ಸೋಮವಾರ, ಏಪ್ರಿಲ್ 28, 2025
HomeBreakingಮತ್ತೊಂದು ಮದುವೆಗೆ ಮನಸ್ಸಾಗಿದೆ….! ಬಿಗ್ ಬಾಸ್ ಮನೆಯಲ್ಲಿ ಪ್ಲ್ಯಾನ್ ರಿವೀಲ್ ಮಾಡಿದ ಚಂದ್ರಚೂಡ...!!

ಮತ್ತೊಂದು ಮದುವೆಗೆ ಮನಸ್ಸಾಗಿದೆ….! ಬಿಗ್ ಬಾಸ್ ಮನೆಯಲ್ಲಿ ಪ್ಲ್ಯಾನ್ ರಿವೀಲ್ ಮಾಡಿದ ಚಂದ್ರಚೂಡ…!!

- Advertisement -

ಬಿಗ್ ಬಾಸ್ ರಿಯಾಲಿಟಿ ಶೋ ಒಂದರ್ಥದಲ್ಲಿ ದೊಡ್ಮನೆ ಒಳಗಿರುವ ಸೆಲಿಬ್ರೇಟಿಗಳ ಅಸಲಿಯತ್ತನ್ನು ಬಿಚ್ಚಿಡೋ ಶೋ ಎನ್ನೋದರಲ್ಲಿ ಅನುಮಾನವಿಲ್ಲ. ಸಮಾಜದಲ್ಲಿ ಹೇಗೇಗೋ ಮುಖವಾಡ ತೊಟ್ಟು ವರ್ತಿಸುವ ಜನರು ಈ ರಿಯಾಲಿಟಿ ಶೋದಲ್ಲಿ ತಮ್ಮ ನಿಜರೂಪ ತೋರುತ್ತಾರೆ. ಅಂತೆಯೇ ಪತ್ರಕರ್ತ ಹಾಗೂ ಚಿಂತಕ ಎನ್ನಿಸಿಕೊಂಡಿರೋ ಚಂದ್ರಚೂಡ ಕೂಡ ತಮಗೊಂದು ಸಂಗಾತಿ ಬೇಕೆನ್ನುವ ಸತ್ಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ವೃತ್ತಿಯಲ್ಲಿ ಪತ್ರಕರ್ತ ಎಂದು ಕರೆದುಕೊಳ್ಳೋ ಚಂದ್ರಚೂಡ ವಿವಾದಗಳಿಂದಲೇ ಸುದ್ದಿಯಾದವರು. ಮೊದಲ ಪತ್ನಿ ಇದ್ದಾಗಲೇ ವಿಚ್ಛೇಧನವನ್ನೂ ಪಡೆಯದೇ ನಟಿ ಶ್ರುತಿಯನ್ನು ಎರಡನೇ ಮದುವೆಯಾದ ಚಂದ್ರಚೂಡ ಸಾಕಷ್ಟು ವಿವಾದ ಸೃಷ್ಟಿಸಿದ್ದರು.

ಶ್ರುತಿ ಚಂದ್ರಚೂಡ ಮದುವೆಯಾಗುತ್ತಿದ್ದಂತೆ ಮುನ್ನಲೆಗೆ ಬಂದಿದ್ದ ಚಂದ್ರಚೂಡನ ಪತ್ನಿ ನನಗೆ ಪತಿ ಬೇಕು ಎನ್ನುವ ವರಾತ ತೆಗೆದಿದ್ದರು. ಈ ವಿವಾದದಿಂದ ಬೇಸತ್ತ ಶ್ರುತಿ ಚಂದ್ರಚೂಡರಿಂದ ದೂರ ಉಳಿದರು. ಬಳಿಕ ಚಂದ್ರಚೂಡ ಮೊದಲ ಪತ್ನಿ ಕೂಡ ಇವರನ್ನು ಬಿಟ್ಟು ಹೋಗಿದ್ದು, ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಹೀಗೆ ವೈವಾಹಿಕ ಬದುಕಿನ ಎಡವಟ್ಟುಗಳಿಂದ ಈಗ ಮೊದಲ ಹೆಂಡತಿಯೂ ಇಲ್ಲ, ಎರಡನೆ ಪತ್ನಿಯೂ ಇಲ್ಲ ಎಂಬ ಸ್ಥಿತಿ ತಲುಪಿಸುವ ಚಂದ್ರಚೂಡರಿಗೆ ಮೂರನೆ ಮದುವೆಯಾಗೋ ಆಸೆ ಆಗಿದೆಯಂತೆ. ವೈಲ್ಡ್ ಕಾರ್ಡ್ ಎಂಟ್ರಿಮೂಲಕ ಬಿಗ್ ಬಾಸ್ ಮನೆ ಸೇರಿರೋ ಚಂದ್ರಚೂಡ ಈ ವಿಚಾರವನ್ನು ತಮ್ಮ ಆತ್ಮೀಯ ಪ್ರಶಾಂತ್ ಸಂಬರಗಿ ಬಳಿ ಹಂಚಿಕೊಂಡಿದ್ದಾರೆ.

ಸಂಬರಗಿ ವ್ಯಕ್ತಿತ್ವಕ್ಕೆ ಅವರ ಪತ್ನಿ ಸಂಗೀತಾ ಕಾರಣ ಎಂದು ಹೊಗಳಿರೋ ಚಂದ್ರಚೂಡ, ನಾನು ಒಂಟಿಯಾಗಿದ್ದು ಬೇಸತ್ತಿದ್ದೇನೆ. ಈ ಶೋ ಮುಗಿಸಿ ಹೊರಹೋಗುತ್ತಿದ್ದಂತೆ ನಾನು ನನಗೆ ಸೂಕ್ತವಾಗಿ ಸಂಗಾತಿ ಹುಡುಕಬೇಕು ಎನ್ನುವ ಮೂಲಕ ಮೂರನೇ ಮದುವೆ ವಿಚಾರವನ್ನು ಖಚಿತಪಡಿಸಿದ್ದಾರೆ.

ಒಟ್ಟಿನಲ್ಲಿ ಟಿವಿಶೋಗಳಲ್ಲಿ ಕೂತು ಗಂಟೆಗಟ್ಟಲೇ ಭಾಷಣ ಬಿಗಿಯೋ ಚಂದ್ರಚೂಡನ ಅಸಲಿ ಮುಖ ಬಿಗ್ ಬಾಸ್ ನಲ್ಲಿ ಅನಾವರಣಗೊಂಡಿದ್ದು, ಮೊದಲನೆ ಹೆಂಡತಿಯನ್ನೇ ಸಾಕಲಾಗದೇ ಬಿಟ್ಟುಬಂದ ಎಂಬ ಆರೋಪಕ್ಕೆ ತುತ್ತಾಗಿದ್ದ ಚಂದ್ರಚೂಡ ಮೂರನೇ ಮದುವೆಗೆ ಮನಸ್ಸುಮಾಡಿದ್ದಾನೆ.

RELATED ARTICLES

Most Popular