ಟ್ವಿಟರ್ ಆಯ್ತು ಇನ್ ಸ್ಟಾಗ್ರಾಂ ನಲ್ಲೂ ಕಾದಿದೆ ಶಾಕ್….! ಕಂಗನಾ ಪೋಸ್ಟ್ ಡಿಲೀಟ್…!!

ಇತ್ತೀಚಿಗಷ್ಟೇ ನಿಯಮ ಉಲ್ಲಂಘನೆ ಕಾರಣಕ್ಕೆ ಟ್ವಿಟರ್ ನಿಂದ ಶಾಶ್ವತವಾಗಿ ಬ್ಯಾನ್ ಬಾಲಿವುಡ್ ಬೆಡಗಿ‌ಕಂಗನಾ ಸದ್ಯದಲ್ಲೇ ಇನ್ ಸ್ಟಾಗ್ರಾಂನಿಂದಲೂ ಹೊರಬರುವ ಸಾಧ್ಯತೆ ಇದ್ದು, ತೀವ್ರವಿರೋಧದ ಹಿನ್ನೆಲೆಯಲ್ಲಿ ಕಂಗನಾ ಇನ್ ಸ್ಟಾ ಪೋಸ್ಟ್‌ ವೊಂದು‌ ಡಿಲೀಟ್ ಆಗಿದೆ.

ಕೊರೋನಾ ಎರಡನೆ ಅಲೆಗೆ ಭಾರತದ ಅಕ್ಷರಷಃ ತತ್ತರಿಸಿ ಹೋಗಿದೆ. ಹಲವು ಸೆಲೆಬ್ರಿಟಿ ‌ಸ್ಟಾರ್ ಗಳು ಕೊರೋನಾಕ್ಕೆ ಬಲಿಯಾಗಿದ್ದಾರೆ. ಈ‌ ಮಧ್ಯೆ ಸ್ವತಃ ಕೊರೋನಾ ಸೋಂಕಿಗೆ ತುತ್ತಾದ ಕಂಗನಾ ಈ ವಿಚಾರದ ಕುರಿತು ಇನ್ ಸ್ಟಾಗ್ರಾಂ ಪೋಸ್ಟ್ ಹಾಕಿದ್ದು ಇದೊಂದು ಮಾಮೂಲಿ ಜ್ವರ ಎಂದಿದ್ದರು.

ಕಂಗನಾ ಈ ಪೋಸ್ಟ್ ಗೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಯಿತು. ಸಾವಿರಾರು ಜನ ಪ್ರಾಣ‌ ಕಳೆದುಕೊಳ್ಳುತ್ತಿದ್ದಾರೆ. ಇಂಥ ವೇಳೆಯಲ್ಲಿ ಕೊರೋನಾ ಚಿಕ್ಕ ಜ್ವರ ಎಂದ ಕಂಗನಾ ಅಭಿಪ್ರಾಯ ಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://kannada.newsnext.live/sandalwood-nagathihalli-chandrashekar-corona-covid-19/

ಹೀಗಾಗಿ ಜನರ ತೀವ್ರ ಆಕ್ರೋಶ ಕ್ಕೆ ತುತ್ತಾದ ಕಂಗನಾ ಪೋಸ್ಟ್ ನ್ನು ಇನ್ ಸ್ಟಾ ಗ್ರಾಂ ಡಿಲೀಟ್ ಮಾಡಿದೆ. ಈ ಬಗ್ಗೆ ಪೋಸ್ಟ್ ಹಾಕಿರುವ ಕಂಗನಾ, ನಾನು ಕೊವೀಡ್ ಬಗ್ಗೆ ಹಾಕಿದ್ದ ಪೋಸ್ಟ್ ನಿಂದ‌ ಹಲವರಿಗೆ ಅಸಮಧಾನವಾಗಿದೆ.ಹೀಗಾಗಿ ಇನ್ ಸ್ಟಾಗ್ರಾಂ ನನ್ನ ಪೋಸ್ಟ್ ಡಿಲೀಟ್ ಮಾಡಿದೆ.

https://kannada.newsnext.live/udupi-kaup-police-raid-6-arrest/

ಟ್ವಿಟರ್ ನಲ್ಲಿ ಭಯೋತ್ಪಾದಕರು ಹಾಗೂ ಕಮ್ಯುನಿಸ್ಟ್ ಗಳಿಗೆ ಬೆಂಬಲ‌ಕೊಡುವುದನ್ನು‌ನೋಡಿದ್ದೆ. ಆದರೆ ಇನ್ ಸ್ಟಾ ಗ್ರಾಂ ನಲ್ಲೂ ಕೊವೀಡ್ ಫ್ಯಾನ್ಸ್ ಕ್ಲಬ್ ಇರುವುದು ಅದ್ಭುತ. ನಾನು ಇನ್ ಸ್ಟಾಗ್ರಾಂಗೆ ಬಂದು ಎರಡು ದಿನವಾಯ್ತು. ಆದರೆ ಎರಡು ವಾರಕ್ಕೂ‌ ಜಾಸ್ತಿ ಇರುವುದು ಅನುಮಾನ ಎಂದಿದ್ದಾರೆ.

ಪಶ್ಚಿಮಬಂಗಾಳ ಎಲೆಕ್ಷನ್‌ಬಳಿಕ ಕೆಲ ವಿವಾದಾತ್ಮಕ ಟ್ವಿಟ್ ಕಾರಣಕ್ಕೆ ಕಂಗನಾ ಟ್ವಿಟರ್ ಅಕೌಂಟ್ ನ್ನು ಟ್ವಿಟರ್ ಶಾಶ್ವತವಾಗಿ ರದ್ದುಗೊಳಿಸಿದೆ.

Comments are closed.