ನನಗೂ ಸಾಲವಿದೆ, ಸಾಲ ಕಟ್ಟಲು ದುಡ್ಡಿಲ್ಲ…! ಹೀಗಾಗಿ ಕೆಲಸ ಮಾಡಲೇ ಬೇಕು ಎಂದ್ರು ಸ್ಟಾರ್ ನಟಿ…!

ಬಹುಭಾಷಾ ನಟ ಕಮಲ್ ಹಾಸನ್ ಎಂದ್ರೇ ಯಾರಿಗೆ ಗೊತ್ತಿಲ್ಲ ಹೇಳಿ. ಇಂಥ ಸ್ಟಾರ್ ನಟನ ಮಗಳು ಶ್ರುತಿ ಹಾಸನ್ ಸ್ವತಃ ಹಲವು ಭಾಷೆಗಳಲ್ಲಿ ನಟಿಸೋ ಮೂಲಕ ಹೆಸರು ಗಳಿಸಿದ್ದಾರೆ. ಆದರೆ ಕೊರೋನಾ ಸಂಕಷ್ಟದಲ್ಲಿ ಸಾಲ ಕಟ್ಟೋಕು ದುಡ್ಡಿಲ್ಲ ಎಂದು ಹೇಳಿಕೊಂಡಿದ್ದು, ಚಿತ್ರರಂಗ ಹುಬ್ಬೇರಿಸುವಂತೆ ಮಾಡಿದೆ.

ಶ್ರುತಿ ಹಾಸನ್ ಕಮಲ್ ಹಾಸನ್ ಚುನಾವಣಾ ಪ್ರಚಾರ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲೂ ತಂದೆಯ ಜೊತೆ ಜೊತೆಗೆ ನಿಂತು ದುಡಿದಿದ್ದರು. ಆದರೆ ಈಗ ಶ್ರುತಿ ನೀಡಿರೋ ಹೇಳಿಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ನನಗೆ ಆರ್ಥಿಕ ಸಮಸ್ಯೆ ಇದೆ. ಸಾಲವಿದೆ. ಆದರೆ ಇದಕ್ಕೆಲ್ಲ ನನ್ನ ತಂದೆ ತಾಯಿ ನನಗೆ ಸಹಾಯ ನೀಡೋದಿಲ್ಲ. ಹೀಗಾಗಿ ನಾನು ದುಡಿಯಲೇ ಬೇಕು. ಕೊರೋನಾ ಸಂಕಷ್ಟ ಹಾಗೂ ಲಾಕ್ ಡೌನ್ ಕೊನೆಯಾಗುವುದನ್ನೇ ಕಾಯುತ್ತಿದ್ದೇನೆ.

ಚಿತ್ರರಂಗದ ಚಟುವಟಿಕೆಗಳು ಆರಂಭವಾಗುತ್ತಿದ್ದಂತೆ ನಾನು ನನ್ನೆಲ್ಲ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ ಮತ್ತು ಕಮಿಟ್ ಮೆಂಟ್ ಗಳನ್ನು ಪೊರೈಸಲು ಶ್ರಮಿಸುತ್ತೇನೆ ಎಂದಿದ್ದಾರೆ.

https://kannada.newsnext.live/sandalwood-darshan-visit-sachhidanand-visit-ashrama-shukavana/amp/?doing_wp_cron=1620794849.5074288845062255859375

ಕೊರೋನಾದ ಸಂಕಷ್ಟದಲ್ಲಿ ಯಾರು ದೊಡ್ಡ ದೊಡ್ಡ ನಿರ್ಧಾರ, ಖರೀದಿ ಅಥವಾ ಇನ್ ವೆಸ್ಟ್ ಮೆಂಟ್ ಮಾಡೋದಿಲ್ಲ. ಆದರೆ ನಾನು ಮನೆ ಖರೀದಿಸಿದೆ. ಹೀಗಾಗಿ ಮನೆಯ ಸಾಲದ ಕಂತುಗಳನ್ನು ಕಟ್ಟಲು ನನಗೆ ದುಡ್ಡಿನ ಅವಶ್ಯಕತೆ ಎಂದಿದ್ದಾರೆ.

https://kannada.newsnext.live/teachers-death-corona-relations-not-attend-crimitions/amp/

ಬಹುಭಾಷಾ ನಟ ಕಮಲ್ ಹಾಸನ್ ಕೋಟಿಗೆ ಬಾಳುತ್ತಾರೆ. ಇಂಥವರ ಪುತ್ರಿ ಹಾಗೂ ಸ್ವತಃ ನಟಿಯಾಗಿರುವ ಶ್ರುತಿ ಹಾಸನ್ ಮಧ್ಯಮವರ್ಗದವರಂತೆ  ಆರ್ಥಿಕ ಸಂಕಷ್ಟದ ಮಾತನ್ನಾಡಿರುವುದು ಕೊರೋನಾ ಎಂತಹ ಸಂದಿಗ್ಧವನ್ನು ಸೃಷ್ಟಿಸಿದೆ ಎಂಬುದಕ್ಕೆ ಸಾಕ್ಷಿ ಅಂತಿದ್ದಾರೆ ಜನರು.

Comments are closed.