ಸ್ಯಾಂಡಲ್‌ವುಡ್ ಚಿಟ್ಟೆ ಜೊತೆ ಬಾಲಿವುಡ್ ಹೀರೋ ನಂ೧ ಗಾಯನ…! ಅಣ್ಣಾವ್ರ ಹಾಡಿಗೆ ಧ್ವನಿಯಾದ ಜೋಡಿ…!!

ಕನ್ನಡದ‌ಮೇರುನಟ ಡಾ.ರಾಜ್ ಕುಮಾರ್ ಭಾಷೆ ಗಡಿದಾಟಿ ಎಲ್ಲಿರಿಗೂ ಇಷ್ಟವಾಗೋ ನಟ. ಬಾಲಿವುಡ್ ನ ಹೀರೋನಂ ೧ ಖ್ಯಾತಿಯ ನಟ ಗೋವಿಂದ್ ಡಾ.ರಾಜ್ ಹಾಡಿಗೆ ಧ್ವನಿಯಾಗೋ‌ ಮೂಲಕ ಇದನ್ನು ಸಾಬೀತುಪಡಿಸಿದ್ದಾರೆ.

ಇತ್ತೀಚಿಗೆ ಬಾಲಿವುಡ್ ನಟ ಗೋವಿಂದ್ ಅವರನ್ನು ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ್ ಭೇಟಿ ಮಾಡಿದ್ದರು. ಈ ವೇಳೆ ಹರ್ಷಿಕಾ ಹಾಡೊಂದನ್ನು ಹೇಳುವಂತೆ ಗೋವಿಂದ ಅವರನ್ನು ಕೇಳಿದ್ದಾರೆ.

ಹರ್ಷಿಕಾ ಬೇಡಿಕೆಗೆ ಸ್ಪಂದಿಸಿದ ಗೋವಿಂದ್ ಅವರು ಡಾ.ರಾಜ್ ಕುಮಾರ್ ಅಭಿನಯದ ಎರಡು ಕನಸು ಸಿನಿಮಾದ ಎವರ್ ಗ್ರೀನ್ ಹಾಡು ಎಂದೆಂದೂ ನಿನ್ನನು ಮರೆತು ನಾನಿರಲಾರೆ ಎಂದು ಹಾಡಿದ್ದಾರೆ.

ಈ ವಿಡಿಯೋವನ್ನು ಹರ್ಷಿಕಾ ಪೂಣಚ್ಚ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನ್ನಡಿಗರು,ಡಾ.ರಾಜ್ ಅಭಿಮಾನಿಗಳು ಈ ವಿಡಿಯೋಕ್ಕೆ ಫುಲ್ ಖುಷಿಯಾಗಿದ್ದು ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

https://www.instagram.com/tv/CMv4PvGnZvj/?igshid=1bsrrph6mey46

ಬಾಲಿವುಡ್ ನ ಹೀರೋ ನಂ ಕನ್ನಡದ ಹಾಡು ಹಾಡ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ,ಸೂಪರ್ ಮಾಮ್ಸ್ ಕಾರ್ಯಕ್ರಮದಲ್ಲೂ ಕನ್ನಡದ ಹಾಡುಗಳನ್ನು ಹಾಡುವ ಮೂಲಕ ಗೋವಿಂದಾ ಕನ್ನಡಿಗರ ಮನಸ್ಸು ಗೆದ್ದಿದ್ದರು.

ಇತ್ತೀಚಿಗೆ ಸಾಕಷ್ಟು ಸುದ್ದಿಯಲ್ಲಿರುವ ನಟ ಗೋವಿಂದ ತಾವು ನಾಯಕರಾಗಿದ್ದಾಗ ಬಾಲಿವುಡ್ ನಲ್ಲಿ ಎದುರಿಸಿದ ಸಮಸ್ಯೆ, ತಮ್ಮ ಮೇಲೆ ನಡೆದ ತೇಜೋವಧೆ ಪ್ರಯತ್ನ ಹಾಗೂ ಸಾಕಷ್ಟು ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.

Comments are closed.