ಸಿದ್ಧವಾಗಿದೆ ಜಸ್ಟ್ ಬಾತ್ ಬಾತ್ ಲ್ಲಿ….! ಒಂಟಿ ಮನೆಗೆ ಈ ಭಾರಿ ವಿಭಿನ್ನತೆಯ ಟಚ್…!!

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಭಾರಿ ಶೋ ಮಾತ್ರವಲ್ಲ ಬಿಗ್ ಬಾಸ್ ಮನೆಯೂ ವಿಭಿನ್ನವಾಗಿರಲಿದ್ದು, ಜಸ್ಟ್ ಬಾತ್ ಬಾತ್ ಲ್ಲಿ ಸಿದ್ಧವಾಗಿದೆ.

ಇನ್ನೇನು ಮೂರು ದಿನದಲ್ಲಿ ಕನ್ನಡ ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಹಬ್ಬ ಬಿಗ್ ಬಾಸ್ ಆರಂಭವಾಗಲಿದೆ. ಈಗಾಗಲೇ ಬಿಡದಿ ಬಳಿ ಶೋ ಗಾಗಿ ಮನೆ ಸಿದ್ಧವಾಗಿದ್ದು ಸಾಕಷ್ಟು ಹೊಸತನ ಅಳವಡಿಸಲಾಗಿದೆ. ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನ ಎಂಟನೇ ಸೀಸನ್ ಈ ಸಲ ನಡೆಯುತ್ತಿದ್ದು ಶೋ ಗೆ ಹೊಸತನದ ಟಚ್ ನೀಡಲಾಗಿದೆ ಅನ್ನೋದು ಪ್ರೋಮೋದಲ್ಲಿ ಬಹಿರಂಗವಾಗಿದೆ.

ಇದರ ಜೊತೆ ಬಿಗ್ ಬಾಸ್ ನ ಒಂಟಿಮನೆಗೂ ಹೊಸತನದ ಸ್ಪರ್ಶ ನೀಡಲಾಗಿದೆ. ಬಿಗ್ ಬಾಸ್ ನ ಅತಿ ಹೆಚ್ಚು ಡಿಸ್ಕಷನ್,ಚರ್ಚೆ,ಹರಟೆ ಎಲ್ಲ ನಡೆಯುವ ಕಿಚನ್ ವಿನ್ಯಾಸವನ್ನು ಬದಲಾಯಿಸಲಾಗಿದ್ದು ಹಸಿರು ಬಣ್ಣಕ್ಕೆ ಆದ್ಯತೆ ನೀಡಿ ಕಿಚನ್ ಸಿದ್ಧಗೊಳಿಸಲಾಗಿದೆ.

ಜಸ್ಟ್ ಬಾತ್ ಬಾತ್ ಲ್ಲಿ ಎಂದು ಹೆಸರಿಟ್ಟು ಕಿಚನ್ ವಿನ್ಯಾಸ ಬದಲಾಯಿಸಲಾಗಿದ್ದು ಕಲರ್ಸ್ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಕಿಚನ್ ಪೋಟೋ ಹಂಚಿಕೊಂಡಿದ್ದಾರೆ. ಸಾಕಷ್ಟು ವಿಶಾಲವಾಗಿ ಅಡುಗೆ ಮನೆ ಸಿದ್ಧಗೊಳಿಸಲಾಗಿದೆ. ಇದರೊಂದಿಗೆ ಬಿಗ್ ಬಾಸ್ ಮನೆಯಲ್ಲೂ ಕೊರೋನಾ ಎಫೆಕ್ಟ್ ಇರಲಿದ್ದು ಎಲ್ಲ ಕೊರೋನಾ ಮುನ್ನೆಚ್ಚರಿಗೆ ವಹಿಸಲಾಗುತ್ತದೆ.

ಬಿಗ್ ಬಾಸ್ ನ ಪ್ರಮುಖ ಆಕರ್ಷಣೆ ಹಾಗೂ ಹಲವು ಹಸಿಬಿಸಿ ದೃಶ್ಯಗಳಿಗೆ ಅವಕಾಶ ನೀಡುತ್ತಿದ್ದ ಸ್ವಿಮ್ಮಿಂಗ್ ಫೂಲ್ ಈ ಭಾರಿ ಬಿಗ್ ಬಾಸ್ ನಲ್ಲಿ ಇರೋದಿಲ್ಲ. ಕೊರೋನಾ ಮುನ್ನೆಚ್ಚರಿಕೆ ಹಾಗೂ ಮಾರ್ಗಸೂಚಿ ಅನ್ವಯ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ತೆಗೆಯಲಾಗಿದೆ. ಅಲ್ಲದೇ ಸ್ಪರ್ಧಿಗಳ ಬೆಡ್ ಹಾಗೂ ಚೇರ್ ಗಳು ದೂರ ದೂರ ಇರಲಿದೆ.

ಅಲ್ಲದೇ ಸ್ಯಾನಿಟೈಸರ್, ಮಾಸ್ಕ್ ಕೂಡ ಇರಲಿದೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ -8 ಅಭ್ಯರ್ಥಿಗಳನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದ್ದು ಫೆ. 28 ರಂದು ಬಿಗ್ ಬಾಸ್ ಅದ್ದೂರಿ ಚಾಲನೆ ಪಡೆಯಲಿದೆ.

Comments are closed.