ಮಹಿಳಾ ಸಹೋದ್ಯೋಗಿಗೆ ಕಿಸ್ ಮಾಡಿದ ತಹಶೀಲ್ದಾರ್ ! : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

0

ಕೊಪ್ಪಳ : ಸರಕಾರಿ ಕಚೇರಿಯಲ್ಲಿ ಮಹಿಳಾ ಸಹೋದ್ಯೋಗಿಯ ಜೊತೆ ತಹಶೀಲ್ದಾರ್ ಓರ್ವರು ಕಿಸ್ , ರೊಮ್ಯಾನ್ಸ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಹಶೀಲ್ದಾರ್ ಕಿಸ್ಸಿಂಗ್ ಪುರಾಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೊಪ್ಪಳದ ಕುಷ್ಟಗಿ ತಾಲೂಕಿನಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಕೊಪ್ಪಳ ಜಿಲ್ಲಾ ನಗರಾಭಿವೃದ್ದಿ ಕೋಶದಲ್ಲಿ ತಹಶೀಲ್ದಾರ್ ಆಗಿರುವ ಗುರುಬಸವರಾಜ್ ಎಂಬವರೇ ಮಹಿಳೆಯೊಂದಿಗೆ ರೊಮ್ಯಾನ್ಸ್ ಮಾಡಿ ಸಿಕ್ಕಿ ಬಿದ್ದವರು. ಗುರು ಬಸವರಾಜ್ ಈ ಹಿಂದೆ ಕುಷ್ಟಗಿ ತಾಲೂಕು ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಎಂಟು ತಿಂಗಳ ಹಿಂದೆ ನಡೆದ ರೊಮ್ಯಾನ್ಸ್ ವಿಡಿಯೋ ಇದೀಗ ವೈರಲ್ ಆಗಿದೆ.

ರಾಸಲೀಲೆ ವಿಡಿಯೋ ಬಯಲಾಗುತ್ತಿದ್ದಂತೆಯೇ ಗುರುಬಸವರಾಜ್ ವರ್ಗಾವಣೆಯಾಗಿದ್ದಾರೆ. ತಹಶೀಲ್ದಾರ್ ಹುದ್ದೆಯಲ್ಲಿರುವ ವ್ಯಕ್ತಿ ತನ್ನ ಕಚೇರಿಯಲ್ಲಿ ಮಹಿಳಾ ಸಹೋದ್ಯೋಗಿಯೊಂದಿಗೆ ರಾಸಲೀಲೆ ನಡೆಸಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರವಲ್ಲ ತಹಶೀಲ್ದಾರ್ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆಯೂ ಆಗ್ರಹಿಸುತ್ತಿದ್ದಾರೆ.

Leave A Reply

Your email address will not be published.