ಅಕ್ರಮವಾಗಿ 4,500 ಚದರಡಿ‌‌ ಮನೆ ನಿರ್ಮಾಣಕ್ಕೆ ತಡೆ : ತನಗೆ ಕಾನೂನಿನ ಜ್ಞಾನವೇ ಇಲ್ಲವೆಂದ ಮನೆ ಮಾಲೀಕ..!!!!

ಪುತ್ತೂರು : ಮನೆ‌, ಕಟ್ಟಡ ನಿರ್ಮಾಣಕ್ಕೆ ಸ್ಥಳೀಯಾಡಳಿತದ ಅನುಮತಿ ಪಡೆಯೋದು‌ ಮಾಮೂಲು. ಆದ್ರೆ ಇಲ್ಲೊಬ್ಬರು ಬರೋಬ್ಬರಿ 4, 500‌ ಚದರ ಅಡಿಯ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.‌ ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಮನೆಗೆಯ ಕಾಮಗಾರಿಗೆ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ಆದ್ರೀಗ ಮನೆ ಮಾಲೀಕ ತನಗೆ ಕಾನೂನಿನ ಜ್ಞಾನವಿಲ್ಲ ಅಂತಾ ಪತ್ರ ಬರೆದಿದ್ದಾರೆ. ಮನೆ ಮಾಲೀಕರ ಪತ್ರಕ್ಕೆ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಹಿತ್ತಿಲಮನೆ ನಿವಾಸಿ ಶ್ರೀಧರ ಪೂಜಾರಿ ಎಂಬವರು ಸುಮಾರು ಒಂದೂವರೆ ಕೋಟಿ ರೂಪಾಯಿ ಅಂದಾಜು‌ ವೆಚ್ಚದಲ್ಲಿ ಬರೋಬ್ಬರಿ 4,500 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಎರಡು ಅಂತಸ್ತಿನ ಮನೆಯ ಪೈಕಿ ಬಹುತೇಕ ಕಾಮಗಾರಿ ಮುಕ್ತಾಯಗೊಂಡಿತ್ತು. ಆದರೆ ಕೃಷಿ ಜಮೀನಿನಲ್ಲಿ ಭೂ ಪರಿವರ್ತನೆ ಮಾಡದೆ ಮನೆ ನಿರ್ಮಾಣಕ್ಕೆ ಮುಂದಾಗಿರೋ ಕುರಿತು ಮಂಜುನಾಥ ಸಾಲ್ಯಾನ್ ಎಂಬವರು ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದಾರೆ.

ಅಕ್ರಮ ಮನೆ ನಿರ್ಮಾಣದ ಕುರಿತು ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲೀ ಬಡಗನ್ನೂರು ಗ್ರಾಮ ಪಂಚಾಯತ್ ಮನೆ ನಿರ್ಮಾಣಕ್ಕೆ ತಡೆಯೊಡ್ಡಿದೆ. ಅಲ್ಲದೇ ಶ್ರೀಧರ ಪೂಜಾರಿ ಅವರಿಗೆ ಕಾರಣಕೇಳಿ ನೊಟೀಸ್ ಜಾರಿ ಮಾಡಿದೆ. ಗ್ರಾಮ ಪಂಚಾಯತ್ ನೋಟಿಸ್ ನೀಡುತ್ತಿದ್ದಂತೆಯೇ ಶ್ರೀಧರ ಪೂಜಾರಿ ಅವರು,‌ ತನಗೆ ಕಾನೂನು ಅರಿವಿನ ಕೊರತೆಯಿದೆ. ಹೀಗಾಗಿ‌ ಮೂರು ತಿಂಗಳ ಕಾಲಾವಕಾಶವನ್ನು ನೋಡುವಂತೆ ಅಧಿಕಾರಿಗಳಿಗೆ ಪತ್ರಬರೆದಿದ್ದಾರೆ.

ಗೆಜ್ಜೆಗಿರಿ ವಿವಾದಕ್ಕೆ‌‌ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆಡಳಿತ ಸಮಿತಿಯ ವಿರುದ್ದ ವ್ಯಾಜ್ಯ ಹೂಡಿದ್ದ‌ ಶ್ರೀಧರ ಪೂಜಾರಿ ಅವರು, ಕೋಟ್ಯಾಂತರ ರೂಪಾಯಿ ವ್ಯಯಿಸಿ  ಮನೆ  ನಿರ್ಮಾಣದ‌ ವಿಚಾರದಲ್ಲಿ ತನಗೆ ಕಾನೂನಿನ ಅರಿವು‌ ಇಲ್ಲ ಎಂದಿರುವುದು ಅಧಿಕಾರಿಗಳಿಗೆ ಅಚ್ಚರಿ ‌ಮೂಡಿಸಿದೆ.

ಶ್ರೀಧರ ಪೂಜಾರಿ ಅವರು ಬರೆದಿರುವ ಪತ್ರ ಸಾಮಾಜಿಕ‌ ಜಾಲಾತಾಣ ದಲ್ಲಿಯೂ ವೈರಲ್ ಆಗಿದ್ದು, ಕೋಟಿ ರೂಪಾಯಿ ವೆಚ್ಚದ ಮನೆ ನಿರ್ಮಾಣದ ಕುರಿತು‌ ಚರ್ಚೆಗಳು ಶುರುವಾಗಿದೆ. ಒಟ್ಟಿನಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಬಂಗಲೆ ನಿರ್ಮಾಣಕ್ಕೆ ಮುಂದಾಗಿರುವವರಿಗೆ ಕಾನೂನಿನ ಜ್ಞಾನ ಇಲ್ಲವೆದಿರುವುದಕ್ಕೆ ಅಧಿಕಾರಿಗಳು ಶಾಕ್ ಅಗಿದ್ದಾರೆಮ ಸಾರ್ವಜನಿಕ ದೂರಿನ ಕುರಿತು ಯಾವ ಕ್ರಮಕೈಗೊಳ್ಳುತ್ತಾರೆ‌ ಅನ್ನೋದನ್ನು ಕಾದು ನೋಡಬೇಕಾಗಿದೆ.

Comments are closed.