ಮೂರು ಮಕ್ಕಳಿದ್ದರೇ ಜೈಲಿಗೆ ಹಾಕಿ ಎಂದ ಕಂಗನಾ…! ನಿಮ್ಮಪ್ಪ-ಅಮ್ಮನಿಗೆ ಎಷ್ಟು ಮಕ್ಕಳು?! ಎಂದ್ರು ನೆಟ್ಟಿಗರು..!!

ಸದಾಕಾಲ ತಮ್ಮ ಟ್ವೀಟ್ ನಿಂದಲೇ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಬಾಲಿವುಡ್ ನ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಈ ಭಾರಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಸ್ವತಃ ಮೂರು ಮಕ್ಕಳನ್ನು ಹೊಂದಿರುವ ನಿನ್ನ ಪೋಷಕರ ಕತೆ ಏನು ಜನ ಪ್ರಶ್ನಿಸುತ್ತಿದ್ದಾರೆ.

ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ನಿಯಮ ರೂಪಿಸಬೇಕು. ಮೂರು ಮಕ್ಕಳನ್ನು ಹೊಂದಿದ್ದರೇ ಜೈಲಿಗೆ ರವಾನಿಸಬೇಕು ಎಂದು ಟ್ವೀಟ್ ಮಾಡುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕ್ರಮದ ಅಗತ್ಯವಿದೆ. ವೋಟ್ ರಾಜಕಾರಣದಿಂದ ಬೇಸತ್ತು ಹೋಗಿದ್ದೇವೆ. ಈ ಹಿಂದೆ ಇಂದಿರಾಗಾಂಧಿಯವರು ಜನಸಂಖ್ಯೆ ನಿಯಂತ್ರಣಕ್ಕೆ ಬಲವಂತವಾಗಿ ಜನರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾಗಿದ್ದರು. ಬಳಿಕ ಅವರನ್ನು ಗುಂಡಿಟ್ಟು ಕೊಲ್ಲಲಾಯಿತು. ದೇಶದ ಇಂದಿನ ಜನಸಂಖ್ಯೆ ಹಾಗೂ ಬಿಕ್ಕಟ್ಟನ್ನು ಗಮನಿಸಿದಾಗ ಮೂರು ಮಕ್ಕಳನ್ನು ಹೊಂದಿದವರಿಗೆ ದಂಡ ಅಥವಾ ಕನಿಷ್ಠ ಮೂರು ವರ್ಷ ಶಿಕ್ಷೆ ವಿಧಿಸಬೇಕು ಎಂದಿದ್ದಾರೆ.

ಕಂಗನಾ ಈ ಟ್ವೀಟ್ ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು,ಹಲವರು ಕಂಗನಾ ವಿರುದ್ಧ ತೀವ್ರವಾಗಿ ಟೀಕಿಸಿದ್ದಾರೆ.

ಇನ್ನು ಕೆಲವರು ಕಂಗನಾ ಹೇಳಿದ್ದು ಸರಿಯಾಗಿ ದೇಶದ ಅಭಿವೃದ್ಧಿ ದೃಷ್ಟಿಯಿಂದಲೂ ಜನಸಂಖ್ಯೆಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದಿದ್ದಾರೆ.

ಆದರೆ ಜನಸಂಖ್ಯೆ ಬಗ್ಗೆ ಕಠಿಣ ಕ್ರಮವಾಗಬೇಕು ಎಂದು ಟ್ವೀಟ್ ಮಾಡಿರುವ ಬಾಲಿವುಡ್ ಬೆಡಗಿ ಕಂಗನಾ ರನಾವುತ್ ಪೋಷಕರು ಸ್ವತಃ ಮೂರು ಮಕ್ಕಳನ್ನು ಹೊಂದಿದ್ದು, ಕಂಗನಾಗೆ ಒಬ್ಬ ಸಹೋದರಿ ಹಾಗೂ ಸಹೋದರ ಇದ್ದಾರೆ.

ಈ ಸಂಗತಿ ನಿಮಗೆ ನೆನಪಿಲ್ಲವೇ ಎಂದು ಕೆಲವರು ಕುಟುಕಿದ್ದಾರೆ.

Comments are closed.