ಪೊಲೀಯೋ ಲಸಿಕೆ ಬದಲು ಸ್ಯಾನಿಟೈಸರ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ..! ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ ..?

ಮುಂಬೈ: ಪಲ್ಸ್ ಪೊಲೀಯೋ ಲಸಿಕೆಯ ಬದಲು ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವೈದ್ಯರು ಮಾಡಿದ ಎಡವಟ್ಟೇ ಘಟನೆಗೆ ಕಾರಣ ಅನ್ನೋ ಮಾಹಿತಿ ಬಯಲಾಗಿದೆ.

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಕೋಪರಿ ಕಪ್ಸಿ ಗ್ರಾಮದಲ್ಲಿ 12 ಮಕ್ಕಳಿಗೆ ಪೊಲಿಯೋ ಲಸಿಕೆಯ ಬದಲು ಹ್ಯಾಂಡ್ ಸ್ಯಾನಿಟೈಸರ್ ನೀಡಿದ ಪ್ರಕರಣ ಬಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಆರೋಗ್ಯ ಸಿಬ್ಬಂದಿಗಳ ಕ್ರಮದ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದ ಬೆಳಕಿಗೆ ಬರುತ್ತಿದ್ದಂತೆಯೇ ಡಾ.ಗವಾಡೆ ಸೇರಿದಂತೆ ನಾಲ್ವರು ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ. ಮಕ್ಕಳಿಗೆ ಲಸಿಕೆ ಹಾಕಿದ ತಂಡದಲ್ಲಿದ್ದ ಆಶಾ ಕಾರ್ಯಕರ್ತೆಯೋರ್ವರು ಘಟನೆಯ ಕುರಿತು ತಂಡದ ನೇತೃತ್ವ ವಹಿಸಿದ್ದ ವೈದ್ಯ ಡಾ.ಅಮೋಲ್ ಗವಾಡೆ ಅವರ ಸೂಚನೆ ಮೇರೆಗೆ ಲಸಿಕೆ ಬದಲಿಗೆ ಸ್ಯಾನಿಟೈಸರ್ ನೀಡಲಾಗಿತ್ತು ಎಂಬ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.

ನಾವು ವೈದ್ಯರಿಗೆ ಲಸಿಕೆಯ ಬಣ್ಣ ಗುಲಾಬಿ ಬಣ್ಣದ್ದು, ನೀಲಿ ಬಣ್ಣದ್ದಲ್ಲ ಎಂದು ಹೇಳಿದೆವು. ಆದರೆ ಲಸಿಕೆ ಬಣ್ಣವನ್ನು ಈಗ ಬದಲಾಯಿಸಲಾಗಿದೆ ಎಂದು ವೈದ್ಯರು ನಮಗೆ ಹೇಳಿದ್ದಾರೆ. ನಾವು ಅವರೊಂದಿಗೆ ಈ ಬಗ್ಗೆ ಎಷ್ಟೇ ಹೇಳಿದರೂ ಅವರು ಫೋನ್ ನಲ್ಲಿ ಮಾತನಾಡುತ್ತಾ ನಮ್ಮ ಮಾತು ಕೇಳಲು ಸಿದ್ಧರಿರಲಿಲ್ಲ. ಪೊಲಿಯೋ ಲಸಿಕೆ ಬದಲಿಗೆ ನೀಲಿ ಬಣ್ಣದ ಸ್ಯಾನಿಟೈಸರ್ ನೀಡಿಸಿದರು. ಇದೀಗ ನಮ್ಮನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ವೈದ್ಯರ ಮಾತು ಕೇಳದಿದ್ದರೆ ನಮ್ಮ ಮೇಲೆ ಕ್ರಮಕೈಗೊಳ್ಳುತ್ತಿದ್ದರು. ನಮಗೆ 15 ದಿನಗಳ ಬದಲಾಗಿ ಕೇವಲ 1 ದಿನ ಮಾತ್ರವೇ ತರಬೇತಿಯನ್ನು ನೀಡಿದ್ದರು. ವೈದ್ಯರಿಗೆ ಹೆದರಿ ನಾವು ಸ್ಯಾನಿಟೈಸರ್ ನ್ನು ಹಾಕಿದ್ದೇವು ಎಂದು ತಪ್ಪೊಪ್ಪಿಕೊಂಡಿದ್ದಾರೆ. ಸರಕಾರ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಅಮಾನತ್ತುಗೊಂಡ ಸಿಬ್ಬಂದಿಗಳ ಮೇಲಿನ ಆರೋಪ ಸಾಬೀತಾದ್ರೆ ಅವರ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ಆರೋಗ್ಯ ಸಚಿವ ರಾಜೇಶ್ ತೋಪೆ ಹೇಳಿದ್ದಾರೆ.

Comments are closed.