
ಕುಂದಾಪುರ : ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೊಡೇರಿಯಲ್ಲಿ ನಡೆದಿದ್ದ ದೋಣಿ ದುರಂತದ ಕಹಿಘಟನೆ ಮಾಸುವ ಮುನ್ನವೇ ಮತ್ತೊಂದು ದೋಣಿ ದುರಂತ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ದೋಣಿ ದಿಬ್ಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ದೋಣಿ ಮಗುಚಿ ಬಿದ್ದು, ಓರ್ವ ಮೀನುಗಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ ಮರವಂತೆ ಸಮೀಪದಲ್ಲಿ ಈ ಘಟನೆ ನಡೆದಿದೆ. ಮೀನುಗಾರರು ಶ್ರೀನಿವಾಸ ಖಾರ್ವಿ ಎಂಬವರಿಗೆ ಸೇರಿದ ಆಂಜನೇಯ ಹೆಸರಿನ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ದೋಣಿ ದಿಬ್ಬಕ್ಕೆ ಢಿಕ್ಕಿ ಹೊಡೆದಿದ್ದು, ದೋಣಿ ಮಗುಚಿ ಬಿದ್ದಿದೆ. ಈ ವೇಳೆಯಲ್ಲಿ ಶ್ರೀನಿವಾಸ ಖಾರ್ವಿ ಅವರ ಕಾಲಿನ ಮೇಲೆ ದೋಣಿ ಬಿದ್ದಿದ್ದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ವೇಳೆಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇತರ ದೋಣಿಯಲ್ಲಿದ್ದ ಮೀನುಗಾರರು ದುರಂತದಿಂದಾಗಿ ಮಳುಗುತ್ತಿದ್ದ 4 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮೀನುಗಾರರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊಡೇರಿ ದುರಂತದ ಬೆನ್ನಲ್ಲೇ ಮತ್ತೊಂದು ದೋಣಿ ದುರಂತರ ನಡೆದಿರುವುದು ಮೀನುಗಾರರಿಕೆ ಆತಂಕವನ್ನು ತಂದಿದೆ.