಡೆಯಾಗಬೇಕು. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಲ್ಲರೂ ಒಟ್ಟಾಗಿದ್ದೇವೆ ಎಂದಿದ್ದು ಇದು ಕೂಡ ಆಕ್ರೋಶ ಸೃಷ್ಟಿಸಿದೆ.

ಉದ್ಧವ್ ಠಾಕ್ರೆ ಬೆಳಗಾವಿ ಯನ್ನು ಮಹಾರಾಷ್ಟ್ರ ಕ್ಕೆ ಸೇರಿಸುವ ಮಾತನಾಡುತ್ತಿದ್ದಂತೆ ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದ್ದು, ಬೆಳಗಾವಿಯಉದ್ಧವ್ ಠಾಕ್ರೆ ಬೆಳಗಾವಿ ಯನ್ನು ಮಹಾರಾಷ್ಟ್ರ ಕ್ಕೆ ಸೇರಿಸುವ ಮಾತನಾಡುತ್ತಿದ್ದಂತೆ ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ  ಕನ್ನಡ ಪರ ಸಂಘಟನೆಗಳು ಉದ್ಧವ್ ಠಾಕ್ರೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು,  ಪ್ರತಿಕೃತಿ ದಹಿಸಿ ಉಗ್ರ ಹೋರಾಟದ ಎಚ್ಚರಿಕೆ  ನೀಡಿದ್ದಾರೆ.

Comments are closed.